Advertisement

ಲಸಿಕಾಕರಣದಿಂದ ಕೊರೊನಾ ಭೀತಿ ಕಡಿಮೆ

08:15 PM Mar 17, 2022 | Adarsha |

ಶಿವಮೊಗ್ಗ: ಯಶಸ್ವೀ ಕೋವಿಡ್‌ ಲಸಿಕಾಕರಣದಿಂದಾಗಿಮೂರನೇ ಅಲೆಯನ್ನು ಸುಲಭವಾಗಿ ಎದುರಿಸಲುಸಾಧ್ಯವಾಗಿದೆ. ಅದೇ ರೀತಿ ಈಗ 12 ರಿಂದ 14ವರ್ಷದೊಳಗಿನ ಎಲ್ಲ ಮಕ್ಕಳು ಕಾರ್ಬಿವ್ಯಾಕ್ಸ್‌ಲಸಿಕೆ ಪಡೆಯಬೇಕೆಂದು ಜಿಲ್ಲಾ ಧಿಕಾರಿ ಡಾ|ಆರ್‌.ಸೆಲ್ವಮಣಿ ಹೇಳಿದರು.

Advertisement

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಬುಧವಾರ 12 ರಿಂದ 14 ವರ್ಷದೊಳಗಿನಮಕ್ಕಳಿಗೆ ಕಾರ್ಬಿವ್ಯಾಕ್ಸ್‌ ಲಸಿಕಾ ಅಭಿಯಾನ ಮತ್ತು60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕಾಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರುಮಾತನಾಡಿದರು.

ಜಿಲ್ಲೆಯಲ್ಲಿ 12 ರಿಂದ 14 ವರ್ಷದೊಳಗಿನ 64,387 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿಇದೆ. ಪ್ರಸ್ತುತ 40 ಸಾವಿರ ಕಾರ್ಬಿವ್ಯಾಕ್ಸ್‌ ಲಸಿಕೆ ಇದ್ದುಲಸಿಕೆ ನೀಡಲು ಮೈಕ್ರೊಪ್ಲ್ಯಾನ್‌ ತಯಾರಿಸಲಾಗಿದೆಎಂದರು.ಕೋವಿಡ್‌ನ‌ ಮೊದಲ ಎರಡು ಅಲೆಗಳುಭೀಕರವಾಗಿದ್ದವು. ಆಗ ಲಸಿಕೆ ಇಲ್ಲದ ಕಾರಣ ಅನೇಕಅವಘಡಗಳು ಸಂಭವಿಸಿದವು. ಆದರೆ ಮೂರನೇಅಲೆಯಲ್ಲಿ ಅಂತಹ ಅಪಾಯಗಳು ಕಾಣಲಿಲ್ಲ. ಇದಕ್ಕೆಕಾರಣ ಕೋವಿಡ್‌ ಲಸಿಕೆ. ಪ್ರಧಾನಮಂತ್ರಿಯವರು2021 ರ ಜ.16 ರಂದು ಲಸಿಕಾಕರಣಕ್ಕೆ ಚಾಲನೆನೀಡಿದರು.

ಶಿವಮೊಗ್ಗದ 9 ಕೇಂದ್ರಗಳಲ್ಲಿ ಆರೋಗ್ಯಕಾರ್ಯಕರ್ತೆಯರಿಗೆ ಲಸಿಕೆ ಪ್ರಾರಂಭಿಸಲಾಯಿತು.ನಂತರ ಮುಂಚೂಣಿ ಕಾರ್ಯಕರ್ತರಿಗೆ, ಆನಂತರ60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಲಸಿಕೆನೀಡಲು ಪ್ರಾರಂಭಿಸಲಾಯಿತು. 2021 ರ ಏಪ್ರಿಲ್‌ 1ರಿಂದ ಎಲ್ಲ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆನೀಡಲಾರಂಭಿಸಲಾಯಿತು. 2021 ರ ಜೂನ್‌ 27ರಿಂದ ಎಲ್ಲ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂಸಿಬ್ಬಂದಿಗೆ ಲಸಿಕೆ ಆರಂಭಿಸಲಾಯಿತು.

2022 ರಜ.3 ರಿಂದ 15 ರಿಂದ 17 ವರ್ಷದ ವಿದ್ಯಾರ್ಥಿಗಳಿಗೆಹಾಗೂ ಈಗ 12 ರಿಂದ 14 ವರ್ಷದೊಳಗಿನವಿದ್ಯಾರ್ಥಿಗಳಿಗೆ ಕಾರ್ಬಿವ್ಯಾಕ್ಸ್‌ ಲಸಿಕಾ ಅಭಿಯಾನಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮುನ್ನೆಚ್ಚರಿಕಾಲಸಿಕಾ ಅಭಿಯಾನ ಆರಂಭಿಸಲಾಗಿದೆ. ಅರ್ಹರೆಲ್ಲರೂಈ ಲಸಿಕೆ ಪಡೆಯಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next