Advertisement

ಶಿವಯೋಗಿ ಸಿದ್ದರಾಮೇಶ್ವರವರು ಸಮಾಜಮುಖಿ ಕಾಯಕ ಪುರುಷರಾಗಿದ್ದರು  : ನಹೀದಾ ಜಮ್ ಜಮ್

07:17 PM Jan 17, 2022 | Team Udayavani |

ಕೊರಟಗೆರೆ : ಶಿವಯೋಗಿ ಸಿದ್ದರಾಮೇಶ್ವರವರು 12 ನೇ ಶತಮಾನದಲ್ಲಿಯೇ ನೀರಿನ ಸಂರಕ್ಷಣೆ, ಕೆರೆ ಮತ್ತು ಬಾವಿಗಳ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಯಾಗಿದ್ದ ಅವರು ಜನರಿಂದ ಕಾಯಕ ಪುರುಷ ಎಂದು ಕರೆಸಿಕೊಂಡಿದ್ದರು ಎಂದು ತಹಶಿಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.

Advertisement

ತಾಲ್ಲೂಕು ಆಡಳಿತ ತಾಲ್ಲೂಕಿನ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರವರ 849 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಸಿದ್ದರಾಮೇಶ್ವರವರು 12 ನೇ ಶತಮಾನದಲ್ಲಿಯೇ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡು ಶ್ರಮಾದಾನ, ಸ್ವಯಂ ಸೇವೆಯನ್ನು ಕಾರ್ಯರೂಪಕ್ಕೆ ತಂದಿದ್ದವರಲ್ಲಿ ಮೊದಲಿಗರಾಗಿದ್ದ ಅವರು ಶ್ರೀ ಶೈಲ, ಯಳನಾಡು ಹಾಗೂ ಗೋಡೆಕೆರೆ ಸೇರಿದಂತೆ ಎಲ್ಲೆಲ್ಲಿ ಪಾದಾಯಣ ಮಾಡುತ್ತಿದ್ದರೂ, ಅಲ್ಲಲ್ಲಿ ಒಂದು ಗುಡಿ ಹಾಗೂ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನೂಕೂಲವಾಗುವಂತೆ ದೊಡ್ಡಕೆರೆಗಳನ್ನು ನಿರ್ಮಿಸಿಕೊಂಡು ಬಂದಿದ್ದಾರೆ. 12 ನೇ ಶತಮಾನದಲ್ಲಿ ನಿರ್ಮಿಸಿರುವ ಕೆರೆಗಳು ಇಂದಿಗೂ ಇದ್ದು,ಅವುಗಳಿಂದ ಜನ ಸಾಮಾನ್ಯರಿಗೆ, ರೈತರಿಗೆ ಹಾಗೂ ಪ್ರಾಣಿ ಪಕ್ಷಿಗಳ ಜೀವನಾಡಿಯಾಗಿರುವುದು ವಾಸ್ತವವಾಗಿದ್ದು, ಅವರ ದೂರ ದೃಷ್ಟಿ ಯೋಜನೆ ಮತ್ತು ಕಾರ್ಯಕ್ರಮ ಇಂದಿನ ಜನತೆಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದ ಅವರು ತಾಲ್ಲೂಕು ಬೋವಿ ಸಮುದಾಯ ಭವನಕ್ಕೆ ನಿವೇಶನ ಮಂಜೂರು ಮಾಡಿಸುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯತಿ ಮಾಜಿ. ಉಪಾಧ್ಯಕ್ಷ ಹಾಗೂ ಭೋವಿ ಸಮುದಾಯದ ತಾಲ್ಲೂಕು ಅದ್ಯಕ್ಷರಾದ ಬಿ.ಎಚ್. ವೆಂಕಟಪ್ಪ ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರವರ ಕಾಯಕತ್ವದಲ್ಲಿ ನಂಬಿಕೆಯನಿಟ್ಟವರು, ಕಾಯಕದಿಂದಲೇ ನಮ್ಮ ಅಭಿವೃದ್ಧಿ ಸಾಧ್ಯವೆಂದೂ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದ್ದವರು.ತಮ್ಮ ವಚನಗಳ ಮೂಲಕ ಸಮಾಜದಲ್ಲಿಂತಹ ಅನೇಕ ಕಂದಾಚಾರ, ಮೌಢ್ಯತೆ ಮತ್ತು ನ್ಯೂನ್ಯತೆಗಳನ್ನು ತಿಳಿಹೇಳಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಸಿದ್ದರಾಮೇಶ್ವರವರು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರದೆ ಮನುಕುಲದ ಉದ್ದಾರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಎಂದು ತಿಳಿಸಿದ ಅವರು ತಾಲ್ಲೂಕು ಭೋವಿ ಸುಮದಾಯ ಭವನಕ್ಕೆ ನಿವೇಶನ ನೀಡುವಂತೆ ಮನವಿಗೆ ತಹಶಿಲ್ದಾರ್ ಸ್ಪಂದಿಸಿ ಶೀಘ್ರದಲ್ಲಿ ಸರ್ಕಾರಿ ಜಾಗ ಗುರುತಿಸಿ ಸರ್ಕಾರದಿಂದ ಮಂಜೂರು ಮಾಡಿಸುವ ಭರವಸೆ ನೀಡಿದ ತಹಶಿಲ್ದಾರ್ ಗೆ ಅಭಿನಂದನೆ ಸಲ್ಲಿಸಿದರು.

ಕೋವಿಡ್ ಹಿನ್ನಲೆಯಲ್ಲಿ ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ತುಂಬಾಡಿ ರಾಮಯ್ಯ,ಗ್ರಾಪಂ ಸದಸ್ಯ ನಟರಾಜು, ಸಿದ್ದಪ್ಪ
ಸಮುದಾಯದ ಉಪಾಧ್ಯಕ್ಷ ಅಶ್ವಥಪ್ಪ,ತಾಲ್ಲೂಕು ಕಛೇರಿ ಸಿಬ್ಬಂದಿಗಳಾದ ನಕುಲ್,ರಘು ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next