ಶಿವಮೊಗ್ಗ: ಕಮಲ- ದಳದ ನಡುವೆ ಗೆಲ್ಲಲು ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದ್ದರೆ ಇತ್ತ ಮತದಾರ ಕೂಡ ಮತೋತ್ಸಾಹ ತೋರಿದ್ದಾನೆ.
ಬೆಳಗ್ಗೆ 7ರಿಂದಲೇ ಉತ್ಸಾಹದಿಂದ ಪಾಲ್ಗೊಂಡಿದ್ದ ಮತದಾರರು ಮಧ್ಯಾಹ್ನದ ವೇಳೆಗೆ ಸುಸ್ತಾದಂತೆ ಕಂಡು ಬಂದರು. ಸಂಜೆ ನಾಲ್ಕರ ನಂತರ ಮತ್ತೆ ಅತ್ಯುತ್ಸಾಹದಿಂದ ಮತ ಚಲಾಯಿಸಿದರು.
ನಗರದ ಸೋಮಿನಕೊಪ್ಪ ಮತಗಟ್ಟೆ 31 ರಲ್ಲಿ ಹಾಗೂ ಹೊಸಮನೆ ವೀಣಾಶಾರದ ಶಾಲೆಯ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತಯಂತ್ರ ಬದಲಿಸಲಾಯಿತು. ವೀಣಾ ಶಾರದಾ ಶಾಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 7.45 ರವರೆಗೆ ಮತದಾನ ಸ್ಥಗಿತಗೊಂಡಿತ್ತು. ಬೆಂಗಳೂರಿನಿಂದ ಬಂದ ಕೆಲ ಯುವ ಮತದಾರರು ಎಪಿಕ್ ಕಾರ್ಡ್ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ನಿರಾಶರಾಗಿ ಮರಳಿದರು. ಬೆಂಗಳೂರಿನಿಂದ ಬಂದಿ ದೀಪ್ತಿ ಎನ್ನುವ ಯುವತಿ ಕಳೆದ ಚುನಾವಣೆಯಲ್ಲಿ ವಿಜ್ಞಾನ ಕಾಲೇಜಿನಲ್ಲಿ ಮತ ಚಲಾಯಿಸಿದ್ದರು. ಆದರೆ ಈ ಬಾರಿ ಹೆಸರು ಡೀಲಿಟ್ ಆಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಮತ ಮತ್ತೂರು ಬೂತ್‌ಗೆ ವರ್ಗಾಯಿಸಲ್ಪಟ್ಟಿತ್ತು. ಊರಗಡೂರಿನ 96 ವರ್ಷದ ಎಚ್. ತುಳಸಿಬಾಯಿ ಉತ್ಸಾಹದಿಂದ ಮತಗಟ್ಟೆ ಸಂಖ್ಯೆ 149ಕ್ಕೆ ತೆರಳಿ ತಮ್ಮ ಮತಹಕ್ಕು ಚಲಾಯಿಸುವ ಮೂಲಕ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಯುವ ಜನಾಂಗಕ್ಕೆ ಕರೆ ನೀಡಿದರು. ನಗರದ ವಾರ್ಡ ನಂ 2 ರಲ್ಲಿ 98 ವರ್ಷದ ಜಾನಕಮ್ಮ ವೀಲ್ ಚೇರ್‌ನಲ್ಲಿ ಬಂದು ಮತಚಲಾಯಿಸಿ ಯುವಕರಿಗೆ ಮಾದರಿಯಾದರು. ವಿನೋಬನಗರದ ಮತಗಟ್ಟೆಯಲ್ಲಿ 95 ವರ್ಷದ ರುದ್ರಮ್ಮ ಮತ ಚಲಾಯಿಸಿದರು. ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ವೀಲ್ಚೇರ್ ವ್ಯವಸ್ಥೆ ಮಾಡಿರಲಿಲ್ಲ ಅವರನ್ನು ಹೊತ್ತುಕೊಂಡೆ ಹೋಗಿ ಮತ ಚಲಾಯಿಸಬೇಕಾಯಿತು. ಸುಡುತ್ತಿರುವ ಬಿಸಿಲಿನಲ್ಲೂ ಈ ಬಾರಿ ಮತದಾರರು ಅತಿ ಉತ್ಸಾಹದಿಂದ ಮತಚಲಾಯಿಸಿದರು.ಆದರೆ ಹಲವು ಮತಗಟ್ಟೆಗಳಲ್ಲಿ ಕುಡಿ0åುುವ ನೀರು ಹಾಗೂ ಬೆಳಕಿನ ಸೌಲಭ್ಯ ಇರಲಿಲ್ಲ.