Advertisement

‘ಕಬ್ಜ’ದಲ್ಲಿ ಶಿವಣ್ಣ; ಟ್ರೈಲರ್ ರಿಲೀಸ್ ಗೂ ಮೊದಲೇ ನಿರೀಕ್ಷೆಯ ಕಿಡಿ ಹಚ್ಚಿದ ‘ಕಬ್ಜ’

12:22 PM Mar 03, 2023 | Team Udayavani |

ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ‘ಕಬ್ಬ’ ಇದೇ ತಿಂಗಳ 17ರಂದು ರಿಲೀಸ್ ಆಗಲಿದೆ. ಮಾರ್ಚ್ 4ರಂದು ಕಬ್ಜ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಇದೇ ವೇಳೆ ‘ಕಬ್ಜ’ ತಂಡ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದು, ಸೆನ್ಸೇಷನ್ ಸೃಷ್ಟಿಸಿದೆ.

Advertisement

ಹೌದು, ಆರ್,ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ, ಕಿಚ್ಚ ಸುದೀಪ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇರಲಿದ್ದಾರೆ. ಇಂದು ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ಗನ್ ಹಿಡಿದ ಶಿವಣ್ಣನನ್ನು ಕಾಣಬಹುದು.

ಇದನ್ನೂ ಓದಿ:ಕೋಟಿ ಕುಳ; ಬಿಜೆಪಿ ಶಾಸಕ ಮಾಡಾಳ್ ಪುತ್ರನ ಮನೆಯಲ್ಲಿ ಆರು ಕೋಟಿ ರೂ ನಗದು ಪತ್ತೆ

ಮಾರ್ಚ್ 4 ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ ‘ಕಬ್ಜ’ ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Advertisement

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕಬ್ಜ’ ಚಿತ್ರಕ್ಕೆ ಆರ್.ಚಂದ್ರು ಮತ್ತು ಅಲಂಕಾರ್ ಪಾಂಡ್ಯನ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಖತ್ ಹಿಟ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next