Advertisement
ಶಿವರಾತ್ರಿ ಅಂಗವಾಗಿ ಶಿವಾಲಯಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ಕೆಂಪೇಗೌಡ ನಗರದ ಐತಿಹಾಸಿಕ ಪ್ರಸಿದ್ಧ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀಸೋಮೇಶ್ವರ ದೇವಾಲಯ, ಮಲ್ಲೇಶ್ವರದ ಶ್ರೀಕಾಡುಮಲ್ಲೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಜೆಪಿನಗರ 7ನೇ ಹಂತದಲ್ಲಿರುವ ಶ್ರೀ ನಂಜುಂಡೇಶ್ವರ ದೇವಾ ಲಯ ಸೇರಿದಂತೆ ಹಲವು ಶಿವಾ ಲಯ ಗಳಲ್ಲಿ ಈಶ್ವರನಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿ ಷೇಕಗಳ ನಡೆದವು.
Related Articles
Advertisement
ಶಿವನಾಮ ಸ್ಮರಣೆ: ಶಿವರಾತ್ರಿಯ ಹಿನ್ನೆಲೆಯಲ್ಲಿ ಉಪವಾಸ, ಜಾಗರಣೆ ಮಾಡಿ ಶಿವಸ್ಮರಣೆ ಮಾಡಿದರು. ಪುರಾಣ ಪಠಣ, ವೇದಾಂತಉಪನ್ಯಾಸ ನಡೆದವು. ಸಂಗೀತೋತ್ಸವದ ಜತೆಗೆ ಅಹೋರಾತ್ರಿ ಶಿವನಾಮ ಜಪ ಜರುಗಿದವು. ರಾತ್ರಿ ಜಾಗರಣೆಗಾಗಿ ನಾನಾ ಸಂಘ ಸಂಸ್ಥೆಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿದ್ದವು. ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಭಜನೆ, ಸತ್ಸಂಗ ನಡೆಯಿತು. ಶ್ರೀ ಶೃಂಗೇರಿ ಶಾರದಾ ಪೀಠಂ ಶಂಕರಪುರಂನ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಗುರುವಾರ ವಿಶೇಷ ಪೂಜೆ, ವೇದಾಶೀರ್ವಾದಗಳು ನೆಡೆದವು. ಹೆಬ್ಟಾಳದ ಚೋಳನಾಯಕನಹಳ್ಳಿಯ ಶ್ರೀಆನಂ ದ ಗಿರಿ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈಶ್ವರನಿಗೆ ವಿಶೇಷ ಪೂಜೆ ಅಲಂಕಾರ ಮಾಡ ಲಾಗಿತ್ತು. ಕೋಟೆ ಶ್ರೀ ಜಲಕಂಠೇಶ್ವರ ದೇವ ಸ್ಥಾನದಲ್ಲಿ ಮಹಾಪ್ರದೋಷ, ನಂದೀಶ್ವರ ಸ್ವಾಮಿಗೆ ಅಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನೆರೆದ ಭಕ್ತರನ್ನು ಆಕರ್ಷಿಸಿದವು. ಮಲ್ಲೇಶ್ವರದ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ ಶಿವರಾತ್ರಿ ಅಂಗವಾಗಿ ಹಮ್ಮಿ ಕೊಂಡಿದ್ದ ಭಜನಾ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಸ್ವಾಮಿ ಬಡಾವಣೆಯ ಬ್ರಾಹ್ಮಣ ಸೇವಾ ಸಂಘದ ಮಹಿಳಾ ವಿಭಾಗದ ಜಯಲಕ್ಷ್ಮಿ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿತು.