Advertisement

ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಗೆ ‘ಅವಿರೋಧ ವಿಶ್ವಾಸ’

11:15 AM Mar 27, 2020 | Hari Prasad |

ಭೋಪಾಲ್‌: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ ಶಿವರಾಜ್‌ ಸಿಂಗ್‌ ಚೌಹಾಣ್‌, ಮಂಗಳವಾರ ಸದನದಲ್ಲಿ ತಮ್ಮ ಸರಕಾರದ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ 11 ಗಂಟೆಗೆ ಸದನ ಶುರುವಾದಾಗ ಬಿಜೆಪಿಯ ಸದಸ್ಯರನ್ನು ಹೊರತು ಪಡಿಸಿ, ಪ್ರಮುಖ ವಿಪಕ್ಷ ಕಾಂಗ್ರೆಸ್‌ ಮತ್ತು ಇಬ್ಬರು ಪಕ್ಷೇತರ ಶಾಸಕರು ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಬಿಜೆಪಿಯ ಹಿರಿಯ ನಾಯಕ ಜಗದೀಶ್‌ ದೇವ್ಡಾ, ಧ್ವನಿಮತದ ಮೂಲಕ ವಿಶ್ವಾಸಮತ ಪಡೆಯಲು ಮುಂದಾದರು.

ಆಗ ಮಾತನಾಡಿದ ಚೌಹಾಣ್‌, ಒಂದೇ ಸಾಲಿನಲ್ಲಿ ವಿಶ್ವಾಸಮತ ಯಾಚನೆ ಮಾಡಿದರು. ಇದಕ್ಕೆ ಸದನದಲ್ಲಿ ಹಾಜರಿದ್ದ ಎಲ್ಲ 107 ಬಿಜೆಪಿ ಸದಸ್ಯರು, ಬೆಂಬಲ ವ್ಯಕ್ತಪಡಿಸಿದರು. ಬಿಎಸ್‌ಪಿಯ ಇಬ್ಬರು ಶಾಸಕರು, ಇಬ್ಬರು ಪಕ್ಷೇತರ ಶಾಸಕರು, ಒಬ್ಬ ಎಸ್‌ಪಿ ಶಾಸಕ ಕೂಡ ಚೌಹಾಣ್‌ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಹೀಗಾಗಿ ಚೌಹಾನ್‌ ಅವರು ಅವಿರೋಧವಾಗಿ ವಿಶ್ವಾಸ ಮತ ಗಳಿಸಿದರು. ವಿಶ್ವಾಸಮತ ಪ್ರಕ್ರಿಯೆ ಮುಗಿದ ಮೇಲೆ, ಹಂಗಾಮಿ ಸ್ಪೀಕರ್‌ ದೇವ್ಡಾ ಅವರು ಮಾ. 27ರ ಬೆಳಗ್ಗೆ 11ರವರೆಗೆ ಸದನದ ಕಲಾಪವನ್ನು ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next