ಶಿವಮೊಗ್ಗ: ಕೋವಿಡ್ ಸಾಂಕ್ರಾಮಿಕ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶದಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21ಹಾಗೂ 2021-22ರ ಎರಡು ವರ್ಷಗಳ ಸಂಸದರನಿ ಧಿಯನ್ನು ಕೋವಿಡ್ ಸಂಕಷ್ಟದ ಆರ್ಥಿಕ ಪರಿಸ್ಥಿತಿಯ ನಿರ್ವಹಣೆಗಾಗಿ ನೀಡಲಾಗಿತ್ತು.
ಈಗ ಕೇಂದ್ರ ಸರ್ಕಾರಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು,2021-22ನೇ ಸಾಲಿಗೆ ಸ್ಥಗಿತಗೊಂಡಿದ್ದ ಸಂಸದರನಿ ಧಿಯಲ್ಲಿ ರೂ. 2 ಕೋಟಿ ರೂ.ಗಳನ್ನು ಬಿಡುಗಡೆಮಾಡಲು ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ. ಅನುದಾನ ಬಿಡುಗಡೆನಿರ್ಧಾರ ಕೈಗೊಂಡ ಕೇಂದ್ರ ಸರಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರಅಭಿನಂದನೆ ಸಲ್ಲಿಸಿದ್ದಾರೆ
.ಸಂಸದರ ನಿಧಿ ಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಂಸದರನಿ ಧಿಯನ್ನು ಬಳಕೆ ಮಾಡಿರುವುದರಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರಅವರು ದೇಶಕ್ಕೆ ಎರಡನೇ ಸ್ಥಾ®ದಲ್ಲಿದ್ದಾರೆ.
2019-20ರ ಸಾಲಿಗೆ ಸಂಬಂ ಧಿಸಿದಂತೆ 5 ಕೋಟಿಗಳ ಅನುದಾನ ಹಾಗೂ 10 ರಿಂದ 15 ನೇಲೋಕಸಭೆಯವರೆಗೆ ಬಳಕೆಯಾಗದೇ ಇದ್ದ 4.40 ಕೋಟಿ ಅನುದಾನವೂಸೇರಿದಂತೆ ಅಂದಾಜು 9.40 ಕೋಟಿ ಅನುದಾನದಲ್ಲಿ ಈಗಾಗಲೇ ಅಂದಾಜುರೂ. 9 ಕೋಟಿ ಅನುದಾನದಲ್ಲಿ 42 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ, 4.70 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಬಸ್ ಶೆಲ್ಟರ್, ಹೈಮಾಸ್ಟ್‌ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನ, 2.93ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, 82.50 ಲಕ್ಷ ವೆಚ್ಚದಲ್ಲಿ ಕೋವಿಡ್‌ನಿರ್ವಹಣೆಗಾಗಿ ಆರೋಗ್ಯ ಇಲಾಖೆಗೆ ಆಂಬ್ಯುಲೆನ್ಸ್ ಮತ್ತು ಡಯಾಲಿಸಿಸ್‌ಯಂತ್ರ ಅಳವಡಿಕೆಗೆ, ಉಳಿದ ಅನುದಾನದಲ್ಲಿ ಅಂಗವಿಕಲರಿಗೆತ್ರಿಚಕ್ರ ವಾಹನ, ಇತ್ಯಾದಿ ಅನೇಕ ಉಪಯುಕ್ತ ಕಾಮಗಾರಿಗಳನ್ನುಅನುಷ್ಟಾನಗೊಳಿಸಲು ಅನುದಾನವನ್ನು ಬಳಕೆ ಮಾಡುವುದರ ಮೂಲಕಸಾರ್ವಜನಿಕರ ಪ್ರಶಂಸೆಗೂ ಕಾರಣರಾಗಿದ್ದು, ಈಗಾಗಲೇ 7 ಕೋಟಿಅನುದಾನವು ಖರ್ಚಾಗಿದೆ.