ಶಿವಮೊಗ್ಗ: ಇಡೀ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಈ ಪಕ್ಷ ಈಗ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದೆ. ಮೋದಿ ಪ್ರಧಾನಿ ಆದ ಬಳಿಕ ಕಾಂಗ್ರೆಸ್ಸಿಗರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ, ಜನರನ್ನು ಕಾಡುತ್ತಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನವರಿಗೆ ಏನು ಮಾಡಬೇಕು, ಯಾವ ರೀತಿಅವರ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ.ಇವತ್ತು ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಅವರ ಪಕ್ಷಕ್ಕೆರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನಿರುದ್ಯೋಗ ಎಂದು ಬೊಬ್ಬೆ ಹೊಡೆಯುತ್ತಿರುವ ಇವರು ಲಿಸ್ಟ್ ಕಳುಹಿಸಿಕೊಟ್ಟರೆ ನರೇಗಾ ಯೋಜನೆಯಲ್ಲಿ ಅವರಿಗೆ ಕೆಲಸ ನೀಡುತ್ತೇವೆ. ಅದನ್ನು ಕಾಂಗ್ರೆಸ್ಸಿಗರು ಉಪಯೋಗಿಸಿಕೊಳ್ಳಬಹುದು ಎಂದರು.
ಮೋದಿ ನಾಯಕತ್ವ ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀಪ್ರಪಂಚವೇ ಮೋದಿ ಅವರನ್ನು ಮೆಚ್ಚಿಕೊಂಡಿದೆ. ಆದರೆಕಾಂಗ್ರೆಸ್‌ನವರು ಮಾತ್ರ ಎಲ್ಲವುದಕ್ಕೂ ವಿರೋಧ ಮಾಡುತ್ತತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೋದಿಯವರನ್ನು ಟೀಕಿಸುತ್ತಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಚಲಿತ ರಾಜಕೀಯ,ಮುಂದೆ ಬರುವ ವಿಧಾನಸಭೆ ಉಪ ಚುನಾವಣೆ, ವಿಧಾನಪರಿಷತ್ ಚುನಾವಣೆ, ಜಿಪಂ ಹಾಗೂ ತಾಪಂ ಚುನಾವಣೆ ಬಗ್ಗೆ ಚರ್ಚೆಯಾಗುತ್ತದೆ. ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಬಿಎಸ್‌ವೈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ಸಭೆಯಲ್ಲಿ ಕೂಲಂಕಶವಾಗಿ ಚರ್ಚಿಸಲಾಗುವುದು.ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಯಡಿಯೂರಪ್ಪ ಅವರಾಗಲಿ, ನಾನಾಗಲಿ ಚರ್ಚೆನಡೆಸಿಲ್ಲ. ಸದ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ:ಬೆಂಗಳೂರು ಭಾರತದ ಬಯೋಟೆಕ್ ರಾಜಧಾನಿ: ಕೇಂದ್ರ ಸಚಿವ ಪಿಯೂಷ್ ಗೋಯಲ್
ಯಡಿಯೂರಪ್ಪ ಅಧಿ ಕಾರ ಇರಲಿ, ಇಲ್ಲದಿರಲಿ ರಾಜ್ಯಾದ್ಯಂತಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಅವರು ಒಂದೇ ಕಡೆಕೂರುವಂತಹ ವ್ಯಕ್ತಿಯಲ್ಲ, ಎಲ್ಲಾ ಕಡೆ ತಿರುಗುತ್ತಾರೆ. ಸದ್ಯನಾನು ಉಪಾಧ್ಯಕ್ಷ ಆಗಿದ್ದೇನೆ. ನಾನು ಚುನಾವಣೆಯಲ್ಲಿ ಎಲ್ಲಿ ನಿಲ್ಲಬೇಕು, ಯಾವಾಗ ಮಂತ್ರಿ ಸ್ಥಾನ ನೀಡಬೇಕು ಎಂಬುದನ್ನು ನನ್ನ ಕೆಲಸ ನೋಡಿ ಪಕ್ಷ ತೀರ್ಮಾನಿಸಲಿದೆ ಎಂದರು.
ಬಿಜೆಪಿ ಅಧಿ ಕಾರಕ್ಕೆ ಬಂದ ತಕ್ಷಣ ಬೆಲೆ ಏರಿಕೆ ಆಗಿದೆ ಎನ್ನುವುದು ಸುಳ್ಳು. ಕಾಂಗ್ರೆಸ್ ಈ ದೇಶದಲ್ಲಿ 65-70 ವರ್ಷ ಅಧಿಕಾರ ನಡೆಸಿದೆ. ಅವರ ಅ ಧಿಕಾರದ ಅವ ಧಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದಿರುವುದೇ ಎಲ್ಲದಕ್ಕೂ ಕಾರಣ ಆಗಿದೆ. ಬೆಲೆ ಏರಿಕೆ ಆದರೂ ಕೂಡ ಮೋದಿ ಸರ್ಕಾರ ಕಠಿಣವಾದ ಕ್ರಮಕೈಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಹಿಂಜರಿಕೆ ಇರುವ ಸಂದರ್ಭದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.