ರಾಮನಗರ: ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಪಿ. ಶಿವಪ್ಪ ಅವಿರೋಧ ಆಯ್ಕೆಯಾದರು. ಮಾಜಿ ಅಧ್ಯಕ್ಷ ಎಲ್. ಉಮಾಶಂಕರ್ ಅವರ ರಾಜೀನಾಮೆುಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಪಿ. ಶಿವಪ್ಪ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಶಿವಪ್ಪ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಟಿ. ಉಮೇಶ್ ಘೋಷಿಸಿದರು.
ನೂತನ ಅಧ್ಯಕ್ಷ ಎಚ್.ಪಿ.ಶಿವಪ್ಪ ಮಾತನಾಡಿ, ನಮ್ಮ ಸಂಘದಿಂದ 40 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇದುವರೆಗೂ ರೈತರಿಗೆ ಸಂಘದಿಂದ 7 ಲಕ್ಷ ರೂ. ಕೆಸಿಸಿ ಬೆಳೆ ಸಾಲವನ್ನು ನೀಡಲಾಗಿದೆ. ಸಂಘದ ವ್ಯಾಪ್ತಿಯ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 2 ಕೋಟಿ ಸಾಲವನ್ನು ನೀಡಲಾಗಿದ್ದು, ಸಂಘವು ಲಾಭದಾಯಕವಾಗಿ ನಡೆಯುತ್ತಿದೆ ಎಂದರು.
ನಿರ್ದೇಶಕರ ಸಹಕಾರ ಅಗತ್ಯ: ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇ ಕೆಂದು ಮನವಿ ಮಾಡಿದ ಅವರು, ಬಿಡಿಸಿಸಿ ಬ್ಯಾಂಕ್‌ನಿಂದ ನಮ್ಮ ಸಂಘಕ್ಕೆ ಸಿಗುವ ಸವಲ ತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರ ಮತ್ತು ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರ ಅಗತ್ಯವಾಗಿದ್ದು, ಎಲ್ಲರ ಸಹಕಾರದಿಂದ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘವನ್ನು ಮಾದರಿ ಸಂಘವಾಗಿ ರೂಪಿಸಲಾಗುವುದು ಎಂದರು.
ನೂತನ ಅಧ್ಯಕ್ಷರಿಗೆ ಅಭಿನಂದನೆ: ಕಾಂಗ್ರೆಸ್ ಮುಖಂಡ ದೊಡ್ಡವೀರೇಗೌಡ, ಲಕ್ಕಸಂದ್ರ ಗುಂಡಣ್ಣ ಸೇರಿದಂತೆ ಹಲವರು ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಈ ವೇಳೆ ಮಾಜಿ ಅಧ್ಯಕ್ಷ ಎಲ್.ಉಮಾಶಂಕರ್, ಉಪಾಧ್ಯಕ್ಷೆ ಎ.ಸಿ.ಶಾಂತಮ್ಮ, ನಿರ್ದೇಶಕರಾದ ಎಚ್.ಎಸ್. ಸುರೇಂದ್ರನಾಥ ಶರ್ಮ, ಎಸ್.ವಿ. ಗಂಗಾಧರ ಚಾರ್, ಕೆ.ಎಸ್.ಉಮೇಶ್, ಎಸ್. ಗಂಗಾಧರಯ್ಯ, ಗಿರಿಜಮ್ಮ, ಅಂಜನಾಚಾರ್, ಬಿ.ನಾಗರಾಜಯ್ಯ, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎಲ್ .ಪ್ರಕಾಶ್, ಮಾರಾಟ ಗುಮಾಸ್ತ ಎಸ್.ಸಿದ್ದಯ್ಯ, ಸಹಾಯಕ ಎಸ್.ಮಲ್ಲಪ್ಪ, ಡಿ.ಚೈತ್ರ ಇದ್ದರು.