ಶಿವಮೊಗ್ಗ: ಕೊರೊನಾ ತುರ್ತು ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಸಿಮ್ Õನಲ್ಲಿ ನೇಮಿಸಿಕೊಂಡಿದ್ದ ಶುಶ್ರೂಶಕಿಯರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋ ಧಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿ ಮಹಿಳಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿಂದ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಲಾ 25 ಸಾವಿರ ರೂ. ಹಾಗೂ “ಡಿ’ ಗ್ರೂಪ್ ನೌಕರರಿಗೆ 20 ಸಾವಿರ ರೂ. ವೇತನ ನೀಡುವುದಾಗಿ ಹೇಳಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು.
ಆದರೆ, ಈಗ ಸಂಬಳ ಕೊಡದೆ ಏಕಾಏಕಿ ಎಲ್ಲರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಕನಿಷ್ಠ 6 ತಿಂಗಳ ಅವ ಧಿಗೆ ಕೆಲಸಕ್ಕೆ ತೆಗೆದುಕೊಂಡಿದ್ದು ಕೆಲಸಕ್ಕೆ ತೆಗೆದುಕೊಳ್ಳುವಾಗ ಮುಂದುವರಿಸುವ ಭರವಸೆ ನೀಡಿದ್ದರು.
ಆದರೆ, ಲಾಕ್ ಡೌನ್ ಸಡಿಲಗೊಳಿಸಿರುವುದರಿಂದ ಮತ್ತು ಕೊರೊನಾ ಕಡಿಮೆಯಾಗಿರುವ ನೆಪ ಹೇಳಿ ಪ್ರತಿಯೊಬ್ಬರನ್ನು ವೇತನ ಕೊಡದೇ ಕೆಲಸದಿಂದ ತೆಗೆದಿರುವುದು ಅಮಾನವೀಯ ಕ್ರಮವಾಗಿದೆ. ಇದನ್ನೇ ನಂಬಿಕೊಂಡ ಗುತ್ತಿಗೆ ಕೆಲಸಗಾರರ ಬದುಕು ಅತಂತ್ರವಾಗಿದೆ. ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಇವರ ಕೆಲಸ ಅಮೂಲ್ಯವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇವರನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಲಾಗಿದೆ.
ಅಲ್ಲದೆ ಕೊರೊನಾ ವಾರಿಯರ್ಸ್ ಎಂದು ಅವರನ್ನು ಪರಿಗಣಿಸಬೇಕು. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ. ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಜಿಮಾ, ಜಿಲ್ಲಾಧ್ಯಕ್ಷ ಡಾ| ದೀಪಕ್, ಕಾರ್ಯಾಧ್ಯಕ್ಷ ಅಬ್ದುಲ್ ರಹೀಂ, ಪ್ರಧಾನ ಕಾರ್ಯದರ್ಶಿ ಪ್ರೇಮಾ, ನಗರಾಧ್ಯಕ್ಷೆ ತಬಸ್ಸುಂ, ಪ್ರಮುಖರಾದ ನಾಸಿರುದ್ದೀನ್, ಅನಿಲ್, ಸಿಕಂದರ್, ಸತೀಶ್ ಇತರರು ಇದ್ದರು.