Advertisement

ವಿಕಲ್ಪವಿಲ್ಲದ ದೃಢಸಂಕಲ್ಪದಿಂದ ದೇವರ ಸಾಕ್ಷಾತ್ಕಾರ: ಡಾ|ಹೆಗ್ಗಡೆ

12:41 AM Mar 01, 2022 | Team Udayavani |

ಬೆಳ್ತಂಗಡಿ: ಪರಿಶುದ್ಧ ಮನಸ್ಸಿನಿಂದ, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿಕಲ್ಪವಿಲ್ಲದೆ ದೃಢ ಸಂಕಲ್ಪದಿಂದ ಮಾಡುವ ಭಕ್ತಿಗೆ ವಿಶೇಷ ಶಕ್ತಿಯಿದ್ದು, ದೇವರ ಸಾಕ್ಷಾತ್ಕಾರವಾಗಿ ಭಕ್ತರು ವಿಶೇಷ ಅನುಗ್ರಹಕ್ಕೆ ಪಾತ್ರರಾಗು ತ್ತಾರೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಧರ್ಮಸ್ಥಳದಲ್ಲಿ ಸೊಮವಾರ ಪ್ರವಚನ ಮಂಟಪದಲ್ಲಿ ಶಿವರಾತ್ರಿ ಸಂದರ್ಭ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಗೌರವಿಸಿ ಅವರು ಮಾತನಾಡಿದರು.

ಪಾದಯಾತ್ರೆಯ ಮಾರ್ಗದರ್ಶಕ ಮತ್ತು ರೂವಾರಿ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ, ಹಾಸನದ ಸಂದೇಶಗೌಡ, ರಂಗೇಗೌಡ, ಸಿದ್ಧಪ್ಪ ಗೌಡ, ಮೋಹನ ಗೌಡ, ಸುರೇಶ ಗೌಡ ಮೊದಲಾದವರನ್ನು ಹೆಗ್ಗಡೆಯವರು ಗೌರವಿಸಿದರು.

ಪಾದಯಾತ್ರಿಗಳ ವತಿಯಿಂದ ಹೆಗ್ಗಡೆ ಯವರನ್ನು ಗೌರವಿಸಲಾಯಿತು. ಹೆಗ್ಗಡೆ ಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸಹಕರಿಸಿದರು.

ಪಾದಯಾತ್ರಿಗಳ ಸಂಗಮ
30 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.

Advertisement

ಇಂದು ರಾತ್ರಿ ಜಾಗರಣೆ
ಶಿವರಾತ್ರಿ ಪ್ರಯುಕ್ತ ಮಂಗಳವಾರ ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಉಪವಾಸ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯುತ್ತದೆ. ಸಂಜೆ 6ಕ್ಕೆ ಪ್ರವಚನ ಮಂಟಪದಲ್ಲಿ ಡಾ| ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸುವರು.

ಇಂದು ಮಹಾಶಿವರಾತ್ರಿ ಸಂಭ್ರಮ
ಮಂಗಳೂರು/ಉಡುಪಿ: ಮಹಾಶಿವರಾತ್ರಿ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಯ ಶಿವ ದೇವಸ್ಥಾನಗಳಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಶಿವಪೂಜೆ, ರುದ್ರಾಭಿಷೇಕ, ವಿಶೇಷ ರಂಗಪೂಜೆ ನಡೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾರುದ್ರಭಿಷೇಕ, ಶತ ಸೀಯಾಳಾಭಿಷೇಕ, ರಾತ್ರಿ ಮಹಾಶಿವರಾತ್ರಿ ಜಾಗರಣೆ, ರಥೋತ್ಸವ, ಕೆರೆದೀಪ ನಡೆಯಲಿದೆ. ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಶಿವರಾತ್ರಿ ಆಚರಣೆ ನಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ, ಆತ್ರಾಡಿಯ ಶ್ರೀ ಮಹಾಲಿಂಗೇಶ್ವರ, ಬೈರಂಪಳ್ಳಿಯ ಸಾಂತ್ಯಾರು ಶ್ರೀ ಮಹಾಲಿಂಗೇಶ್ವರ, ಪರ್ಕಳ ಶ್ರೀ ಮಹಾಲಿಂಗೇಶ್ವರ, ಕುತ್ಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಮುನ್ನಾದಿನ ಸೋಮವಾರ ಹೂವು ಗಳ ವ್ಯಾಪಾರ ಭರ್ಜರಿಯಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next