ಲಾಕ್‌ಡೌನ್ ನಂತರ ಶಿವರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಮುಹೂರ್ತ ನಡೆದಿದೆ. ಗುರುವಾರ ಅವರ ಹೊಸ ಚಿತ್ರ ಸೆಟ್ಟೇರಿದ್ದು,ಈ ಚಿತ್ರಕ್ಕೆ “ಶಿವಪ್ಪ’ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆಕಾಯೋ ತಂದೆ ಎಂಬ ಟ್ಯಾಗ್‌ಲೈನ್ ಇದೆ. ಇದು ಶಿವರಾಜ್ ಕುಮಾರ್ ಅವರ 123ನೇ ಸಿನಿಮಾವಾಗಿದ್ದು, ತಮಿಳಿನ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಧನಂಜಯ್, ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. ನಟಿ ಉಮಾಶ್ರೀ ದೊಡ್ಡ ಗ್ಯಾಪ್‌ನ ನಂತರ ಮತ್ತೆನಟನೆಗೆ ಮರಳಿದ್ದಾರೆ. ಚಿತ್ರದಲ್ಲಿ ಶಶಿಕುಮಾರ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದು,10 ವರ್ಷಗಳ ನಂತರ ಶಿವಣ್ಣ ಜೊತೆ ನಟಿಸುತ್ತಿದ್ದಾರೆ.
ತಪ್ಪು ಮಾಡಲು ಹೊರಡೋದೇ ದೊಡ್ಡ ತಪ್ಪು ಎಂಬ ಸಂದೇಶದೊಂದಿಗೆ ಈ ಸಿನಿಮಾ ಮಾಡಲಾಗುತ್ತಿದೆ. ಶಿವರಾಜ್‌ಕುಮಾರ್ ಇಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಮುಂಚೆ ಒಪ್ಪಿಕೊಂಡ ಸಿನಿಮಾ ಇದಾಗಿದ್ದು, ಮತ್ತೆ ಚಿತ್ರೀಕರಣಕ್ಕೆ ಮರಳಿರುವುದರಿಂದ ಶಿವಣ್ಣ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ಕಥೆ ಚೆನ್ನಾಗಿದೆ. ಯಾವಾಗ ಚಿತ್ರೀಕರಣ ಆರಂಭವಾಗುತ್ತದೋ ಎಂದು ನಾನು ಕಾಯುತ್ತಿದ್ದೆ. ಇದು ಪಕ್ಕಾ ವಿಜಯ್ ಮಿಲ್ಟನ್‌ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ.
ಚಿತ್ರ ಸಹಜವಾಗಿ ಬರಲು ಏಕಕಾಲದಲ್ಲಿ ಮೂರು ಕ್ಯಾಮರಾ ಇಟ್ಟು ಚಿತ್ರೀಕರಿಸಿಕೊಳ್ಳುವ ಪ್ಲ್ರಾನ್ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ಏಳು ಫೈಟ್ ಇದ್ದು, ವಿಭಿನ್ನವಾಗಿ ಚಿತ್ರೀಕರಿಸುವ ಯೋಚನೆ ಚಿತ್ರತಂಡದ್ದು. ಒಂದು ವಾರ ಬೆಂಗಳೂರಿನಲ್ಲಿ ಹಾಗೂ ಉಳಿದಂತೆ ಗೋಕರ್ಣದಲ್ಲಿ ಶೂಟಿಂಗ್‌ನಡೆಯಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರವನ್ನುಕೃಷ್ಣ ಕ್ರಿಯೇಶನ್ಸ್‌ನಡಿ ಕೃಷ್ಣ ಸಾರ್ಥಕ್ ನಿರ್ಮಿಸುತ್ತಿದ್ದಾರೆ. ಚಿತ್ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಎಂಟು ತಿಂಗಳ ನಂತರ ಹೊಸ ಸಿನಿಮಾ ತೆರೆಗೆ
ಸದ್ಯಕ್ಕಿಲ್ಲ ಎಸ್‌ಆರ್‌ಕೆ, ಆರ್‌ಡಿಎಕ್ಸ್ : ಶಿವರಾಜ್‌ಕುಮಾರ್‌ಈ ಹಿಂದೆ “ಎಸ್‌ಆರ್ ಕೆ’ ಹಾಗೂ”ಆರ್‌ಡಿಎಕ್ಸ್’ ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ, ಸದ್ಯಕ್ಕೆ ಆ ಸಿನಿಮಾಗಳು ಆರಂಭವಾಗುತ್ತಿಲ್ಲ. ಬೇರೆಬೇರೆ ಕಾರಣಗಳಿಂದ ಆ ಚಿತ್ರಗಳ ಚಿತ್ರೀಕರಣಮುಂದೆ ಹೋಗಿವೆ. ಸದ್ಯ ಶಿವಣ್ಣ “ಶಿವಪ್ಪ’ನಲ್ಲಿ ಬಿಝಿ. “ಭಜರಂಗಿ-2′ ನಂತರ “ಶಿವಪ್ಪ’ ಚಿತ್ರವೇ ತೆರೆಗೆ ಬರಲಿದೆ.
ಕೋವಿಡ್ ಬಳಿಕ ಆರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ : ಶಿವರಾಜ್‌ಕುಮಾರ್ ಕೋವಿಡ್ ಲಾಕ್‌ಡೌನ್ ವೇಳೆ ಸುಮ್ಮನೆ ಮನೆಯಲ್ಲಿಕುಳಿತಿಲ್ಲ. ಸಾಕಷ್ಟು ಸಿನಿಮಾ, ವೆಬ್ ಸೀರಿಸ್‌ಗಳನ್ನು ನೋಡಿದ್ದಾರೆ. ಜೊತೆಗೆ ಹೊಸಕಥೆಗಳನ್ನು ಕೇಳಿದ್ದಾರೆ. ಫೋನ್‌ನಲ್ಲೇ ಕಥೆ ಕೇಳಿ ಇಷ್ಟಪಟ್ಟ ಶಿವಣ್ಣ, ಆರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್‌ಕೊಟ್ಟಿದ್ದಾರೆ. ಹಾಗಾಗಿ, ಹೊಸದಾಗಿ ಶಿವಣ್ಣಕೈಯಲ್ಲಿ ಆರು ಸಿನಿಮಾಗಳಿವೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಕೋವಿಡ್ ಸಮಯದಲ್ಲಿ ನನಗೇನು ಮನೆಯಲ್ಲಿದ್ದು, ಬೇಸರವಾಗಿಲ್ಲ. ನಾನು ಸಾಕಷ್ಟು ಕಥೆ ಕೇಳಿದೆ. ಹೊಸದಾಗಿ ಆರು ಸಿನಿಮಾ ಒಪ್ಪಿಕೊಂಡಿದ್ದೇನೆ. ಆ ಸಿನಿಮಾಗಳ ಬಗ್ಗೆ ಆಯಾ ಸಮಯ ಬಂದಾಗ ಹೇಳುತ್ತೇನೆ’ ಎನ್ನುತ್ತಾರೆ.
ಶಿವರಾಜ್ ಕುಮಾರ್ ಅವರನ್ನೊಳಗೊಂಡ ಚಿತ್ರರಂಗದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ನೆರವು ಬಿಡುಗಡೆಯಾಗಿಲ್ಲ. ಈ ಬಗ್ಗೆ ಮಾತನಾಡುವ ಶಿವರಾಜ್‌ಕುಮಾರ್, “ನಮಗೆ ಸರ್ಕಾರದ ಮೇಲೆ ಭರವಸೆ ಇದೆ. ಸ್ವಲ್ಪ ದಿನ ತಡವಾದರೂ ಚಿತ್ರರಂಗದ ಕಷ್ಟಕ್ಕೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ. ಎಲ್ಲರಿಗೂ ಅವರವರದ್ದೇ ಆದ ಸಮಸ್ಯೆಗಳು ಇರುತ್ತವೆ’ ಎನ್ನುತ್ತಾರೆ ಶಿವಣ್ಣ.
ಗಾಜನೂರಿನ ತೋಟದ ಕೆಲಸ : ಶಿವರಾಜ್‌ಕುಮಾರ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸಿನಿಮಾ ಕೆಲಸದ ಜೊತೆಗೆ ಕೃಷಿ ಕೆಲಸ ಕೂಡಾ ಮಾಡಿದ್ದಾರೆ. ಗಾಜನೂರಿನಲ್ಲಿರುವ ಜಮೀನಿನ ಕೆಲಸವನ್ನು ಮಾಡಿಸಿದ್ದಾರೆ. ಈ ಮೂಲಕ ಕೃಷಿಯತ್ತವೂ ಶಿವಣ್ಣ ಒಲವು ತೋರಿದ್ದಾರೆ.
ರವಿಪ್ರಕಾಶ್ ರೈ