Advertisement
ಪ್ರಧಾನಿ ಮೋದಿ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಜತೆಗೆ ಸುಮಾರು 10 ಕಿ.ಮೀ. ರೋಡ್‌ಶೋ ನಡೆಸಲಿದ್ದಾರೆ. ಹಲವು ರಾಜಕೀಯ ಸಂದೇಶಗಳನ್ನೂ ಹೊತ್ತು ತರಲಿ ರುವ ಮೋದಿ, ರಾಜ್ಯ ಬಿಜೆಪಿಗೆ ಶಕ್ತಿ ತುಂಬಲಿದ್ದಾರೆ.
Related Articles
ಅನಂತರ ಕುಂದಾನಗರಿ ಬೆಳಗಾವಿಗೆ ಮಧ್ಯಾಹ್ನ ಪ್ರಧಾನಿ ತೆರಳಲಿದ್ದು, ಅವರನ್ನು ರೈತ ಮಹಿಳೆ. ಆಟೋಚಾಲಕ, ಪೌರ ಕಾರ್ಮಿಕ ಮಹಿಳೆ, ನೇಕಾರ ಹಾಗೂ ಕಟ್ಟಡ ಕಾರ್ಮಿಕ- ಹೀಗೆ ಐವರು ಜನಸಾಮಾನ್ಯರು ಸ್ವಾಗತಿಸುವುದು ವಿಶೇಷ.
Advertisement
ಮಧ್ಯಾಹ್ನ 2 ಗಂಟೆಗೆ 10.5 ಕಿ.ಮೀ. ರೋಡ್ ಶೋ ದಲ್ಲಿ ಭಾಗವಹಿಸುತ್ತಾರೆ. ಅನಂತರ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸುಮಾರು 2,200 ಕೋಟಿ ರೂ. ವೆಚ್ಚದ ನಾನಾ ಯೋಜನೆಗಳಿಗೆ ಚಾಲನೆ-ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಅವರು, “ಕಿಸಾನ್ ಸಮ್ಮಾನ’ ಯೋಜನೆಯ 13ನೇ ಕಂತಿನ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಿದ್ದಾರೆ. 1,120 ಕೋ. ರೂ. ವೆಚ್ಚದ ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಪೂರ್ಣ ನವೀಕರಣಗೊಂಡ ರೈಲು ನಿಲ್ದಾಣ, ಬೆಳಗಾವಿ-ಘಟಪ್ರಭಾ ದ್ವಿಪಥ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ದೀರ್ಘ ರೋಡ್ ಶೋಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಿರುವ ಐತಿಹಾಸಿಕ ರೋಡ್ ಶೋದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಕಿತ್ತೂರ ಚನ್ನಮ್ಮ ವೃತ್ತ, ಬೋಗಾರ್ ವೇಸ್, ಕಪಿಲೇಶ್ವರ ಮಂದಿರ ರಸ್ತೆ ಸಹಿತ ಸುಮಾರು 10.5 ಕಿ.ಮೀ.ನಷ್ಟು ದೂರ ಸಾಗಿ ಯಡಿಯೂರಪ್ಪ ಮಾರ್ಗದಲ್ಲಿರುವ “ಮಾಲಿನಿ ಸಿಟಿ’ಯಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ 2 ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿ ಪ್ರಧಾನಿ ಇದೇ ಮೊದಲ ಬಾರಿಗೆ ಇಷ್ಟು ದೂರ ರೋಡ್ ಶೋ ನಡೆಸಲಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿ ಪ್ರವಾಸ ಕೈಗೊಂಡಿದ್ದಾಗ 8 ಕಿ.ಮೀ. ರೋಡ್ ಶೋ ನಡೆಸಿದ್ದರು. ಮರೆಯಲಾಗದ ಕ್ಷಣ
ನರೇಂದ್ರ ಮೋದಿ ಅವರಿಂದ ವಿಮಾನ ನಿಲ್ದಾಣ ಉದ್ಘಾ ಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರದ ದಿನ ಐತಿ ಹಾಸಿಕ ವಾಗಲಿದೆ. ಲಕ್ಷಾಂ ತರ ಜನರು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ನನ್ನ ಜೀವನ ದಲ್ಲಿಯೇ ಮರೆಯಲಾಗದ ಕ್ಷಣ.
– ಬಿ.ಎಸ್. ಯಡಿಯೂರಪ್ಪ,
ಮಾಜಿ ಸಿಎಂ