Advertisement

ಪಾಕ್‌ ಕ್ರಿಕೆಟ್‌ ಮಂಡಳಿಗೆ ಮಾಜಿ ವೇಗಿ ಅಖ್ತರ್‌ ರಾಯಭಾರಿ

06:45 AM Feb 19, 2018 | |

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಶೋಯಿಬ್‌ ಅಖ್ತರ್‌ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್‌ ಮಂಡಳಿ)ಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಅಷ್ಟೇ ಅಲ್ಲ ಅವರನ್ನು ಕ್ರಿಕೆಟ್‌ ಸಂಬಂಧಿತ ವಿಷಯಗಳ ಮಂಡಳಿಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಪಿಸಿಬಿ ನಿರ್ಧಾರವನ್ನು ಅಖ್ತರ್‌ ಸ್ವಾಗತಿಸಿದ್ದಾರೆ. ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು. 42 ವರ್ಷದ ಅಖ್ತರ್‌ ಪಾಕ್‌ ಪರ 46 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ. 25.69 ರನ್‌ ಸರಾಸರಿಯಲ್ಲಿ ಒಟ್ಟಾರೆ 178 ವಿಕೆಟ್‌ ಕಬಳಿಸಿದ್ದಾರೆ. ಅಷ್ಟೇ ಅಲ್ಲ 163 ಏಕದಿನ ಕ್ರಿಕೆಟ್‌ನಲ್ಲಿ ಆಡಿರುವ ಅವರು 24.97 ಸರಾಸರಿಯಲ್ಲಿ ಒಟ್ಟಾರೆ 247 ವಿಕೆಟ್‌ ಕಬಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next