Advertisement

ದಲಿತರ ನಾಯಕರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ : ತಂಗಡಗಿ

07:51 PM Nov 10, 2021 | Team Udayavani |

ಕೊಪ್ಪಳ: ದಲಿತ ನಾಯಕರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ನಾರಾಯಣಸ್ವಾಮಿ ಅವರು ತಮ್ಮ ಸ್ವಾರ್ಥಕ್ಕೆ, ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿರುವುದು ನೂರಕ್ಕೆ ನೂರು ಸತ್ಯ. ಇವರೆಲ್ಲ ದಲಿತರಿಗೆ ಏನು ಮಾಡಿದ್ದಾರೆ ಎನ್ನುವುದನ್ನು ಒಂದನ್ನಾದರೂ ಹೇಳಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಸವಾಲ್ ಹಾಕಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯಲ್ಲಿ ದಲಿತ ನಾಯಕರಿಲ್ಲ. ನಮಗೆ ಮಂತ್ರಿ ಸ್ಥಾನ ಸಿಗುತ್ತೆ ಎಂದು ಇವುರೆಲ್ಲ ಹೋಗಿದ್ದಾರೆ. ಇವರು ಗಂಜಿ ಗಿರಾಕಿಗಳು. ಸಿದ್ದರಾಮಯ್ಯರು ಹೇಳಿದ್ದು ನೂರಕ್ಕೆ ನೂರು ಸತ್ಯ. ಬಿಜೆಪಿಗರಿಗೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಾಗ ಕಾರಜೋಳ, ಜಿಗಜಿಣಗಿ, ನಾರಾಯಣಸ್ವಾಮಿ ಅವರು ಕಣ್ಮುಚ್ಚಿ ಕುಳಿತಿದ್ದರಾ ? ಅನಂತಕುಮಾರ ದಲಿತರನ್ನು ಬೊಗಳುವ ನಾಯಿಗಳು, ಬೀದಿ ನಾಯಿಗಳು ಎಂದಾಗ, ಬಿಜೆಪಿ ಎಸ್‌ಸಿ ಮೋರ್ಚಾ ಕಣ್ಮುಚ್ಚಿ ಕುಳಿತಿತ್ತಾ..? ತೇಜಸ್ವಿಯು ಅಂಬೇಡ್ಕರ್ ದೇಶದ್ರೋಹಿ ಎಂದೆಲ್ಲಾ ಹೇಳಿದ್ರು.. ಇಷ್ಟೆಲ್ಲ ಆದ್ರೂ ಬಿಜೆಪಿಯ ದಲಿತ ನಾಯಕರು ಯಾಕೆ ಮಾತನಾಡಲಿಲ್ಲ. ಇವರೆಲ್ಲ ಬಿಜೆಪಿಗೆ ತಮ್ಮ ಹೊಟ್ಟೆ ಪಾಡಿಗಾಗಿ, ಸ್ವಾರ್ಥಕ್ಕಾಗಿ ಹೋಗಿದ್ದಾರೆ. ಆರ್‌ಎಸ್‌ಎಸ್ ಸಂಸ್ಥಾಪಕ ಗೋವಳ್ಕರ್‌ರು ತಮ್ಮ ಪುಸ್ತಕದಲ್ಲಿ ಇಂಗ್ಲೀಷರ ಗುಲಾಮಗಿರಿ ಮಾಡಲು ಸಿದ್ದನಿದ್ದೇನೆ. ಆದರೆ ದಲಿತರಿಗೆ, ಅಲ್ಪಸಂಖ್ಯಾತರಿಗೆ ಸ್ವತಂತ್ರ ಕೊಡುವುದಾದರೆ ನಮಗೆ ಆ ಸ್ವಾತಂತ್ರ್ಯ ಬೇಡ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಬಿಜೆಪಿ ದಲಿತ ನಾಯಕರು ಇದಕ್ಕೆ ಉತ್ತರ ಕೊಡಲಿ ಎಂದರು.

ಬಿಟ್ ಕಾಯಿನ್ ವಿಚಾರವನ್ನು ಮರೆಮಾಚಲು ಬಿಜೆಪಿಗರು ಸಿದ್ದರಾಮಯ್ಯರನ್ನು ದಲಿತ ವಿರೋಧಿ ಎನ್ನುವ ಮಾತನ್ನಾಡುತ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ದಾಖಲೆ ಕೇಳುವ ಬಿಜೆಪಿಗರು ಸರ್ಕಾರ ನಡೆಸುತ್ತಿರುವುದು ಯಾಕೆ ? ಈಶ್ವರಪ್ಪರನ್ನ ಕೇಳಿ ನಾವು ದಾಖಲೆ ಕೊಡಬೇಕಾ..? ಯಾವ ಸಮಯದಲ್ಲಿ ದಾಖಲೆ ಕೊಡಬೇಕು ಕೊಟ್ಟೆ ಕೊಡುತ್ತೇವೆ. ಸಿದ್ದರಾಮಯ್ಯರು ಅಧಿವೇಶನದಲ್ಲಿ ದಾಖಲೆ ಕೊಟ್ಟು ಮಾತನಾಡಲಿದ್ದಾರೆ ಎಂದರು.

ಇದನ್ನೂ ಓದಿ : ಹೋಟೆಲ್ ರುವಾಂಡ : ಹಿಂಸೆಯ ಗಾಢತೆಯಲ್ಲೇ ಮಾನವೀಯತೆಯ ಬಣ್ಣ ಪ್ರದರ್ಶಿಸುವ ಸಿನಿಮಾ

ಬಿಜೆಪಿಗರೆಲ್ಲರೂ ಅಪವಿತ್ರರು !
ಬಿಜೆಪಿಗರೇ ಅಪವಿತ್ರರು. ಎಲ್ಲದರಲ್ಲೂ ಅವರು ಅಪವಿತ್ರರಿದ್ದಾರೆ. ತಮ್ಮಷ್ಟಕ್ಕೆ ತಾವು ಪವಿತ್ರರು, ಚಾರಿತ್ರ್ಯವಂತರು ಎಂದು ಬಿಜೆಪಿಗರೇ ತಿಳಿದುಕೊಂಡಿದ್ದಾರೆ. ಆದರೆ ಅವರಂತ ಅಪವಿತ್ರರು ಯಾರೂ ಇಲ್ಲ. ಇದಕ್ಕೆ ಸಾಕ್ಷಿ ವಿಧಾನಸೌಧದಲ್ಲಿ ನೀಲಿಚಿತ್ರ ನೋಡಿದ್ದು ಯಾರು ? ಎಂದರಲ್ಲದೇ, ಈಶ್ವರಪ್ಪರ ಬಾಯಿನೇ ತುಂಬ ಹೊಲಸಿದೆ. ಅವರ ತಲೆ-ನಾಲಿಗೆಗೆ ಹಿಡಿತವೇ ಇಲ್ಲ ಎಂದರು.

Advertisement

ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು ಎಂದಿದ್ದು, ಆಗ ಅವರು ಏಕೆ ಮಾತನಾಡಲಿಲ್ಲ. ಕುಮಾರಸ್ವಾಮಿ ಅವರೇನು ಮಾಡ್ತಾ ಇದ್ರು..? ಅವರು ವಿಪಕ್ಷದಲ್ಲಿಯೇ ಇದ್ರಲ್ಲ. ಅವರೂ ಸಿಎಂ ಆಗಿ ಕೆಲಸ ಮಾಡಿದ್ದಾರಲ್ಲ. ಮಾಹಿತಿ ಇದ್ರೂ ಯಾಕೆ ಸುಮ್ನೆ ಕುಳಿತಿದ್ರು. ಸಿದ್ದರಾಮಯ್ಯರು ಮಾತನಾಡಿದ ಮೇಲೆ ಏಕೆ ಮಾತನಾಡುತ್ತಿದ್ದಾರೆ ಎಂದರಲ್ಲದೇ, ಬಿಟ್ ಕಾಯಿನ್ ಕುರಿತು ಸರ್ಕಾರ ಯಾವ ಮಾಹಿತಿಯನ್ನೂ ಕೊಡುತ್ತಿಲ್ಲ ಎಂದರು.

ಮುಂದಿನ ಜನೆವರಿ ಒಳಗೆ ಸಿಎಂ ಬೊಮ್ಮಾಯಿ ಅವರನ್ನು ಬಲಾವಣೆ ಮಾಡುತ್ತಾರೆ ಎನ್ನುವ ಸುದ್ದಿಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next