ದುಬೈ: ಅಂತೂ ಐಸಿಸಿ ಟಿ20 ವಿಶ್ವಕಪ್ ಮುಗಿದಿದೆ. ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಎಂಟು ವಿಕೆಟ್ ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಮಧ್ಯೆ ಪಾಕಿಸ್ಥಾನದ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೇವಿಡ್ ವಾರ್ನರ್ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿರುವುದು ಅನ್ಯಾಯದ ನಿರ್ಧಾರ ಎಂದು ಅಖ್ತರ್ ಹೇಳಿದ್ದಾರೆ, ವಾರ್ನರ್ ಬದಲು ಪಾಕಿಸ್ಥಾನದ ನಾಯಕ ಬಾಬರ್ ಅಜಂ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಅಖ್ತರ್ ಹೇಳಿದ್ದಾರೆ.
“ಬಾಬರ್ ಅಜಂ ಅವರು ಸರಣಿ ಶ್ರೇಷ್ಠನಾಗುವುದನ್ನು ನೋಡಲು ನಿಜವಾಗಿಯೂ ಎದುರುನೋಡುತ್ತಿದ್ದೆ. ಖಚಿತವಾಗಿಯೂ ಇದು ಅನ್ಯಾಯದ ನಿರ್ಧಾರ” ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ವಾರ್ನರ್ ರನ್ನು ಕೆಣಕುವುದು ಕರಡಿಯನ್ನು ಚುಚ್ಚಿದಂತೆ: ಆಸೀಸ್ ನಾಯಕ ಫಿಂಚ್
ಕೂಟದಲ್ಲಿ ಬಾಬರ್ ಅಜಂ 303 ರನ್ ಗಳಿಸಿದ್ದರೆ, ಡೇವಿಡ್ ವಾರ್ನರ್ ಅವರು 289 ರನ್ ಗಳನ್ನು ಗಳಿಸಿದ್ದಾರೆ.