ಮೆಲ್ಬರ್ನ್: ವಿರಾಟ್ ಕೊಹ್ಲಿ ಅವರು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿಯಾಗಬೇಕೆಂದು ಪಾಕಿಸ್ಥಾನದ ಮಾಜಿ ಸ್ಟಾರ್ ವೇಗಿ ಶೋಯೆಬ್ ಅಖ್ತರ್ ಬಯಸಿದ್ದಾರೆ.
ಭಾರತೀಯ ಬ್ಯಾಟಿಂಗ್ ಮಾಂತ್ರಿಕ ತನ್ನ ಸಂಪೂರ್ಣ ಶಕ್ತಿಯನ್ನು ಕಡಿಮೆ ಸ್ವರೂಪದಲ್ಲಿ ಹಾಕಬಾರದು ಎಂದು ಅಖ್ತರ್ ಅವರು ಹೇಳಿದ್ದಾರೆ.
ಭಾನುವಾರದ ಟಿ 20 ವಿಶ್ವಕಪ್ ಪಂದ್ಯದಲ್ಲಿ ತುಂಬಿದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ಅಜೇಯ 82 ರನ್ ಗಳಿಸಿ ಭಾರತವು ನಾಲ್ಕು ವಿಕೆಟ್‌ಗಳ ರೋಮಾಂಚಕ ವಿಜಯವನ್ನು ಸಾಧಿಸಸಿದ ನಂತರ ಕೊಹ್ಲಿಯನ್ನು ಅಖ್ತರ್ ಶ್ಲಾಘಿಸಿದ್ದಾರೆ.
“ನನ್ನ ಪ್ರಕಾರ, ಅವರು ಪಾಕಿಸ್ತಾನದ ವಿರುದ್ಧ ತಮ್ಮ ಜೀವನದ ಶ್ರೇಷ್ಠ ಇನ್ನಿಂಗ್ಸ್ ಆಡಿದರು. ಮಾಡುತ್ತೇನೆ ಎಂಬ ಆತ್ಮ ವಿಶ್ವಾಸ ಇದ್ದುದರಿಂದಲೇ ಹೀಗೆ ಆಡಿದ್ದಾರೆ”ಎಂದು ಅಖ್ತರ್ ಹೇಳಿದರು.
“ಕಿಂಗ್ ಕೊಹ್ಲಿ ಅವರು ಅಬ್ಬರದಿಂದ ಹಿಂತಿರುಗಿದ್ದಾರೆ. ನಾನು ಅವರಿಗಾಗಿ ನಿಜವಾಗಿಯೂ ಸಂತೋಷವಾಗಿದ್ದೇನೆ. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಅವರು ಟಿ 20 ಯಿಂದ ನಿವೃತ್ತರಾಗಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರು ಟಿ 20 ಕ್ರಿಕೆಟ್‌ನಲ್ಲಿ ತನ್ನ ಸಂಪೂರ್ಣ ಶಕ್ತಿಯನ್ನು ಹಾಕಬೇಕೆಂದು ನಾನು ಬಯಸುವುದಿಲ್ಲ. ಇಂದಿನ ರೀತಿಯ ಬದ್ಧತೆಯೊಂದಿಗೆ, ಅವರು ಏಕದಿನ ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಬಹುದು ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.