ಶಿವಮೊಗ್ಗ: ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್‌ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಪಾದಯಾತ್ರೆ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನಾಕಾರರು ಬಿ.ಎಚ್. ರಸ್ತೆಯಲ್ಲಿರುವ ಶಿವಪ್ಪ ನಾಯಕಪ್ರತಿಮೆಯಿಂದ ಮೆರವಣಿಗೆ ಆರಂಭಿಸಿ ಎಎ ಸರ್ಕಲ್, ಗೋಪಿಸರ್ಕಲ್ ಮೂಲಕ ಮಹಾವೀರ ಸರ್ಕಲ್ ತಲುಪಿ ನಂತರಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕ ನೀತಿ ಜಾರಿಗೆತಂದಿರುವುದರಿಂದ ತೈಲ, ಗ್ಯಾಸ್ ಸಿಲಿಂಡರ್, ಅಗತ್ಯ ದಿನಸಿವಸ್ತುಗಳ ಬೆಲೆ ಗಗನಕ್ಕೇರಿದೆ.
ರೈತರ ಪಂಪ್ ಸೆಟ್‌ಗೂ ಕೂಡವಿದ್ಯುತ್ ಇಲ್ಲವಾಗಿದೆ. ಜನ ಸಾಮಾನ್ಯರು ಜೀವನ ನಡೆಸುವುದೇಕಷ್ಟವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದದಿನನಿತ್ಯದ ಬದುಕಿನ ಮೇಲೂ ಕೂಡ ಪರಿಣಾಮ ಬೀರುತ್ತದೆ.ಬಡವರ ಬದುಕು ದಿನದಿಂದ ದಿನಕ್ಕೆ ದುಸ್ತರಗೊಂಡಿದೆ ಎಂದುಪ್ರತಿಭಟನಾಕಾರರು ದೂರಿದರು.ಕೇವಲ 15 ದಿನದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 103ರೂ. ಏರಿಕೆಯಾಗಿದೆ. ಸಬ್ಸಿಡಿ ಕೂಡ ಇಲ್ಲವಾಗಿದೆ.
ವಿದ್ಯುತ್ ದರಅಗತ್ಯಕ್ಕಿಂತ ಹೆಚ್ಚಾಗಿದೆ. ಅಡುಗೆ ಎಣ್ಣೆ, ಬೇಳೆ, ಕಾಳು, ತರಕಾರಿಇವೆಲ್ಲವುಗಳ ಬೆಲೆ ಏರಿಕೆಯಾಗಿದ್ದು, ಬಡವರು ಒಪ್ಪೊತ್ತಿನ ಊಟಮಾಡುತ್ತಿದ್ದಾರೆ. ಇಷ್ಟಾದರೂ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಂತೆಕಾಣುತ್ತಿಲ್ಲ. ಭಾವನಾತ್ಮಕ ವಿಚಾರಗಳ ಮೂಲಕ ಜನರ ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಲೇ ಇದೆ. ರೈತರಂತೂ ಕಂಗಾಲಾಗಿಹೋಗಿದ್ದಾರೆ. ಬೆಳೆ ಹಾನಿ ಪರಿಹಾರವೂ ಇಲ್ಲ. ವೈಜ್ಞಾನಿಕ ಬೆಲೆಯೂಇಲ್ಲವಾಗಿದೆ. ಅತಿ ಅವಶ್ಯಕವಾಗಿರುವ ಬಟ್ಟೆಯ ಮೇಲೂ ಜಿ.ಎಸ್.ಟಿ. ವಿಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಬೆಲೆನಿಯಂತ್ರಣದಲ್ಲಿಡಬೇಕು. ವಿದ್ಯುತ್ ಕಾಂಯ್ದೆ ತಿದ್ದುಪಡಿಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ರೈತರಪಂಪ್‌ಸೆಟ್ ಗೆ ವಿದ್ಯುತ್ ನೀಡಬೇಕು. ಯಶಸ್ವಿನಿ ಯೋಜನೆಪುನಾರಂಭಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿತೀವ್ರ ಹೋರಾಟ ನಡೆಸಲಿದೆ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ವರಿಷ್ಠ ರಾಹುಲ್ ಗಾಂಧಿ ಅಮೇಥಿಯಲ್ಲಿ ಕೈಗೊಂಡಿರುವಪಾದಯಾತ್ರೆ ಬೆಂಬಲಿಸಿ ಈ ಪ್ರತಿಭಟನೆ ನಡೆಸಲಾಗಿದೆ ಎಂದುಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ವಿಜಯಕುಮಾರ್,ಎಚ್.ಸಿ. ಯೋಗೀಶ್, ರಾಮೇಗೌಡ, ಚಂದ್ರಶೇಖರ್,ಚಂದ್ರಭೂಪಾಲ್, ಸಿ.ಜಿ. ಮಧುಸೂದನ್, ಕೆ. ಚೇತನ್, ರೇಖಾರಂಗನಾಥ್, ಎಚ್.ಪಿ. ಗಿರೀಶ್, ಇಕ್ಕೇರಿ ರಮೇಶ್, ಜಿ.ಡಿ.ಮಂಜುನಾಥ್, ಸೌಗಂಧಿಕಾ, ವಿಶ್ವನಾಥ್ ಕಾಶಿ, ರಮೇಶ್ ಹೆಗ್ಡೆ,ನಾಜೀಮಾ, ಕವಿತಾ, ಮೊದಲಾದವರಿದ್ದರು.