Advertisement

ಗೋಶಾಲೆ ತೆರೆಯಲು ಗ್ರಾಮಸ್ಥರ ಮನವಿ

04:39 PM Mar 10, 2022 | Adarsha |

ಶಿವಮೊಗ್ಗ: ಗ್ರಾಮದ ವ್ಯಾಪ್ತಿಯಲ್ಲಿ ತಕ್ಷಣಗೋ ಶಾಲೆ ತೆರೆಯಬೇಕು ಅಥವಾಬೇಸಿಗೆಯಲ್ಲಿ ಗೋವುಗಳ ಸಾಮೂಹಿಕಕಾವಲು ನಿರ್ಬಂಧಿ ಸಬೇಕು ಎಂದುಒತ್ತಾಯಿಸಿ ತಾಲೂಕಿನ ಹೊರಬೈಲು ಮತ್ತುಸನ್ನಿವಾಸ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ಮಲೆನಾಡು ಭಾಗದಲ್ಲಿಸಾಂಪ್ರದಾಯಿಕವಾಗಿ ಮಳೆಗಾಲದಲ್ಲಿಸಾಕಷ್ಟು ಹಳ್ಳಿಗಳಲ್ಲಿ ಬೆಳೆಗಳ ರಕ್ಷಣೆಗಾಗಿಗೋವುಗಳನ್ನು ಸಾಮೂಹಿಕವಾಗಿ ಕಾವಲುಕಾಯುವ ಪದ್ಧತಿ ಇದೆ. ಜುಲೈ ತಿಂಗಳಿನಿಂದಡಿಸೆಂಬರ್‌ ಕೊನೆಯವರೆಗೆ ಸಾಮೂಹಿಕಕಾವಲು ಮಾಡಲಾಗುತ್ತದೆ. ಬೇಸಿಗೆಯಲ್ಲಿಅವುಗಳನ್ನು ಸ್ವತಂತ್ರವಾಗಿ ಮೇಯಲುಬಿಡಲಾಗುತ್ತಿತ್ತು. ಅವು ಗುಡ್ಡಗಳಿಗೆ ಹೋಗಿಮೇವು ತಿಂದು ಬರುತ್ತಿದ್ದವು.ಆದರೆ ಈಗ ಗುಡ್ಡಗಳ ಮೇಲೂಒತ್ತವರಿ ಮಾಡಿ ಅಡಿಕೆ ತೋಟಎಬ್ಬಿಸಲಾಗಿದೆ. ಮಧ್ಯದಲ್ಲಿ ಇರುವ ಖಾಲಿಜಾಗದಲ್ಲೂ ಗೋವು ಮೇಯಲು ಈತೋಟಗಳ ರೈತರು ಅಡ್ಡಿ ಮಾಡುತ್ತಿ¨ªಾರೆ.

ಬೇಸಿಗೆಯಲ್ಲಿ ಬೆಳೆ ರಕ್ಷಣೆಗೆ ಹಿಂದೆÇÉಾಬೇಲಿ ನಿರ್ಮಿಸುತ್ತಿದ್ದರು. ಈಗ ಬೇಲಿನಿರ್ಮಿಸುವ ಬದಲಿಗೆ ಬೇಸಿಗೆಯಲ್ಲೂಗೋವುಗಳ ಸಾಮೂಹಿಕ ಕಾವಲುಮಾಡುವಂತೆ ಗೋಪಾಲಕರ ಮೇಲೆ ಒತ್ತಡಹೇರಲಾಗುತ್ತಿದೆ. ಈಗಾಗಲೇ ಒಂದೆರೆಡುಹಳ್ಳಿಗಳಲ್ಲಿ ಬೇಸಿಗೆ ಕಾವಲು ಆರಂಭವಾಗಿದೆಎಂದು ತಿಳಿಸಿದರು.ಇದಕ್ಕಾಗಿ ಗೋವುಗಳನ್ನು ದೊಡ್ಡಿಗಳಿಗೆಹೊಡೆಯುವ ಪ್ರಯತ್ನ ಮಾಡುತ್ತಿ¨ªಾರೆ.

ಕೆಲವರು ಗೋವುಗಳ ಮೇಲೆ ಕಲ್ಲು, ದೊಣ್ಣೆ,ಆಯುಧಗಳಿಂದ ಹÇÉೆ ಮಾಡುತ್ತಿದ್ದಾರೆ.ಗೋ ಪಾಲಕರನ್ನು ಅವಾಚ್ಯ ಪದಗಳಿಂದನಿಂದಿಸಲಾಗುತ್ತಿದೆ. ಇದೆÇÉಾ ಕಾರಣಕ್ಕೆಸಾಕಷ್ಟು ರೈತರು ಗೋವುಗಳನ್ನು ಮಾರಾಟಮಾಡಿ¨ªಾರೆ ಎಂದು ವಿವರಿಸಿದರು.ನಮ್ಮ ಎರಡೂ ಗ್ರಾಮಗಳಲ್ಲಿ 300ಕ್ಕೂಹೆಚ್ಚು ದೇಸಿ ಗೋವುಗಳಿವೆ. ಕೆಲವರದಬ್ಟಾಳಿಕೆಯಿಂದ ಅವುಗಳನ್ನು ಸಾಕುವುದುಕಷ್ಟವಾಗುತ್ತಿದೆ. ಅವುಗಳನ್ನು ಕಟ್ಟಿ ಹಾಕಿಸಾಕಲು ಮೇವಿನ ಕೊರತೆ ಇದೆ. ಅಷ್ಟುಹಣವೂ ರೈತರ ಬಳಿ ಇಲ್ಲ. ಹಾಗಾಗಿ ಈಭಾಗದಲ್ಲಿ ತಕ್ಷಣ ಗೋ ಶಾಲೆ ತೆರೆಯಬೇಕು.ಮೇವು ಒದಗಿಸಬೇಕು ಎಂದು ಮನವಿಮಾಡಿದ್ದಾರೆ.

ಜಿಲ್ಲಾ ಗೋ ಸೇವಾ ಸಂಯೋಜಕ್‌ಕೋಟೆ ರಾಜು, ವಿಶ್ವಹಿಂದು ಪರಿಷತ್‌ಜಿಲ್ಲಾ ಉಪಾಧ್ಯಕ್ಷ ನಟರಾಜ್‌,ಪ್ರಮುಖರಾದ ಜಗದೀಶಚಂದ್ರ, ಸುರೇಶ್‌ಬಾಬು, ಸುಬ್ರಹ್ಮಣ್ಯ, ಪ್ರದೀಪ, ಪಾಪಣ್ಣ,ಸುಬ್ರಾಯಪ್ಪ ಮಂಜುನಾಥ, ಉಮಾಪತಿಇನ್ನಿತರರು ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next