Advertisement
ಬಗೆ ಬಗೆಯ ಪಟಾಕಿಗಳುಮಾರುಕಟ್ಟೆಗೆ ಬಂದಿವೆ. ಆದರೆ ಪೆಟ್ರೋಲ್,ಡೀಸೆಲ್ ದರ ಏರಿಕೆಯಿಂದಾಗಿ ಪಟಾಕಿಗಳ ಬೆಲೆತುಸು ಹೆಚ್ಚಳವಾಗಿದೆ.
Related Articles
Advertisement
ತಮಿಳುನಾಡು ಸೇರಿದಂತೆವಿವಿಧೆಡೆಯಿಂದ ಪಟಾಕಿ ತರಿಸಲಾಗಿದೆ. ಡೀಸೆಲ್‌ದರದ ಏರಿಕೆಯಿಂದಾಗಿ ಪಟಾಕಿ ಸಾಗಣೆ ವೆಚ್ಚದುಬಾರಿಯಾಗಿದೆ. ಇದು ಕೂಡ ಗ್ರಾಹಕರ ಜೇಬುಸುಡಲಿದೆ.ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿಪಟಾಕಿ ಉದ್ಯಮದ ಮೇಲೆ ಭಾರೀ ಪೆಟ್ಟುಬಿದ್ದಿದೆ. ಪಟಾಕಿ ಖರೀದಿ ಮಾಡುವವರ ಸಂಖ್ಯೆದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದರಪರಿಣಾಮ ಶಿವಮೊಗ್ಗದಲ್ಲಿ ಪಟಾಕಿ ಮಾರಾಟಗಾರರಸಂಖ್ಯೆ ಕುಸಿತ ಕಾಣುತ್ತಿದೆ. ಈ ಬಾರಿ ನೆಹರೂಸ್ಟೇಡಿಯಂನಲ್ಲಿ 11 ಮಳಿಗೆಗಳು ಮಾತ್ರ ಇವೆ.ಕಳೆದ ವರ್ಷ ಸುಮಾರು 15 ಮಳಿಗೆಗಳಿದ್ದವು.ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ನಿರೀಕ್ಷೆಯಂತೆ ಗ್ರಾಹಕರು ಪಟಾಕಿ ಖರೀದಿಗೆಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಟಾಕಿ ಮಳಿಗೆ ಬಾಡಿಗೆ ಪಡೆಯಲು ಮಹಾನಗರಪಾಲಿಕಗೆ ನಿಗದಿತ ಶುಲ್ಕ ಪಾವತಿಸಬೇಕು. ಆ ಬಳಿಕಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಳಿಗೆಗಳನ್ನುಒದಗಿಸಲಾಗುತ್ತದೆ. ಅಗ್ನಿ ಅವಘಡ ಸಂಭವಿಸಿದರೆಬೆಂಕಿ ನಿಯಂತ್ರಿಸಲು ಪ್ರತಿ ಮಳಿಗೆಯ ಮುಂದೆನೀರಿನ ಡ್ರಮ್ ಇಡಲಾಗಿದೆ. ಒಂದು ಬಕೆಟ್‌ನಲ್ಲಿಮರಳು ಮತ್ತು ನೀರು ಇಡಲಾಗಿದೆ.
ಆದರೆಪ್ರತ್ಯೇಕವಾಗಿ ಅಗ್ನಿಶಾಮಕ ವಾಹನ ಮತ್ತುಸಿಬ್ಬಂದಿಯನ್ನು ನಿಯೋಜಿಸಬೇಕು ಎಂದುಕೆಲವು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ವಿದ್ಯುತ್‌ದೀಪದ ಸಂಪರ್ಕವು ಕಡಿಮೆ ಎಂಬ ಆರೋಪವುಕೇಳಿ ಬಂದಿವೆ. ದೀಪಾವಳಿ ಸಮೀಪದಲ್ಲಿದ್ದರೂಜನರು ಪಟಾಕಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ.ಇದು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.ಬುಧವಾರದಿಂದ ಪಟಾಕಿ ಖರೀದಿ ಬಿರುಸುಪಡೆಯುವ ಸಾದ್ಯತೆ ಇದೆ.