Advertisement
ರಾಜ್ಯಕ್ಕೆ ಅತಿ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಪೂರೈಸುವ ಏಕೈಕ ಜಲಾಶಯ ಇದಾಗಿದ್ದು ಶುಕ್ರವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ 1804.40 ಅಡಿ ತಲುಪಿತ್ತು. ಪ್ರತಿ ವರ್ಷ 1790 ಅಡಿ ದಾಟಿದ ಮೇಲೆ ವಾಡಿಕೆಯಂತೆ ಪೂಜೆ ನಡೆಸಲಾಗುತ್ತದೆ. 1790 ಅಡಿ ದಾಟಿದ ನಂತರ ನೀರು ಗೇಟ್ ಮಟ್ಟಕ್ಕೆ ತಲುಪುತ್ತದೆ. ಈ ವೇಳೆ ಪೂಜೆ ಸಲ್ಲಿಸಿ ಕೆಲ ನಿಮಿಷ ಗೇಟ್ ತೆರೆದು ನೀರು ಹೊರಬಿಡಲಾಗುತ್ತದೆ. ಜಲಾಶಯ ಅರ್ಧ ಭರ್ತಿಯಾದರೂ ವರ್ಷ ಪೂರ್ತಿ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಬಾರಿ ಪೂರ್ಣ ಭರ್ತಿಯಾಗುವ ಭರವಸೆ ಇದ್ದು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ.
Advertisement
Shivamogga; ಲಿಂಗನಮಕ್ಕಿಯಲ್ಲಿ ಭಾರೀ ಒಳಹರಿವು: ಗಂಗೆ ಪೂಜೆ
05:11 PM Jul 26, 2024 | |