ಸಾಗರ: ಇಲ್ಲಿನ ಗೌಡ ಸಾರಸ್ವತ ಸಮಾಜದ ಮಹಿಳೆಯರು ಶ್ರಾವಣ ಮಾಸದಲ್ಲಿನ ಚೂಡಿ ಪೂಜೆಯನ್ನು ಶುಕ್ರವಾರ ನೆರವೇರಿಸುವ ಮೂಲಕ ಸಾಂಪ್ರದಾಯಿಕ ಪ್ರಕೃತಿ ಪೂಜೆ ಆರಂಭಿಸಿದ್ದಾರೆ. ಆ. 15ರ ಭಾನುವಾರದಿಂದ ತೊಡಗಿ ಶ್ರಾವಣ ಮಾಸದ ಪ್ರತಿ ಶುಕ್ರವಾರ ಭಾನುವಾರಗಳಂದು ಪೂಜೆ ನಡೆಯಲಿದೆ.
ಸೂರ್ಯನು ಸ್ವಕ್ಷೇತ್ರ ಸಿಂಹ ರಾಶಿಯಲ್ಲಿ ಆಗಮಿಸಿದ ಸಂದರ್ಭದಲ್ಲಿ ಸೂರ್ಯನ ಬಿಂಬವನ್ನು ರಂಗೋಲಿಯಲ್ಲಿ ರಚಿಸಿ, ಸೂರ್ಯಾರಾಧನೆ ಮಾಡಿದರು. ಗರಿಕೆ, ಬಣ್ಣ ಬಣ್ಣದ ಲಕ್ಷಿ$¾ ಸಾನ್ನಿಧ್ಯವುಳ್ಳ ಹೂವುಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸಿದರು.
ತುಳಸಿ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಭಾನುವಾರ ನಡೆಯುವ ಚೂಡಿ ಪೂಜೆಯನ್ನು ಗೌಡ ಸಾರಸ್ವತ ಕುಟುಂಬದ ಹೆಂಗಸರು ಪದ್ಧತಿ ಪ್ರಕಾರ ನಡೆಸಿದರು. ಗರಿಕೆಯೊಂದಿಗೆ ರಥ ಪುಷ್ಪ, ಕರವೀರ, ರತ್ನಗಂ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಅನ್ವಾಳೆ, ಲಾಯೆಮಾಡ್ಡೊ, ನೆಲ ನೆಲ್ಲಿ, ಕಾಟ್ ಚಿಡೋì, ಕಾಯ್‌ಳಾ0ದೋಳ್ಳೋ ಮಜ್ರಾನಾಂಕುಟ, ಗಾಂಟಿಮಾಡ್ಡೊ ಇತ್ಯಾದಿ ಕಾಟು ಹೂಗಳನ್ನೆಲ್ಲಾ ಸೇರಿಸಿ ಕಟ್ಟಿದ ಚೂಡಿಯನ್ನು ದೇವರಿಗೆ ಅರ್ಪಿಸಲಾಯಿತು.
ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹಚ್ಚಿ, ಪುಷ್ಪಾಲಂಕಾರ ಮಾಡಿ, ನೀರನ್ನು ಸಹ ಪೂಜಿಸಲಾಗುತ್ತದೆ. ಗಂಗಾ ಸ್ಮರಣ ಪೂರ್ವಕ ನೀರನ್ನು ತಂಬಿಗೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆನಂತರ ತುಳಸಿ ಕಟ್ಟೆ, ಮನೆ ದ್ವಾರದ ಹೊಸ್ತಿಲನ್ನು ಅಲಂಕರಿಸಿ ಚೂಡಿ ಪೂಜೆ ಆರಂಭಿಸುತ್ತಾರೆ. ತುಳಸಿಗೆ ನೀರೆರೆದು ಅರಸಿನ ಕುಂಕುಮ, ಗಂಧ ಹಚ್ಚಿ, ವೀಳ್ಯ ಚೂಡಿ ಅರ್ಪಿಸಿ, ಹಣ್ಣುಕಾಯಿ, ಪಂಚ ಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ಬಳಿಕ ತುಳಸಿಗೆ 5 ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿನಲ್ಲಿಯೂ ತುಳಸಿಗೂ ಸೂರ್ಯ ದೇವನಿಗೂ ಅಕ್ಷತೆ ಹಾಕಲಾಗುತ್ತದೆ. ಕೆಲವರು ತೆಂಗಿನ ಮರಕ್ಕೆ ಸಹ ಚೂಡಿ ಅರ್ಪಿಸುತ್ತಾರೆ.
ದೇವರ ಕೋಣೆಯಲ್ಲಿ ಜ್ಯೋತಿ ಬೆಳಗಿ, ಪತಿಗೆ ಆರೋಗ್ಯ, ಆಯುಷ್ಯ, ಗೃಹಿಣಿಯರಿಗೆ ಮುತ್ತೆ$çದೆ ಸೌಭಾಗ್ಯ , ಕುಟುಂಬದ ಪ್ರೀತಿ ವಿಶ್ವಾಸ, ಸಂಬಂಧ ಉತ್ತಮ ರೀತಿಯಲ್ಲಿ ಇರಲು ಸೂರ್ಯನಲ್ಲಿ ಹಾಗೂ ತುಳಸಿ ಸನ್ನಿಧಿಯಲ್ಲಿ ಕುಲ ದೇವರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಗೀತಾ ಅಮರನಾಥ ಕಾಯ್ಕಿಣಿ, ಪ್ರಜ್ಞಾ ಪ್ರಭು, ಗಾಯಿತ್ರಿ, ಸೌಮ್ಯ ಗಾಯೊ¤ಂಡೆ, ಉಮಾ, ಪ್ರತಿಭಾ, ಮಿಥಿಲಾ, ವೀಣಾ, ಭಾರತಿ, ಸುಮಾ, ಪಾವನಿ, ದೀಪಾ, ಶ್ವೇತಾ, ಶಾಂತೇರಿ ಹುಲೇಕಲ್ ಮುಂತಾದವರು ಸಾಂಪ್ರದಾಯಿಕ ಚೂಡಿ ಪೂಜೆ ನೇರವೇರಿಸಿದರು.