Advertisement

ಕಂನಾಡಿಗಾ ನಾರಾಯಣಗೆ ಕಾರಂತ ಪುರಸ್ಕಾರ

06:30 AM Jan 16, 2018 | Team Udayavani |

ಬೆಂಗಳೂರು: ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ಶಿವರಾಮ ಕಾರಂತ ಪುರಸ್ಕಾರ ಪ್ರಸಕ್ತ ಸಾಲಿನಲ್ಲಿ ಸಾಹಿತಿ ಕಂನಾಡಿಗಾ ನಾರಾಯಣ ಅವರ ದ್ವಾಪರ ಕೃತಿಗೆ ಲಭಿಸಿದೆ. 

Advertisement

ಈ ಪುರಸ್ಕಾರವು 10 ಸಾವಿರ ನಗದು ಹಾಗೂ ಫ‌ಲಕ ಹೊಂದಿದೆ. ಫೆ.3 ರಂದು ಮೂಡಬಿದಿರೆಯ ಎಂಸಿಎಸ್‌ ಬ್ಯಾಂಕ್‌ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.

ಕಂನಾಡಿಗಾ ನಾರಾಯಣರವರು 1986ರಿಂದ ಬರವಣಿಗೆ ಆರಂಭಿಸಿ ಮಂಡಲ, ಕ್ಷುದ್ರ ನಕ್ಷತ್ರದ ಕಪ್ಪುರಂಧ್ರ, ಹಸಿರು ಕಣ್ಣಿನ ಹುಡುಗಿ, ನರವಿಂಧ್ಯ, ತಲ್ಲಣದ ಆ ಕ್ಷಣ, ಜೀ ಗಾಂಧಿ, ಇಹದ ಪರಿಮಳ, ಕಥಾ ಸಂಕಲನ, ಆನೆ ಬಂತೊಂದಾನೆ,
ಹುಲಿಯ ಹೆಜ್ಜೆ, ನವಿಲು ಗರಿ, ಮಕ್ಕಳ ಪುಸ್ತಕ, ಕಾಂಡ,ಆಕಾಶ, ಭೂಮಿ ಮೊದಲಾದ ಕಾದಂಬರಿ ಹಾಗೂ ಮನದ ಮೊನೆ ಎಂಬ ವಿಮಶಾì ಗ್ರಂಥ ಬರೆದಿದ್ದಾರೆ.

ಮಹಾಭಾರತವನ್ನು ಆಧುನಿಕ ಮನಸ್ಸಿನಿಂದ ತಳಸ್ಪರ್ಶಿ ಅಧ್ಯಯನ ಮಾಡಿ ಬರೆದಿರುವ ದ್ವಾಪರ ಕೃತಿಗೆ ಕಾರಂತ
ಪುರಸ್ಕಾರ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next