ಕಲಬುರಗಿ: ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಆದಿಶಕ್ತಿ ಅವತಾರದ ಮೂಲ ಉದ್ದೇಶವಾಗಿದೆ ಎಂದು ಸ್ಟೇಶನ್ ಬಬಲಾದನ ಶ್ರೀ ಶಿವಮೂರ್ತಿ ಶಿವಾಚಾರ್ಯರು ನುಡಿದರು.
ನಗರದ ಘಾಣದೇವತೆ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ವೀರಸೋಮೇಶ್ವರ ಸಾಹಿತ್ಯ, ಸಾಂಸ್ಕೃತಿಕ ಸೇವಾ ಸಂಘ 7ನೇ ವಾರ್ಷಿಕೋತ್ಸವ ಅಂಗವಾಗಿ ಮಾತನಾಡಿ, ಜನರಲ್ಲಿ ಸಾತ್ವಿಕ ಶಕ್ತಿ ಹಾಗೂ ವಿಶಾಲ ಮನೋಭಾವನೆ ಬೆಳೆಸುವ ಕಾರ್ಯವಾಗಬೇಕು ಎಂದರು.
ಮನುಷ್ಯನ ಅಂಧಕಾರ ಕಳೆಯಲು ದೇವಿ ಆರಾಧನೆ ಮಾಡಬೇಕು. ಈ ಸಂಸ್ಥೆಯಿಂದ ಸಮಾಜಸೇವೆ ಮಾಡುತ್ತಿರುವವನ್ನು ಸತ್ಕರಿಸುವುದು ಒಳ್ಳೆಯ ಕಾರ್ಯವಾಗಿದೆ ಎಂದರು.
ಅಣ್ಣರಾವ್ ಶೆಳ್ಳಗಿ, ಬಾಬುರಾವ್ ಕೋಬಾಳ, ಪವಿತ್ರಾ ರಾಜನಾಳ, ವೀರಭದ್ರಯ್ಯ ಸ್ಥಾವರಮಠ, ಗುರುಲಿಂಗಯ್ಯ ಹತ್ತಿಲಶಿರೂರ, ಸೂರ್ಯಕಾಂತ ಪೂಜಾರಿ, ಆಕಾಶವಾಣಿ ಕಲಾವಿದರಿಂದ ಸಂಗೀತ ಜರುಗಿತು. ಬಸವರಾಜ ಶೆಟಗಾರ, ಮಲ್ಲಿನಾಥ ಬೊಳಶೆಟ್ಟಿ, ಭೀಮಾಶಂಕರ ಚಕ್ಕಿ, ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ, ಗುರುಶಾಂತ ಪ್ರೇಮನಾಥ ಟೆಂಗಳಿ, ಅಂಬಾದಾಸ ಸೂರ್ಯವಂಶಿ, ಗಂಗಾಧರಯ್ಯ ಸ್ವಾಮಿ ಅಗ್ಗಿಮಠ, ಗುರುಲಿಂಗಯ್ಯ ಹಿತ್ತಲಶಿರೂರ ಅವರಿಗೆ ವೀರಸೋಮೇಶ್ವರ ಸಂಪದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭೀಮರಾವ್ ಓಕಳಿ, ಬಸವರಾಜ ಕೊಳಕೂರ, ಕಾಶೀನಾಥ ಮಡಕಿ, ಶಿವಾನಂದ ಯಳವಂತಗಿ, ಶಿವಶರಣಯ್ಯ ಸ್ವಾಮಿ, ಸಿದ್ರಾಮಪ್ಪಾ ಆಲಗೂಡಕರ ಅವರನ್ನು ಶ್ರೀಗಳು ಸತ್ಕರಿಸಿದರು. ಎಚ್. ಸುಭಾಷ ಸ್ವಾಗತಿಸಿದರು, ಶಿವಯ್ಯ ಮಠಪತಿ ನಿರೂಪಿಸಿದರು.