Advertisement

ಸಿದ್ದು ಅಸಂಬದ್ದ ಮಾತು ಪ್ರಜಾಪ್ರಭುತ್ವಕ್ಕೆ ಅವಮಾನ

03:45 PM Nov 23, 2021 | Adarsha |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯನವರು ಸೋಲುವಹತಾಶೆಯಿಂದ ಅಸಂಬದ್ಧವಾಗಿ ಮಾತನಾಡುತ್ತಿರುವುದು ದುರದೃಷ್ಟಕರ.ಟೀಕಿಸುವ ಭರದಲ್ಲಿ ಏನೇನೋಮಾತನಾಡುತ್ತ ಪ್ರಜಾಪ್ರಭುತ್ವಕ್ಕೆಅವಮಾನ ಮಾಡುತ್ತಿದ್ದಾರೆಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

Advertisement

ಜಿಲ್ಲಾ ಬಿಜೆಪಿಕಾರ್ಯಾಲಯದಲ್ಲಿ ವಿಧಾನ ಪರಿಷತ್‌ಚುನಾವಣಾ ಕಾರ್ಯಾಲಯ ಉದ್ಘಾಟಿಸಿಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಜನಸ್ವರಾಜ್‌ ಯಾತ್ರೆಗೆ ಅಭೂತಪೂರ್ವಸ್ಪಂದನೆ ಸಿಕ್ಕಿದೆ 15ಕ್ಕೂ ಹೆಚ್ಚು ಸ್ಥಾನಗಳಲ್ಲಿಬಿಜೆಪಿ ಹೆಚ್ಚಿನ ಅಂತರದಲ್ಲಿ ಗೆಲ್ಲುವವಿಶ್ವಾಸವಿದೆ. ಇದನ್ನು ಅರಿತಿರುವ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲುವ ಹತಾಶೆಯಿಂದ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ.

ಅವರ ಹೇಳಿಕೆಯಲ್ಲಿರಾಜಕೀಯ ಮುತ್ಸದ್ಧಿತನವಿಲ್ಲ. 4 ಬಾರಿಮುಖ್ಯಮಂತ್ರಿ 2 ಬಾರಿ ಪ್ರಧಾನಿಯಾಗಿಜನಾದೇಶ ಪಡೆದ ವಿಶ್ವಮಾನ್ಯ ನಾಯಕರಾದಮೋದಿಯರನ್ನು ಹೆಬ್ಬೆಟ್ಟಿನ ಪ್ರಧಾನಿಎನ್ನುತ್ತಾರೆ. ಜನಾದೇಶ ಯಾತ್ರೆಯನ್ನುಜನ ಬರ್ಬಾದ್‌ ಯಾತ್ರೆ ಎಂದು ಲೇವಡಿಮಾಡುತ್ತಾರೆ. ಕೇವಲ ಪ್ರಚಾರಕ್ಕಾಗಿಸಾûಾÂಧಾರವಿಲ್ಲದೆ ಆಪಾದನೆ ಮಾಡುತ್ತಾರೆ.ಯಾವುದಕ್ಕೂ ಸಾಕ್ಷಿ ಒದಗಿಸೊಲ್ಲ. ಆಧಾರರಹಿತ ಆರೋಪ ಮಾಡುತ್ತ ಪ್ರಚಾರದ ಭ್ರಮೆಯಲ್ಲಿದ್ದಾರೆ.

ಈ ತರಹದಟೀಕೆಗಳೆಲ್ಲ ಪ್ರಜಾಪ್ರಭುತ್ವಕ್ಕೆಮಾಡುತ್ತಿರುವ ಅವಮಾನಎಂದರು.ಮುಂಬರುವ 5 ರಾಜ್ಯಗಳಚುನಾವಣೆಯಲ್ಲಿ 4 ರಲ್ಲಿ ಬಿಜೆಪಿಬಹುಮತ ಗಳಿಸಿ ಅ ಧಿಕಾರಕ್ಕೆ ಬರಲಿದೆಎಂದು ಚುನಾವಣಾ ಪೂರ್ವ ಸಮೀಕ್ಷೆಹೇಳಿದೆ. ಪಂಜಾಬ್‌ಲ್ಲಿ ಕೂಡ ಕಾಂಗ್ರೆಸ್‌ಅ ಧಿಕಾರ ಕಳೆದುಕೊಳ್ಳಲಿದ್ದು ಬಿಜೆಪಿ ತನ್ನಬಲ ವೃದ್ಧಿಸಿಕೊಳ್ಳಲಿದೆ ಎಂದರು.

ಕೇಂದ್ರ ಸರಕಾರ ಕೃಷಿ ಮಸೂದೆಹಿಂಪಡೆಯಲು ಚುನಾವಣೆ ಕಾರಣವಲ್ಲ.ರೈತರ ಹೆಸರಿನಲ್ಲಿ ದೇಶ ದ್ರೋಹಿಗಳುಷಡ್ಯಂತ್ರ ಮಾಡಿ ಅರಾಜಕತೆ ಸೃಷ್ಟಿಸಿದೇಶವನ್ನು ಒಡೆಯುವ ತುಕಡೆ ಗ್ಯಾಂಗ್‌ಗಳ ಚಿಂತನೆಗೆ ಬ್ರೇಕ್‌ ಹಾಕಲು ಮಸೂದೆಹಿಂಪಡೆಯಲಾಗಿದೆ. ಪ್ರಧಾನಿ ಕಾರ್ಯವೈಖರಿ ಬಗ್ಗೆ ಜನರಿಗೆ ವಿಸ್ವಾಸವಿದೆ. ದೇಶವಿರೋ ಧಿಗಳ ಕೈಗೆ ಭಾವನಾತ್ಮಕ ಅಸ್ತ್ರಗಳುಸಿಗಬಾರದು ಎಂಬ ದೃಷ್ಟಿಯಿಂದ ದೇಶಹಿತಕ್ಕಾಗಿ ಮಸೂದೆ ಹಿಂಪಡೆಯಲಾಗಿದೆ.

Advertisement

ಈ3 ಮಸೂದೆಯಲ್ಲಿ ರೈತರಿಗೆ ಹಾನಿಯಾಗುವಯಾವುದೇ ಅಂಶವಿಲ್ಲ ಬದಲಿಗೆಅನುಕೂಲವಿದೆ ಎಂದರು.ಇವತ್ತು ಫಸಲ್‌ ಬಿಮಾ ಯೋಜನೆಸೇರಿದಂತೆ ರೈತರಿಗೆ ಬೆಂಬಲ ಬೆಲೆ,ಸಹಾಯ ಧನ ನಿರಂತರ ವಿದ್ಯುತ್‌, ಬೆಳೆಗೆಒಳ್ಳೆಯ ಬೆಲೆ ಎಲ್ಲವನ್ನು ಕೇಂದ್ರ ಸರ್ಕಾರ ನೀಡಿದೆ.

ಗುಣಮಟ್ಟದ ವಿದ್ಯುತ್‌ ನೀಡಿದೆ.ರೈತರಿಗೆ ಅನುಕೂಲವಾಗುವ ಯಾವುದೇಯೋಜನೆಯಿಂದ ಸರ್ಕಾರ ಹಿಂದೆಸರಿಯುವುದಿಲ್ಲ. ಬರೇ 10 ತಿಂಗಳಲ್ಲಿ 3ಲಸಿಕೆ ಕಂಡು ಹಿಡಿದು ಪ್ರಪಂಚದ ಯಾವುದೇದೇಶ ಮಾಡದ 100 ಕೋಟಿ ಜನರಿಗೆ ಲಸಿಕೆನೀಡಿದ ಸರ್ಕಾರ ನಮ್ಮದು. ರೈತರ ಮೇಲೆದೌರ್ಜನ್ಯ ಎಂದು ಪ್ರತಿಬಿಂಬಿಸಿ ಅರಾಜಕತೆಸೃಷ್ಟಿಸುವ ಹುನ್ನಾರವನ್ನು ದೇಶದ ಜನಅರಿತಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷಟಿ.ಡಿ. ಮೇಘರಾಜ್‌, ಪ್ರಭಾರಿ ಗಿರೀಶ್‌ಪಟೇಲ್‌, ಶಾಸಕ ಹರತಾಳು ಹಾಲಪ್ಪ,ಡಿ.ಎಸ್‌. ಅರುಣ್‌, ನಗರಾಧ್ಯಕ್ಷ ಜಗದೀಶ್‌,ಮೇಯರ್‌ ಸುನೀತಾ ಅಣ್ಣಪ್ಪ ಪ್ರಮುಖರಾದಶಿವರಾಜ್‌, ಧರ್ಮಪ್ರಸಾದ್‌, ಶ್ರೀನಾಥ್‌,ಸತೀಶ್‌, ಹೃಷಿಕೇಶ್‌ ಪೈ, ಅಣ್ಣಪ್ಪ,ಮಧುಸೂದನ್‌ ಮೊದಲಾದವರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next