Advertisement

ಜನರಿಗಾಗಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪಮಾಡಿ

07:59 PM Apr 20, 2022 | Adarsha |

ಶಿವಮೊಗ್ಗ: ಗರೀಬಿ ಹಠಾವೋ ಎನ್ನುವ ಕಾಲ ಈಗ ಹೋಗಿದೆ. 2023 ರಲ್ಲಿಜನರಿಗೋಸ್ಕರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಎಲ್ಲರೂಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಕಾರ್ಯಕರ್ತರಿಗೆ ಕರೆ ನೀಡಿದರು.ಇಲ್ಲಿನ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಹಾಗೂ ಡಿಕೆಶಿಮುಖ ಒಂದೊಂದು ದಿಕ್ಕಿಗಿದೆ.

Advertisement

ಹಿಜಾಬ್‌ ಸಮಸ್ಯೆಯನ್ನು ಪಿಎಫ್‌ಐಹುಟ್ಟು ಹಾಕಿತು. ಇದನ್ನು ತಪ್ಪು ಎನ್ನುವ ತಾಕತ್ತು ಕಾಂಗ್ರೆಸ್ಸಿಗರಿಗಿಲ್ಲ.ದೇಶವಿಭಜನೆ ಮಾಡುವವರಿಗೆ ಪುಷ್ಟಿ ನೀಡುವ ಕಾರ್ಯವನ್ನುಕಾಂಗ್ರೆಸ್ಸಿಗರು ಮಾಡುತ್ತಾರೆ. ಹಿಜಾಬ್‌ ವಿಷಯದಲ್ಲಿ ಹೈಕೋರ್ಟ್‌ ಆದೇಶಮಾಡಿದರೂ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಎಂಬ ಒಂದೇಮಾತು ಕಾಂಗ್ರೆಸ್ಸಿಗರ ಬಾಯಲ್ಲಿ ಬರಲಿಲ್ಲ. ಡಿಜೆ ಹಳ್ಳಿ, ಕೆಜಿಹಳ್ಳಿಯಲ್ಲಿಅವರದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಬೆಂಕಿ ಇಟ್ಟವರ ಪರವಾಗಿಮಾತನಾಡಿದರು.

ಅವರ ಪಕ್ಷದ ಶಾಸಕನ ಮನೆ ಮೇಲೆ ಬೆಂಕಿ ಹಾಕಿದಾಗಮಾತನಾಡದ ಇವರಿಗೆ ಯಾವ ತಾಕತ್ತಿದೆ. ಹಿಂದೂ ಕಾರ್ಯಕರ್ತರ ಕೊಲೆಮಾಡಿದವರ ವಿರುದ್ಧ ದಾಖಲಾದ ಪ್ರಕರಣವನ್ನು ವಾಪಸ್‌ ಪಡೆದವರು.ಹುಬ್ಬಳ್ಳಿಯಲ್ಲಿ ವಿನಾಕಾರಣ ಗಲಾಟೆ ಎಬ್ಬಿಸಿದ್ದು ತಪ್ಪು ಎನ್ನುವ ಕೆಲಸಕಾಂಗ್ರೆಸ್‌ ಮಾಡಲಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next