Advertisement

ಗ್ರಾಪಂ ಸದಸ್ಯರನ್ನು  ಬೀದಿಗೆ ತಂದ ಬಿಜೆಪಿ: ಮಧು ಟೀಕೆ

06:35 PM Dec 07, 2021 | Adarsha |

ಶಿವಮೊಗ್ಗ: ಗ್ರಾಪಂ ಸದಸ್ಯರನ್ನು ಬಿಜೆಪಿಯವರುಬೀದಿಗೆ ತಂದು ನಿಲ್ಲಿಸಿದ್ದಾರೆ. ಹಾಗಾಗಿ ಈಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದುಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಸರ್ಕಾರದಲ್ಲಿ ಗ್ರಾಪಂಗಳ ಅ ಧಿಕಾರವನ್ನೇಮೊಟಕುಗೊಳಿಸಲಾಗಿದೆ.

ಯಾವುದೇ ಸ್ವ-ನಿರ್ಧಾರದ ಯೋಜನೆಗಳನ್ನು ಅವರುಮಾಡುವಂತಿಲ್ಲ. ಅನುದಾನವನ್ನು ಕೂಡ ಹೆಚ್ಚುಮಾಡಿಲ್ಲ. ಗ್ರಾಪಂ ಸದಸ್ಯರ ವೇತನ ಕೂಡಹೆಚ್ಚು ಮಾಡಿಲ್ಲ. ಮೂಲ ಸೌಕರ್ಯಗಳಿಗೆಒತ್ತು ಕೊಡುತ್ತಿಲ್ಲ. ಬಿಜೆಪಿ ಆಡಳಿತದಲ್ಲಿಗ್ರಾಮೀಣಾಭಿವೃದ್ಧಿಯೇ ಮರೀಚಿಕೆಯಾಗಿದೆ.ಸರ್ಕಾರದ ಯೋಜನೆಗಳು ಕೂಡ ತಲುಪದೆಹೋಗಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣವಿಫಲವಾಗಿದ್ದು ಹದಗೆಟ್ಟಿದೆ. ಬಿಜೆಪಿಬೆಂಬಲಿತ ಗ್ರಾಪಂ ಸದಸ್ಯರು ಕೂಡ ಇದರಿಂದ ಬೇಸರಗೊಂಡಿದ್ದಾರೆ.

ಒಟ್ಟಾರೆ ಜನರ ಭಾವನೆ,ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಗ್ರಾಪಂಸದಸ್ಯರಿಗೆ ಸಹಜವಾದ ಸಿಟ್ಟಿದೆ. ಈ ಎಲ್ಲಾಕಾರಣಗಳಿಂದ ಬಿಜೆಪಿಯ ಅಭ್ಯರ್ಥಿಗಳುಈ ಭಾರಿ ಪರಿಷತ್‌ ಚುನಾವಣೆಯಲ್ಲಿಭಾರೀ ಪ್ರಮಾಣದಲ್ಲಿ ಸೋಲು ಕಾಣಲಿದ್ದಾರೆಎಂದರು.ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಆರ್‌. ಪ್ರಸನ್ನಕುಮಾರ್‌ ಸರಳ ಸಜ್ಜನರಾಗಿದ್ದಾರೆ.ತಮ್ಮ ಕಳೆದ ಅ ಧಿಕಾರಾವ ಧಿಯಲ್ಲಿ ಉತ್ತಮಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಅವರುಗೆಲ್ಲುವುದು ಖಚಿತ. ಅತ್ಯಂತ ಹೆಚ್ಚು ಅಂತರದಲ್ಲಿಅವರನ್ನು ಗಲ್ಲಿಸಬೇಕಾಗಿದೆ. ಈಗಾಗಲೇ ಅವರಪರ ದಾವಣಗೆರೆಯ ಮೂರು ತಾಲೂಕುಗಳುಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪ್ರಚಾರಕಾರ್ಯ ಆರಂಭವಾಗಿದೆ.

ಬಹುತೇಕ ಎಲ್ಲರೂಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.ಮುಖ್ಯವಾಗಿ ಜೆಡಿಎಸ್‌ ಬೆಂಬಲಿತ ಗ್ರಾಪಂಸದಸ್ಯರು ಕೂಡ ಈ ಬಾರಿ ಕಾಂಗ್ರೆಸ್‌ಗೆಬೆಂಬಲ ನೀಡಲಿದ್ದಾರೆ. ರಾಜ್ಯಮಟ್ಟದಲ್ಲಿ ಪಕ್ಷದಮುಖಂಡರತೀರ್ಮಾನಗಳು ಏನೇ ಇದ್ದರೂಅದು ಸ್ಥಳೀಯವಾಗಿ ನಡೆಯುವುದಿಲ್ಲ.ಇಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮನಿರ್ಧಾರವಾಗುತ್ತದೆ. ಜೆಡಿಎಸ್‌ ಮತ್ತುಕಾಂಗ್ರೆಸ್‌ ನಡುವೆ ಗ್ರಾಪಂ ಮಟ್ಟದಲ್ಲಿ ಒಂದುರೀತಿಯ ಮಾನಸಿಕ ಹೊಂದಾಣಿಕೆ ಇದೆ.ಜೆಡಿಎಸ್‌ ಬೆಂಬಲಿತ ಸದಸ್ಯರು ಬಿಜೆಪಿಯನ್ನುಬೆಂಬಲಿಸುವುದು ಕಷ್ಟ. ತಾವು ಸಹಈಗಾಗಲೇ ಜೆಡಿಎಸ್‌ ಮಾಜಿ ಶಾಸಕಿ ಶಾರದಾಪೂರ್ಯಾನಾಯ್ಕ ಸೇರಿದಂತೆ ಹಲವು ಜೆಡಿಎಸ್‌ಮುಖಂಡರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್‌ಗೆ ಅವರಿಂದ ಬೆಂಬಲ ನಿರೀಕ್ಷೆ ಮಾಡಿದ್ದೇನೆಎಂದರು.ಮುಂದಿನ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್‌ ಮತ್ತೆ ಅಧಿ ಕಾರಕ್ಕೆ ಬಂದೇಬರುತ್ತದೆ.

Advertisement

ಕಾಂಗ್ರೆಸ್‌ನ ಸಾಧನೆಗಳನ್ನು ಜನರಿಗೆತಲುಪಿಸುತ್ತೇವೆ. ಆ ಮೂಲಕವೇ ಮತಕೇಳುತ್ತೇವೆ. ಈ ಬಾರಿ ಆರ್‌. ಪ್ರಸನ್ನಕುಮಾರ್‌ಅವರ ಗೆಲುವು ಖಚಿತ. ಅವರನ್ನು ಹೆಚ್ಚಿನಅಂತರದಿಂದ ಗೆಲ್ಲಿಸಬೇಕು ಎಂದುಮತದಾರರಿಗೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್‌, ಕಲಗೋಡು ರತ್ನಾಕರ್‌,ವಿಜಯಕುಮಾರ್‌, ಎಸ್‌.ಪಿ. ದಿನೇಶ್‌,ಜಿ.ಡಿ.ಮಂಜುನಾಥ್‌, ನಾಗರಾಜ್‌, ಶಿವಾನಂದ್‌,ದೇವಿಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next