Advertisement
ಮಹಾ ಶಿವರಾತ್ರಿಯಂದು ಇಡೀ ದಿನ ಶಿವದೇವಾಲಯಗಳಲ್ಲಿ ಶಿವಲಿಂಗಗಳಿಗೆ ವಿಶೇಷ ಪೂಜೆ ನೆರವೇರಿಸುವುದು, ಮನೆ ಮನೆಗಳಲ್ಲಿ ಶಿವ ಜಪ ಪಟಿಸುವುದಾಗಿದೆ. ಶಿವರಾತ್ರಿ ವಿಶೇಷವೆಂದರೆ ಉಪವಾಸ, ಜಾಗರಣೆಯ ಜೊತೆಗೆ ಶಿವ ದೇವಾಲಯಗಳಿಗೆ ಹೋಗಿಪೂಜೆ, ಉತ್ಸವಗಳು, ಅಭಿಷೇಕದಲ್ಲಿ ಭಾಗವಹಿಸುವುದಾಗಿದೆ.
ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥನೆ: ನಗರದ ಬಿ.ಎಚ್ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಸಾಮೂಹಿಕ ಅಭಿಷೇಕ ಕಾರ್ಯ ಕ್ರಮಗಳುನಿರಂತರವಾಗಿ ನಡೆದವು. ಸಾವಿರಾರು ಭಕ್ತರು ಈದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗಗಳ ಮೇಲೆ ಜಲಾಭಿಷೇಕ, ಹಾಲಿನ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅರ್ಚನೆಗಳನ್ನು ಮಾಡುವ ಮೂಲಕ ದೇವರಲ್ಲಿ ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥಿಸಿದರು.
ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ: ಬನಶಂಕರಿ ನಗರದ ಈಶ್ವರ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಾಮೂಹಿಕ ಪೂಜೆ ಸಲ್ಲಿಸಿದರು. ಟಿಜಿಎಂಸಿ ಬ್ಯಾಂಕ್ ಆವರಣದ ಶ್ರೀ ಮಹಾಲಕ್ಷ್ಮೀ ದೇವಾಲ ಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆತಂಬಿಟ್ಟು ಪ್ರಸಾದವನ್ನು ವಿತರಣೆ ಮಾಡಲಾಯಿತು. ವಾಸವಿ ದೇವಾಲಯದಲ್ಲಿ, ಹೊರಪೇಟೆ ನೀಲಕಂಠ ಸ್ವಾಮಿ ದೇವಾಲಯದಲ್ಲಿ, ಶ್ರೀ ಮಹಾಗಣಪತಿ ಶ್ರೀ ನವಗ್ರಹ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆಗಳು ನಡೆದವು. 40 ಅಡಿ ಶಿವಜ್ಯೋತಿರ್ಲಿಂಗ: ನಗರದ ಡಾ.ರಾಧಾ ಕೃಷ್ಣ ರಸ್ತೆಯ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಿಂಗ್ ರಸ್ತೆಯಲ್ಲಿ ಪ್ರಜಾ ಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗ ವಾಗಿ 40 ಅಡಿ ಶಿವಜ್ಯೋತಿರ್ಲಿಂಗದೊಳಗೆ ಝಗ ಮಗಿಸುವ ಭಾರತ ಅದರ ಒಳಗಡೆ ಜ್ಯೋತಿರ್ಲಿಂಗ ದರ್ಶನ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ 21 ಶಿವಲಿಂಗಗಳ ಮೆರವಣಿಗೆ ಸಂಚರಿಸಿತು. ನಗರದ ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ ಕೈಲಾಸ ಮಂಟಪದಲ್ಲಿನ ಶಿವ ಪಾರ್ವತಿಯರನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಭಕ್ತರು ಆಗಮಿಸಿ ದರ್ಶನ ಪಡೆದರು.
ನಗರದ ಕುಣಿಗಲ್ ರಸ್ತೆಯ ಬನಶಂಕರಿಯಲ್ಲಿನ ಮಳೆ ಬಸವಣ್ಣ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಂಚಲಿಂಗ ದರ್ಶನ, ಬಸವನ ಮೇಲೆ ಕುಳಿತ ಶಿವ ಹಾಗೂ ದೇವಾಲಯದ ಆವರಣ ದಲ್ಲಿ ರುವ ಬೃಹತ್ ಶಿವನ ಪ್ರತಿಮೆಗೆ ವಿಶೇಷ ಅಲಂಕಾರ ಹಾ ಗೂ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದರು.
Related Articles
Advertisement