Advertisement

ಹ್ಯಾಟ್ರಿಕ್ ಹೀರೋ ಶಿವಣ್ಣನ 123 ಚಿತ್ರದ ಫಸ್ಟ್ ಲುಕ್ ರಿಲೀಸ್

01:42 PM Jul 10, 2021 | Team Udayavani |

ಬೆಂಗಳೂರು: ಜುಲೈ 12 ಕ್ಕೆ ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ ಅವರ ಜನ್ಮದಿನ. ಶಿವಣ್ಣನ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಅಂದು ಹಲವು ಸಿನಿಮಾಗಳ ಪೋಸ್ಟರ್ ಗಳು ಟೀಸರ್ ಗಳು ರಿಲೀಸ್ ಆಗಲಿವೆ. ಅದರಲ್ಲೂ ಶಿವರಾಜ್ ಕುಮಾರ ಅವರ 123 ಸಿನಿಮಾದ ಟೈಟಲ್ ಲಾಂಚ್ ಆಗಲಿದೆ.

Advertisement

ಹೌದು, ಶಿವಣ್ಣ ಅವರು ನಟಿಸುತ್ತಿರುವ 123ನೇ ಸಿನಿಮಾದ ಫಸ್ಟ್ ಲುಕ್ ಇಂದು (ಜುಲೈ 10) ಬಿಡುಗಡೆಯಾಗಿದೆ. ಔಟ್ ಅಂಡ್ ಔಟ್ ಆಕ್ಷನ್ ಲುಕ್‌ನಲ್ಲಿ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೋಸ್ಟರ್‌ನಲ್ಲೂ ಧನಂಜಯ್ ನೋಡಬಹುದು. ಈ ಚಿತ್ರದ ಶೀರ್ಷಿಕೆ  ಜುಲೈ 12ಕ್ಕೆ ಅನಾವರಣಗೊಳ್ಳಲಿದೆ.

ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ನಿರ್ದೇಶಕ ವಿಜಯ್ ಮಿಲ್ಟನ್ ಈಗ ಕೊನೆಯ ಹಂತದ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಕೆಲವು ಆಕ್ಷನ್ ದೃಶ್ಯಗಳು ಹಾಗೂ 20 ನಿಮಿಷದ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಇದು ಕೊನೆಯ ಶೆಡ್ಯೂಲ್ ಎಂದು ಸ್ವತಃ ವಿಜಯ್ ಮಿಲ್ಟನ್ ಹೇಳಿದ್ದರು.

ಶಿವರಾಜ್ ಕುಮಾರ್, ಡಾಲಿ ಧನಂಜಯ್ ಜೊತೆ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೃಷ್ಣ ಸಮರ್ಥ್ ಬಂಡವಾಳ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next