Advertisement

Shivraj Singh Chouhan: ಬೆಳೆ ವಿಮೆ ವಿಳಂಬವಾದರೆ ಶೇ.12 ದಂಡ… ಚೌಹಾಣ್‌

11:09 PM Aug 07, 2024 | Team Udayavani |

ನವದೆಹಲಿ: ಫ‌ಸಲ್‌ ಬಿಮಾ ಯೋಜನೆ ಸಂಬಂಧ ರೈತರಿಗೆ ಯಾವುದೇ ತೊಂದರೆಯಾಗದಂತೆ, ಯೋಜನೆಯನ್ನು ಸರಳೀ ಕರಣಗೊಳಿಸಲು ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. 2023ರಲ್ಲಿ 5.98 ಲಕ್ಷ ಹೆಕ್ಟೇರ್‌ ಜಮೀನು ಬೆಳೆ ವಿಮೆಗೆ ಒಳಪಟ್ಟಿದ್ದರೆ, 3.07 ಕೋಟಿ ರೈತರು ವಿಮೆ ವ್ಯಾಪ್ತಿಯಲ್ಲಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಸತ್ತಿಗೆ ತಿಳಿಸಿದ್ದಾರೆ.

Advertisement

ಈಗ ನಷ್ಟವನ್ನು ಕೇವಲ ವೀಕ್ಷಣಾ ವಿಧಾನದಿಂದ ಮಾತ್ರವಲ್ಲದೇ, ರಿಮೋ ಟ್‌ ಸೆನ್ಸಿಂಗ್‌ ಮೂಲಕ ಕನಿಷ್ಠ ಶೇ.30 ರಷ್ಟು ನಿರ್ಣಯಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹಲವು ಬಾರಿ ವಿಮೆ ಕ್ಲೇಮ್‌ ಪಾವತಿಯಲ್ಲಿ ವಿಳಂಬವಾಗುತ್ತದೆ.

ಹಾಗಾದರೆ ವಿಮಾ ಕಂಪನಿ ಶೇ.12ರ ಷ್ಟು ದಂಡ ಪಾವತಿಸಲಿದ್ದು, ನೇರವಾಗಿ ರೈತರ ಖಾತೆಗೆ ಸೇರುತ್ತದೆ. ಹೆಚ್ಚಿನ ರಾಜ್ಯಗಳು ಪ್ರೀಮಿಯಂ ಸಬ್ಸಿಡಿಯಲ್ಲಿ ತಮ್ಮ ಪಾಲನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವುದೇ ಇದಕ್ಕೆ ಕಾರಣ ಎಂದರು. ರಾಜ್ಯ ಸರ್ಕಾರಗಳ ಪಾಲಿನಿಂದ ಹೊರ ಬಂದಿರುವ ಕೇಂದ್ರ ಸರ್ಕಾರವು, ತನ್ನ ಪಾಲಿನ ಹಣವನ್ನು ರೈತರಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ. ಇದರಿಂದ ಕನಿಷ್ಠ ಕೇಂದ್ರದ ಪಾಲಾದರೂ ರೈತರು ಪಡೆಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next