ಇತ್ತೀಚೆಗಷ್ಟೇ “ವೇದ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಶಿವರಾಜಕುಮಾರ್ ಈಗ ಮತ್ತೂಂದು ಹೊಸಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಹಿಂದೆ ಕನ್ನಡ ಕಿರುತೆರೆಯ “ಮಜಾ ಟಾಕೀಸ್’ ರಿಯಾಲಿಟಿ ಶೋ ಮತ್ತು ಸೃಜನ್ ಲೋಕೇಶ್ ಅಭಿನಯದ “ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ವನ್ನು ನಿರ್ದೇಶಿಸಿದ್ದ ತೇಜಸ್ವಿ ಕೆ. ನಾಗ್ ಶಿವರಾಜಕುಮಾರ್ ಅಭಿನಯದ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಹಿಂದೆ “ಶಿವಾರ್ಜುನ’ ಸಿನಿ ಮಾವನ್ನು ನಿರ್ಮಿಸಿದ್ದ “ನಿಶ್ಚಿತ ಕಂಬೈನ್ಸ್’ ಲಾಂಛನದಲ್ಲಿ ಈ ಹೊಸಚಿತ್ರ ನಿರ್ಮಾಣ ವಾಗುತ್ತಿದ್ದು, ಮಂಜುಳಾ ಶಿವಾರ್ಜುನ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
“ಈಗಾಗಲೇ ಈ ಹೊಸಚಿತ್ರದ ಕಥೆಯನ್ನು ಕೇಳಿ ಇಷ್ಟಪಟ್ಟಿರುವ ಶಿವರಾಜಕುಮಾರ್ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜ ಕುಮಾರ್ ಇಲ್ಲಿಯವರೆಗೆ ಮಾಡಿರದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶೀಘ್ರದಲ್ಲಿಯೇ ಈ ಸಿನಿಮಾದ ಟೈಟಲ್, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು’ ಎಂದು ನಿರ್ದೇಶಕ ತೇಜಸ್ವಿ ಕೆ. ನಾಗ್ ತಿಳಿಸಿದ್ದಾರೆ.