Advertisement

ಶಿವ ಪಾದಕ್ಕೆ ಪಂಚಾಕ್ಷರಿ ಅರ್ಪಣೆ: ಹೆಗ್ಗಡೆ

07:06 PM Mar 14, 2019 | Team Udayavani |

ಬೆಳ್ತಂಗಡಿ: ಕಲಿಯುಗದಲ್ಲಿ ಭಗವಂತನೆಡೆಗಿನ ಆತ್ಮನಿವೇದನೆ ಜಾಗೃತ ಗೊಳ್ಳುವ ಸ್ಮರಣೆಯೇ ಶಿವಜಾಗರಣೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಸೋಮವಾರ ಶಿವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಅಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ದೃಢ ಸಂಕಲ್ಪದೊಂದಿಗೆ ಏಕಾಗ್ರತೆಯಿಂದ ದೇವರ ಭಕ್ತಿಯಲ್ಲಿ ಲೀನವಾದಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ಶಿವನಾಮಸ್ಮರಣೆಯಿಂದ ನೋವು ನಗಣ್ಯವಾಗಿ ಧನ್ಯತೆ ಲಭಿಸುತ್ತದೆ. ಶ್ರದ್ಧೆ, ಆತ್ಮವಿಶ್ವಾಸದಿಂದ ದೇವರ ಕಾಣುವ ಸಂಕಲ್ಪದ ಗುರಿ ಹೊಂದಿದಲ್ಲಿ ಭಗವಂತನ ಸಾûಾತ್ಕಾರವಾಗುತ್ತದೆ ಎಂದರು.

ಸುಖ ಭೋಗಕ್ಕಾಗಿ ನಾವು ಪಂಚೇಂದ್ರಿಯ ಗಳ ದಾಸರಾಗಬಾರದು ಎಂದು ಕಿವಿಮಾತು ಹೇಳಿದ ಅವರು, ಶ್ರವಣ, ಕೀರ್ತನೆ, ಪಾದಸೇವೆ, ಅರ್ಚನೆ, ಧ್ಯಾನ, ಸಕ್ಯ-ಆತ್ಮನಿವೇದನೆ ದೇವರಲ್ಲಿ ಬೇಡುವ ವಿಧಾನ ಎಂದು ಹೇಳಿದರು.
ಹೇಮಾವತಿ ವೀ, ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಪಾದಯಾತ್ರಿಗಳ ಸಂಘದ ನೇತಾರ ಬೆಂಗಳೂರಿನ ಹನುಂತಪ್ಪ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಧವåìಸ್ಥಳ ಗ್ರಾ.ಪಂ. ಸದಸ್ಯ ಶ್ರೀನಿವಾಸ ರಾವ್‌ ಸ್ವಾಗತಿಸಿ, ವಂದಿಸಿದರು. 

ಕರಾವಳಿಯಾದ್ಯಂತ ಶಿವರಾತ್ರಿ
ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯಾದ್ಯಂತ ಮಹಾಶಿವ ರಾತ್ರಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈಶ್ವರ ದೇವಾಲಯ ಸೇರಿದಂತೆ ಕರಾವಳಿಯ ವಿವಿಧ ದೇವಸ್ಥಾನ ಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು.

* ಶಿವರಾತ್ರಿ ಅಂಗವಾಗಿ  ದೇವಸ್ಥಾನ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
* ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ದೇವರ ದರ್ಶನ ಪಡೆದರು.
* ಧರ್ಮಸ್ಥಳದ ನಿವಾಸಿ ಹರೀಶ್‌ ಕೊಠಾರಿ ನೇತ್ರಾವತಿ ನದಿ ಸ್ನಾನಘಟ್ಟದಿಂದ ಧರ್ಮಸ್ಥಳದ ವರೆಗೆ ಉರುಳು ಸೇವೆ ಮಾಡಿದರು. 
* ಮಂಗಳವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next