ಶಿವಮೊಗ್ಗ: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಸುಮಾರು 35 ಕುರಿಗಳು ಮೃತಪಟ್ಟಿವೆ.ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಸಂಚಾರಿ ಕುರಿಗಾಹಿ ವಾಸಪ್ಪಮಾನಿ ಎಂಬುವವರಿಗೆ ಸೇರಿದ ಸುಮಾರು 35 ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿವೆ.
ಎನಿóಯೋ ಟಾಕ್ಸಿನಿಯಾ ಎಂಬ ಕಾಯಿಲೆಗೆ ತುತ್ತಾಗಿ ಈ ಕುರಿಗಳು ಮೃತಪಟ್ಟಿವೆಎಂದು ಪಶು ಸಂಗೋಪನಾ ಇಲಾಖೆಮೂಲಗಳು ತಿಳಿಸಿವೆ. ವಾಸಪ್ಪ ಮಾನಿ ಅವರುಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ಕುರಿಗಳನ್ನುಮೇಯಿಸಿಕೊಂಡು ಶಿವಮೊಗ್ಗ ಜಿಲ್ಲೆಗೆಬಂದಿದ್ದರು. ಈ ವೇಳೆ ಸಾಂಕ್ರಾಮಿಕ ಕಾಯಿಲೆಗೆತುತ್ತಾಗಿ ಕುರಿಗಳು ಮೃತಪಟ್ಟಿವೆ.
ಮಾಜಿ ಸಿಎಂ ಟ್ವೀಟ್: ಈ ಘಟನೆ ಉಲ್ಲೇಖೀಸಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಟ್ವೀಟ್ ಮಾಡಿದ್ದು, ಸಂಚಲನಮೂಡಿಸಿದೆ. ತಮ್ಮ ಸರ್ಕಾರ ಇದ್ದ ಅವ ಧಿಯಲ್ಲಿಇಂತವರ ನೆರವಿಗಾಯೇ “ಅನುಗ್ರಹ’ ಎಂಬಯೋಜನೆಯನ್ನು ಜಾರಿಗೆ ತರಲಾಗಿತ್ತು.
ಆದರೆ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆಎಂದು ಆರೋಪಿಸಿದ್ದಾರೆ. ಕುರಿಗಾಹಿಗಳ ಓಟಿನಬೇಟೆಗಾಗಿ ಕಂಬಳಿ ಹೊದ್ದು ಚುನಾವಣಾಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ.ನಿಮಗೆ ಕುರಿಗಾಹಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ “ಅನುಗ್ರಹ’ಯೋಜನೆಗೆ ಹಣ ಒದಗಿಸಿ, ಪಶುಗಳನ್ನುಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.