ಭೋಪಾಲ್ : ರಾಜಕೀಯ ವಲಯದಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯಾ ಜೊತೆಗೂಡಿ ಶೋಲೆ ಸಿನೆಮಾದ ‘ಏ ದೋಸ್ತಿ, ಹಮ್ ನಹಿ ಛೋಡಂಗೆ’ ಗೀತೆ ಹಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸುದೀರ್ಘ ಕಾಲದ ಸ್ನೇಹವನ್ನು ನೆನಪಿಸಿಕೊಂಡ ರಾಜಕೀಯ ನಾಯಕ ದ್ವಯರು, ಮಧ್ಯಪ್ರದೇಶದ ಭೂತಾನ್ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ‘ಭುಟ್ಟಾ ಪಾರ್ಟಿ’ ಸಮಾರಂಭದಲ್ಲಿ ಕೈ ಕೈ ಹಿಡಿಕೊಂಡು ಈ ಹಾಡನ್ನು ಹೇಳಿ ಸ್ನೇಹ ಸಂಬಂಧವನ್ನು ಪ್ರೀತಿಯಿಂದ ನೆನಪಿಸಿಕೊಂಡದ್ದು ಈಗ ಮಧ್ಯ ಪ್ರದೇಶ ರಾಜಕೀಯ ವಲಯದಲ್ಲಿ ಭಾರಿ ಸೌಂಡ್ ಮಾಡಿದೆ.
ಇದನ್ನೂ ಓದಿ : ಇಂದಿನಿಂದ ಲಾರ್ಡ್ಸ್ ಟೆಸ್ಟ್: ಮಯಾಂಕ್ ಫಿಟ್, ಆರಂಭಿಕ ಜೋಡಿ ಬಗ್ಗೆ ಕೊಹ್ಲಿ ಹೇಳಿದ್ದೇನು?
ಮುಖ್ಯಮಂತ್ರಿ ಚೌಹಾಣ್ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಶ್ರೀಗಂಧವು ಶಾಂತತೆಯನ್ನು ನೀಡುತ್ತದೆ ಎಂದು ನಂಬಲಾಗಿದೆ, ಆದರೆ ಚಂದ್ರನು ಅದಕ್ಕಿಂತ ಹೆಚ್ಚು ಶಾಂತವಾಗಿದ್ದಾನೆ. ಶ್ರೀಗಂಧ ಮತ್ತು ಚಂದ್ರರಿಗಿಂತ ಒಳ್ಳೆಯ ಸ್ನೇಹಿತರ ಒಡನಾಟ ಶಾಂತವಾಗಿದೆ’ ಎಂಬ ಒಂದು ಸಂಸ್ಕೃತ ವಾಖ್ಯಾನದೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು, “ವಿಜಯವರ್ಗಿಯ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಲ್ಲದೇ, ಬಿಜೆಪಿಯ ‘ಯುವ ಮೋರ್ಚಾ’ದಲ್ಲಿ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಯುವ ಮೋರ್ಚಾ ದಲ್ಲಿ ಇರುವಾಗಿನ ಸ್ನೇಹ ಸಂಬಂಧವನನು ‘ಭುಟ್ಟಾ ಪಾರ್ಟಿ’ಯಲ್ಲಿ ನೆನಪಿಸಿಕೊಂಡು ಚೌಹಾಣ್ ಈ ಹಾಡನ್ನು ಹೇಳಿದ್ದರು. ಸುದೀರ್ಘ ಸ್ನೇಹ ಸಂಬಂಧ ಮೊದಲು ಹೇಗಿತ್ತೋ ಇನ್ನೂ ಹಾಗೆ ಇದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಲಹ: ಶೂಟ್ ಮಾಡಿ ತಂದೆಯಿಂದಲೇ ಮಗನ ಹತ್ಯೆ