ಶಿವಮೊಗ್ಗ: ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮೇಯರ್, ಉಪ ಮೇಯರ್, ಕಾರ್ಪೊರೇಟರ್‌ಗಳೆಲ್ಲ ಈ ರಸ್ತೆಯಲ್ಲಿ ಓಡಾಡುತ್ತಾರೆ. ಪ್ರತಿದಿನ ನಿರಂತರ ವಾಹನ ದಟ್ಟಣೆ ಇರುವ ರಸ್ತೆ ಇದು. ಆದರೆ ರಸ್ತೆಯ ಒಂದು ತುದಿಯಿಂದ ಮತ್ತೂಂದು ತುದಿಗೆ ಬರಿ ಗುಂಡಿಗಳೇ ತುಂಬಿವೆ.
ಇದು ಬಿಜೆಪಿ ಕಚೇರಿ ಮತ್ತು ಜ್ಯೂಯಲ್ ರಾಕ್ ಹೊಟೇಲ್ ಮುಂಭಾಗ ಇರುವ ದೀನದಯಾಳ್ ಉಪಾದ್ಯಾಯ ರಸ್ತೆಯ ದುಸ್ಥಿತಿ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ಪ್ರಮುಖರೆಲ್ಲ ಓಡಾಡುವ ರಸ್ತೆಯಾದರೂ, ಇಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಸಿಗುತ್ತವೆ.
ಈ ಗುಂಡಿಗಳ ಕಾರಣದಿಂದ ವಾಹನಗಳು ಚಲಾಯಿಸಲು ಚಾಲಕರು ಹರಸಾಹಸ ಮಾಡಬೇಕಾಗಿದೆ. ಬೈಕ್ ಸವಾರರಂತೂ ಯಾವ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬೀಳುತೇ¤ವೋ ಎಂದು ಆತಂಕದಿಂದ ವಾಹನ ಚಲಾಯಿಸಬೇಕಿದೆ. ರಸ್ತೆಯಲ್ಲಿ ಗುಂಡಿ ಬಿದ್ದು ರಸ್ತೆ ಮೇಲೆಲ್ಲಾ ಕಲ್ಲುಗಳು ಬಿದ್ದಿವೆ. ಇದೆ ರಸ್ತೆಯಲ್ಲಿ ಸಂಚರಿಸುವಾಗ ಬೈಕ್ ಸವಾರರೊಬ್ಬರು ಬಿದ್ದು, ಕಾಲು ಫ್ರಾಕ್ಚರ್ ಆಗಿದೆ. ವಾಹನಗಳು ಹೋಗುವಾಗ ಕಲ್ಲುಗಳು ಸಿಡಿದು, ಅಕ್ಕಪಕ್ಕದ ಹೊಟೇಲ್, ಕಚೇರಿಗಳ ಗ್ಲಾಸ್ ಗಳು ಹಾನಿಗೊಳಗಾಗುತ್ತಿವೆ ಅನ್ನುತ್ತಾರೆ ರಮೇಶ್ ರಾವ್.
ಪ್ರಮುಖರು ಓಡಾಡುವ ರಸ್ತೆಯ ಕಥೆಯೆ ಹೀಗಾದರೆ ಉಳಿದ ರಸ್ತೆಗಳ ಗತಿಯೇನು ಅಂತಿದ್ದಾರೆ ಸ್ಥಳೀಯರು. ಶೀಘ್ರ ರಸ್ತೆಯ ಗುಂಡಿಗಳನ್ನು ಮುಚ್ಚಿ, ಮತ್ತಷ್ಟು ಹಾನಿ ತಪ್ಪಿಸಬೇಕು ಅನ್ನುವುದು ಇವರ ಡಿಮಾಂಡ್.
ನೆಹರು, ಕುವೆಂಪು ರಸ್ತೆ, ದುರ್ಗಿಗುಡಿ, ನಗರದ ಮಧ್ಯ ಭಾಗದ ಅನೇಕ ಜನರು ಸಾಗರ ರಸ್ತೆಗೆ ಸಂಪರ್ಕಿಸಲು ಇದೇ ರಸ್ತೆ ಬಳಸುತ್ತಾರೆ. ಸಾಗರ ಕಡೆಯಿಂದ ಬರುವವರು ಇದೇ ಮಾರ್ಗವಾಗಿ ಗೋಪಿ ಸರ್ಕಲ್ ಕಡೆ ಹೋಗುತ್ತಾರೆ. ಈ ರಸ್ತೆಯಲ್ಲಿ ಜ್ಯುವೆಲ್ ರಾಕ್, ಸೂರ್ಯ ಕಂಫರ್ಟ್ಸ್, ಅನ್‌ಮೋಲ್ ಇತರೆ ಹೊಟೇಲ್‌ಗಳು
ಇದೇ ರಸ್ತೆಯಲ್ಲಿವೆ. ರಾಜ್ಯದ ಅನೇಕ ಕಡೆಯಿಂದ ಬರುವ ಪ್ರವಾಸಿಗರು ಇದೇ ಹೋಟೆಲ್‌ಗಳಲ್ಲಿ ತಂಗುತ್ತಾರೆ. ಪ್ರತಿಷ್ಠಿತ ಹೋಟೆಲ್‌ಗಳಿದ್ದರೂ ರಸ್ತೆಗಳು ಮಾತ್ರ ತೀರಾ ಕಳಪೆ ದರ್ಜೆಯಲ್ಲಿವೆ.