Advertisement

ಬದಲಾವಣೆಗೆ ತಕ್ಕಂತೆ ಸ್ವಂತಿಕೆ ಉಳಿಸಿಕೊಳ್ಳಿ: ಕಾಗೋಡು

06:41 PM Nov 04, 2021 | Adarsha |

ಸಾಗರ: ನೆಲ ಮೂಲದ ಕಲೆ,ಸಂಸ್ಕೃತಿಗಳಿಂದ ನಾವು ದೂರವಾಗುತ್ತಿರುವ ಬಗ್ಗೆ ಆತ್ಮಾವಲೋಕನಮಾಡಿಕೊಳ್ಳಬೇಕಿದೆ. ಬದಲಾದಪರಿಸ್ಥಿತಿಯಲ್ಲಿ ಕರಕುಶಲ ನಮ್ಮ ಮೂಲಕಸುಬುಗಳನ್ನು ಮರೆತಿರುವುದು ಅತ್ಯಂತ ನೋವಿನ ಸಂಗತಿ.ಬದಲಾವಣೆಗೆ ತಕ್ಕಂತೆ ನಮ್ಮತನವನ್ನುಉಳಿಸಿಕೊಳ್ಳುವ ಮಾರ್ಗಗಳನ್ನು ನಾವುಹುಡುಕಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ತಾಲೂಕಿನ ಹೆಗ್ಗೊàಡು ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿಆಶ್ರಮದಲ್ಲಿ ಚರಕ ಸಂಸ್ಥೆಯ ವಿನ್ಯಾಸಕೇಂದ್ರ ಏರ್ಪಡಿಸಿದ್ದ ತರಬೇತಿಕಾರ್ಯಾಗಾರದಲ್ಲಿ ಮಾತನಾಡಿದಅವರು, ಮೂಲ ಕಸುಬುಗಳನ್ನುಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರಕ ಸಂಸ್ಥೆಕೆಲಸ ಗಮನಾರ್ಹ. ಈ ನಿಟ್ಟಿನಲ್ಲಿಸಮಾಜ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರೂಅದನ್ನು ಲೆಕ್ಕಿಸದೆ ಸಮಾಜಕ್ಕೆ ಹೊಸದಾರಿ ತೋರುವ ಕಾಯಕವನ್ನು ಚರಕಮಾಡುತ್ತಿದೆ ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದಟೈಟಾನ್‌ ಸಂಸ್ಥೆ ಅ ಧಿಕಾರಿ ಶ್ರೀಧರ್‌ ಎನ್‌.ಎ., ಸುಸ್ಥಿರ, ಪರಿಸ್ನೇಹಿ ಉತ್ಪನ್ನಗಳಿಗೆಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿಬೇಡಿಕೆ ಹೆಚ್ಚುತ್ತಿದೆ. ಒಂದು ಉತ್ಪನ್ನಎಲ್ಲಿಂದ ಬಂದಿದೆ, ಯಾರುತಯಾರಿಸಿದ್ದಾರೆ, ಯಾವ ವಿಧಾನದಲ್ಲಿತಯಾರಿಸಲಾಗಿದೆ ಎಂಬುದನ್ನುವಿಚಾರಿಸಿ ನಂತರ ಅದನ್ನು ಖರೀದಿಸುವಪ್ರವೃತ್ತಿ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಚರಕ ಸಂಸ್ಥೆಯ ಪ್ರಸನ್ನ, ಕೈಮಗ್ಗಹಾಗೂ ಇತರ ಕರಕುಶಲ ಕಲೆಗಳ ಸುಸ್ಥಿರಪ್ರಕೃತಿಗೆ ಹತ್ತಿರವಾದ ಪ್ರಕ್ರಿಯೆಗಳನ್ನುಪುನರುಜ್ಜೀವನಗೊಳಿಸುವುದು ವಿನ್ಯಾಸಕೇಂದ್ರದ ಉದ್ದೇಶವಾಗಿದೆ. ಆಧುನಿಕತಂತ್ರಜ್ಞಾನವನ್ನು ಸಂಪೂರ್ಣವಾಗಿತಿರಸ್ಕರಿಸದೆ ಪಾರಂಪರಿಕ ತಂತ್ರಜ್ಞಾನಕ್ಕೆಆದ್ಯತೆ ನೀಡುತ್ತ ಕೆಲಸ ಮಾಡುವಉದ್ದೇಶವನ್ನು ಈ ಕೇಂದ್ರ ಹೊಂದಿದೆಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next