Advertisement

26 ವರ್ಷ ಬಳಿಕ ಮನೆಗೆ ಮರಳಿದ ಶಿವಪ್ಪ

01:45 AM May 08, 2021 | Team Udayavani |

ಬೆಳ್ತಂಗಡಿ: ಕಾಣೆಯಾದ ವ್ಯಕ್ತಿಯೊಬ್ಬ ಒಂದೆರಡಲ್ಲ 26 ವರ್ಷ ಗಳ ಬಳಿಕ ಕುಟುಂಬವನ್ನು ಸೇರಿದ ಘಟನೆ ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಮಂದಿಯ ಸಂತಸದ ಕ್ಷಣಕ್ಕೆ ಕಾರಣವಾಗಿದೆ. ಇಲ್ಲಿನ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದವರು.

Advertisement

ಹೊಟೇಲ್‌ ಕೆಲಸಕ್ಕೆ ಸೇರಿದ್ದರು ಶಿವಪ್ಪ ಪೂಜಾರಿಯವರು ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದರು. ಬಡತನದ ಸನ್ನಿವೇಶದಿಂದ ಮನೆ ಬಿಟ್ಟು ಹೋಗಿದ್ದ ಅವರು ಆರಂಭದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಈ ವೇಳೆ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಉದ್ಯೋಗ ಅರಸುತ್ತ ತರಿಕೆರೆ, ಮೈಸೂರು ಕಡೆಗಳಲ್ಲಿ ನೆಲೆ ಸಿದ್ದು, ಮನೆಮಂದಿ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಹುಡುಕಾಟ ನಡೆಸಿದರೂ ಮಗ ಸಿಗದೆ ಇದ್ದಾಗ ಬರುವ ನಿರೀಕ್ಷೆಯಲ್ಲೆ ದಿನ ಕಳೆದಿದ್ದರು. ಆದರೆ ಸುದೀರ್ಘ‌ ಸಮಯದ ಬಳಿಕ ಮಗ ಮರಳುತ್ತಾನೆ ಎಂಬ ನಿರೀಕ್ಷೆ ಮನೆ ಮಂದಿಯಲ್ಲಿರಲಿಲ್ಲ.

ಪ್ರಸ್ತುತ ಮೈಸೂರಿನ ಹೊಟೇಲೊಂದ ರಲ್ಲಿ ಬಾಣಸಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ಅವರು ತರಿಕೆರೆಯ ಮೀನಾಕ್ಷಿಯವ ರೊಂದಿಗೆ ವಿವಾಹವಾಗಿದ್ದೇನೆ ಎಂದು ಹೇಳುತ್ತಿದ್ದು, ಪುತ್ರ ಪ್ರಸನ್ನ ಕುಮಾರ್‌, ಮಗಳು ಪ್ರಾರ್ಥನಾರೊಂದಿಗೆ ವಾಸ್ತವ್ಯವಿದ್ದರಂತೆ. ಇದೀಗ ಲಾಕ್‌ಡೌನ್‌ನಿಂದಾಗಿ ಹೊಟೇಲುಗಳು ಮುಚ್ಚಿರು ವುದರಿಂದ ಬಂಟ್ವಾಳಕ್ಕೆ ಬಂದಿದ್ದರು.

ವಾಟ್ಸ್‌ ಆ್ಯಪ್‌ ನೆರವು :

ಬಂಟ್ವಾಳ ಸಮೀಪದ ಮಾರಿಪಳ್ಳ ಬಸ್‌ ನಿಲ್ದಾಣದಲ್ಲಿ ಶಿವಪ್ಪ ಪೂಜಾರಿ ಯವರು ಅಸ್ವಸ್ಥಗೊಂಡು ಬಿದ್ದಿದ್ದರು. ತತ್‌ಕ್ಷಣ ಸ್ಥಳೀಯರು ಆರೈಕೆ ಮಾಡಿ ಊಟ ಕೊಡಿಸಿ ಮನೆ ವಿಚಾರಿಸುವಾಗ ಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು. ತತ್‌ಕ್ಷಣ ಸ್ಥಳೀಯ ರೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಅವರ ವಿವರ, ಫೋಟೋ ಹಾಕಿದ್ದರು. ಇದನ್ನು ಗಮನಿಸಿ ಬೆಳಾಲಿನ ಯುವಕರು ಮನೆಮಂದಿಯನ್ನು ಸಂಪರ್ಕಿಸಿದಾಗ ಕಾಣೆಯಾಗಿದ್ದ ವಿಚಾರ ಖಚಿತವಾಗಿತ್ತು.

Advertisement

ತತ್‌ಕ್ಷಣ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್‌, ಕಬೀರ್‌, ಫ‌ರಂಗಿಪೇಟೆಯ ಅಧ್ಯಾಪಕ ಮುಸ್ತಪ ಕೌಸರಿ ಅವರ ನೆರವಿನೊಂದಿಗೆ ಶಿವಪ್ಪರವರ ಓಡಿಪ್ರೊಟ್ಟು ಮನೆಯ ಸಹೋದರರು, ಸಂಬಂಧಿಕರು ಬಂಟ್ವಾಳಕ್ಕೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದರು.

ಶಿವಪ್ಪ ಅವರ ತಂದೆ, ತಾಯಿ ಇಬ್ಬರೂ 3 ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದು ಈಗ ಹಳೇ ಮನೆಯಲ್ಲಿ ಸಹೋದರನೊಂದಿಗೆ ವಾಸವಿದ್ದಾರೆ. ಕೋವಿಡ್‌ ಕಾರಣ ದಿಂದ ಪ್ರತ್ಯೇಕ ವಾಸ್ತವ್ಯ ಕಲ್ಪಿಸಿದ್ದಾರೆ. ಕಳೆದ 26 ವರ್ಷಗಳ ಮನೆ ಮಗ ಮರಳಿರುವ ಸಂತೋಷದಲ್ಲಿ ಕುಟುಂಬವಿದ್ದು, ಇತ್ತ ಶಿವಪ್ಪ ಅವರು ಮನೆ ಮಂದಿಯೊಂದಿಗೆ ಸಂತೋಷವಾಗಿ ಸಮಯ ಕಳೆ ಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next