Advertisement

Shivamogga: ಸಾಗರ ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ, ನೂರು ಹಾಸಿಗೆ ವ್ಯವಸ್ಥೆ: ಶಾಸಕ ಬೇಳೂರು

06:25 PM Sep 05, 2024 | Esha Prasanna |

ಆನಂದಪುರ: ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಪಡಿಸುವ ಜೊತೆಗೆ ಸಾಗರ ಜನರಲ್ ಆಸ್ಪತ್ರೆಗೆ ನೂರು ಹಾಸಿಗೆಯ ವ್ಯವಸ್ಥೆ ಕಲ್ಪಿಸಿ ಮೇಲ್ದರ್ಜೆಗೇರಿಸುವುದೇ ನನ್ನ ಗುರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಿಸಿ ಮಾತನಾಡಿ ಸಾಗರ ಜನರಲ್ ಆಸ್ಪತ್ರೆಗೆ  ಶಿಕಾರಿಪುರ, ಸೊರಬ ಹಾಗೂ ಸಿದ್ದಾಪುರ ಭಾಗಗಳಿಂದ ರೋಗಿಗಳು ಬರುತ್ತಿದ್ದು, ಎಲ್ಲಾ ರೋಗಿಗಳಿಗೂ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರ ತಂಡ ಸಾಗರದಲ್ಲಿದ್ದು, ಇದನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ 1 ಕೋಟಿ 42 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಇತರ ಆರೋಗ್ಯ ಕೇಂದ್ರಗಳಿಗೂ ಅನುದಾನ: 
ಹಾಗೆಯೇ ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ 60 ಲಕ್ಷ ರೂ., ಗೌತಮಪುರ ಆರೋಗ್ಯ ಕೇಂದ್ರಕ್ಕೆ 30 ಲಕ್ಷ ರೂ., ಬಂದಗದ್ದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 30 ಲಕ್ಷ ರೂ. ಅನುದಾನಗಳ  ಒದಗಿಸಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಆವಿನಹಳ್ಳಿ , ತುಮರಿ, ರಿಪ್ಪನ್ ಪೇಟೆ, ಹೊಸನಗರ ಆಸ್ಪತ್ರೆಗಳ ಅಭಿವೃದ್ಧಿ ಕೈಗೊಂಡರೆ ಈ ಭಾಗದ ರೋಗಿಗಳು ಸ್ಥಳೀಯ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರಿಂದ ಸಾಗರ ಜನರಲ್ ಆಸ್ಪತ್ರೆಗೆ ಬರುವ ರೋಗಿಗಳ ಒತ್ತಡ ಕಡಿಮೆಯಾಗುವ ದೃಷ್ಟಿಯಿಂದ ಕ್ಷೇತ್ರದ  ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ  ಶ್ರಮಿಸುತ್ತಿದ್ದೇನೆ ಎಂದರು.

ಆಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆ ನಿಷೇಧ:
ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸೇವೆ ಉತ್ತಮವಾಗಿದ್ದು, ಇರುವ ವೈದ್ಯರಿಂದ ಈ  ಭಾಗದ ಜನರು ಉತ್ತಮ ಸೇವೆ ಪಡೆಯಬೇಕು. ಆಸ್ಪತ್ರೆಯ ಆವರಣದಲ್ಲಿ ವಾಹನಗಳ ನಿಲುಗಡೆಯ ಸಂಪೂರ್ಣ ನಿಷೇಧಿಸಿದ್ದು ಆಸ್ಪತ್ರೆಗೆ ಬರುವಂತಹ ರೋಗಿಗಳು ಹಾಗೂ ಸಿಬ್ಬಂದಿಗಳ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಪಾರ್ಕಿಂಗ್ ಮಾಡಿದರೆ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಕುಮಾರಿ, ಸೋಮಶೇಖರ್ ಲೌಗೆರೆ, ಎನ್. ಉಮೇಶ್, ರೆಹಮತ್ತುಲ್ಲಾ, ಆನಂದಪುರ ಪಂಚಾಯತ್ ಸದಸ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next