ಶಿವಮೊಗ್ಗ: ಹಿಜಾಬ್- ಕೇಸರಿ ಶಾಲು ಪ್ರಕರಣದ ತೀರ್ಪು ಬರುವವರೆಗೂ ಶಾಲೆ ಕಾಲೇಜುಗಳಿಗೆ ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಶಿವಮೊಗ್ಗದ ಪ್ರೌಢ ಶಾಲೆಯೊಂದರಲ್ಲಿ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಪ್ರಸಂಗ ಮಂಗಳವಾರ ನಡೆದಿದೆ.
ಹಿಜಾಬ್ ಧರಿಸಿ ಬಂದವರಿಗೆ ಶಾಲಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಎಸ್ ಎಸ್ ಎಲ್ ಸಿ ಪೂರ್ವಸಿದ್ದತಾ ಪರೀಕ್ಷೆಯಿದ್ದರೂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಸ್ ಹೋಗಿದ್ದಾರೆ.
“ನಮಗೆ ಹಿಜಾಬ್ ಮುಖ್ಯ. ಹಿಜಾಬ್ ಗೆ ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುತ್ತೇನೆ” ಎಂದು ಓರ್ವ ವಿದ್ಯಾರ್ಥಿನಿ ಹೇಳಿದ್ದಾಳೆ. ಹೀಗಾಗಿ ವಿದ್ಯಾರ್ಥಿನಿಯನ್ನು ಶಾಲಾ ಸಿಬ್ಬಂದಿ ವಾಪಸ್ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಶಾಲಾ ಕಾಲೇಜುಗಳಲ್ಲಿ ಶಾಂತಿ ವಾತಾವರಣ ಕಾಪಾಡಲು ಸರ್ಕಾರ ಬದ್ಧ: ಸಚಿವ ಆರಗ ಜ್ಞಾನೇಂದ್ರ
ನಿನ್ನೆ ಹಿಜಾಬ್ ಧರಿಸಿ ಬಂದಿದ್ದ 13 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಮನೆಗೆ ಹೋಗಿದ್ದರು. ಆದರೆ ಇಂದು ಶಾಲೆ ಕಡೆಗೆ ಮುಖ ಮಾಡಲಿಲ್ಲ.