Advertisement

ಉ.ಕ.ಕ್ಕೆ ಸಭಾಪತಿ ಸ್ಥಾನ ಸಿಗಬೇಕಿತ್ತು: ಪಾಟೀಲ

10:46 AM Dec 16, 2018 | |

ಬಾಗಲಕೋಟೆ: “ವಿಧಾನ ಪರಿಷತ್‌ ಸಭಾಪತಿ ಸ್ಥಾನ ಉತ್ತರ ಕರ್ನಾಟಕದ ಎಸ್‌. ಆರ್‌.ಪಾಟೀಲ ಅಥವಾ ಬಸವರಾಜ ಹೊರಟ್ಟಿ ಅವರಿಗೆ ದೊರೆಯಬೇಕಿತ್ತು. ಆದರೆ, ಹೈಕಮಾಂಡ್‌ ಮಟ್ಟದಲ್ಲಿ ಏನಾಗಿದೆ ಎಂಬುದು
ನನಗೆ ಗೊತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಪಾಟೀಲ ಮತ್ತು ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ
ಮುಂಚೂಣಿಯಲ್ಲಿದ್ದರು. ಆದರೆ, ಇವರಿಬ್ಬರನ್ನೂ ಬಿಟ್ಟು ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ. ಅದು ಹೈಕಮಾಂಡ್‌ ನಿರ್ಧಾರ. ಈ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡಿಲ್ಲ. ಉತ್ತರ ಕರ್ನಾಟಕದ ಶಾಸಕರು ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿದ್ದಾರೆಂಬ ವಿಷಯವೂ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.

ಪರಿಷತ್‌ನ ಸಭಾಪತಿ ಸ್ಥಾನ ನಮ್ಮ ಭಾಗಕ್ಕೆ ಸಿಕ್ಕಿಲ್ಲ. ಹೀಗಾಗಿ, ಸಚಿವ ಸಂಪುಟ ವಿಸ್ತರಣೆ ವೇಳೆ ನಮ್ಮ ಭಾಗಕ್ಕೆ ಹೆಚ್ಚಿನ ಸ್ಥಾನ ನೀಡಲು ಒತ್ತಾಯಿಸಿದ್ದೇನೆ. ಈ ಭಾಗದವರಿಗೆ ಹೆಚ್ಚು ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ನಮಗಿದೆ.
ಶಿವಾನಂದ ಪಾಟೀಲ, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next