ಶಿವಮೊಗ್ಗ: ಒಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿವಿಳಂಬ, ಮತ್ತೂಂದು ಕಡೆ ಪದೇ ಪದೇರಸ್ತೆಗಳನ್ನು ಅಗೆಯುವುದು, ಸಮರ್ಪಕ ಚರಂಡಿವ್ಯವಸ್ಥೆ ಇಲ್ಲದಿರುವುದರಿಂದಲೂ ಸಮಸ್ಯೆಎದುರಿಸುವಂತಾಗಿದೆ.
ಇದೀಗ ಕುಡಿಯುವ ನೀರಿನಸಮಸ್ಯೆ ಎಲ್ಲೆಡೆ ಉಲ್ಬಣವಾಗುತ್ತಿದೆ.ಹೌದು, ದಿನದ 24 ಗಂಟೆ ಕುಡಿಯುವ ನೀರುಒದಗಿಸುವ ಕಾಮಗಾರಿ ಪೂರ್ಣಗೊಂಡಿರುವ ವಿವಿಧಬಡಾವಣೆಗಳಿಗೆ ಮೀಟರ್ ಅಳವಡಿಸಲಾಗಿದ್ದು, ನೀರಿನ ಬಿಲ್ ಸಾವಿರಾರು ರೂ. ಬರುತ್ತಿದೆ. ಇದಕ್ಕೂಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.ಇದೀಗ ಸರಿಯಾಗಿ ಆಲಮ್ ಬಳಸದೆ ಕುಡಿಯುವನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ.
ನಗರದ ಓಲ್ಡ್ ಲೈನ್ ಬಾರ್ ರಸ್ತೆಯಲ್ಲಿ ನೀರುಶುದ್ದೀಕರಿಸುವ ಸಂದರ್ಭದಲ್ಲಿ ಸರಿಯಾಗಿ ಆಲಮ್‌ಬಳಸದೆ ನೀರು ಸರಬರಾಜು ಮಾಡಲಾಗಿರುವುದನ್ನುನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದನಿರ್ದೇಶಕ ಎ.ಆರ್. ಗೋಪಾಲ್ ಪತ್ತೆ ಮಾಡಿದ್ದು, ಈಬಗ್ಗೆ ಜಿಲ್ಲಾ ಧಿಕಾರಿಗಳಿಗೂ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ದೂರಿಗೆ ಸ್ಪಂದಿಸಿದ್ದು, ಮಂಡ್ಲಿಗೆ ಭೇಟಿನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.ಈ ಹಿಂದೆಯೂ ಶುದ್ಧೀಕರಿಸಿದ ನೀರನ್ನುಸರಬರಾಜು ಮಾಡದೆ ಅಶುದ್ಧ ನೀರನ್ನುಸರಬರಾಜು ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು. ಮತ್ತೆ ಕೆಲವು ಬಡಾವಣೆಗಳಲ್ಲಿ ಸ್ಮಾಟ್ìಸಿಟಿ ಅವಾಂತರದಿಂದಾಗಿ ಕುಡಿಯುವ ನೀರಿನಪೈಪುಗಳು ಒಡೆದು ಚರಂಡಿಯ ನೀರು ಮಿಶ್ರಣವಾಗಿಸರಬರಾಜಾಗುತ್ತಿದೆ ಎಂಬ ದೂರುಗಳೂ ಕೇಳಿಬಂದಿದ್ದವು.
ಈವರೆಗೂ ಸ್ಮಾರ್ಟ್ ಸಿಟಿಯಿಂದ ಸಮಸ್ಯೆಎದುರಿಸಿ ತತ್ತರಿಸಿದ್ದ ನಗರದ ಜನತೆ ಈಗ ಕುಡಿಯುವನೀರಿನ ಸಮಸ್ಯೆಯನ್ನೂ ಎದುರಿಸುವಂತಾಗಿದೆ.ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂಜಲಮಂಡಳಿ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.