ನಡೆಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಡಾ| ಮಹೇಶ್ ಜೋಶಿ ತಿಳಿಸಿದರು.
Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆಯ್ಕೆಯಾಗುವುದು ಬಹುತೇಕ ಖಚಿತ. ಹೋದ ಕಡೆಯೆಲ್ಲಾ ಪರಿಷತ್‌ನ ಸದಸ್ಯರು ನನ್ನ ಮೇಲೆ ತೋರಿಸುತ್ತಿರುವ ಅಭಿಮಾನ ನನಗೆ ಗೆಲುವಿನ ವಿಶ್ವಾಸ ಮೂಡಿಸಿದೆ. ನನ್ನ ಅವಧಿಯಲ್ಲಿ ಪರಿಷತ್ತನ್ನು ಯಾವುದೋ ವ್ಯಕ್ತಿ, ಪಕ್ಷ, ಪ್ರದೇಶದ ಗುಂಪು ಆಗಲು ಬಿಡುವುದಿಲ್ಲ. ಇದು ಜನಸಾಮಾನ್ಯರ ಪರಿಷತ್ ಆಗಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಪರಿಷತ್ ಸದಸ್ಯರ ಸಂಖ್ಯೆ 3.50 ಲಕ್ಷ ಮಾತ್ರ ಇದೆ. ಪರಿಷತ್ ಚೌಕಟ್ಟಿನೊಳಗೆ ಎಲ್ಲರೂ ಬರಬೇಕು ಎನ್ನುವ ಉದ್ದೇಶದಿಂದ ಗ್ರಾಮ-ಗ್ರಾಮಗಳಲ್ಲಿ ಅಭಿಯಾನ ನಡೆಸಿ ಪರಿಷತ್ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಲಾಗುತ್ತದೆ. ನಾನು ಗಾಳಿಗೋಪುರ ಕಟ್ಟುವುದಿಲ್ಲ. ಬದಲಾಗಿ ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿ ಸಾಹಿತ್ಯ ಪರಿಷತ್ ಕಟ್ಟುತ್ತೇನೆ ಎಂದು ತಿಳಿಸಿದರು.
ಉಚಿತವಾಗಿ ಗೌರವ ಸದಸ್ಯತ್ವ, ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಕೇವಲ 100 ರೂ.ಗೆ ಪರಿಷತ್ ಸದಸ್ಯತ್ವ ನೀಡಲು ಉದ್ದೇಶಿಸಲಾಗಿದೆ.
ಪರಿಷತ್ತನ್ನು ಸರ್ಕಾರಿ ಕಚೇರಿಯಾಗಿಸದೆ ವಾರದ ಏಳೂ ದಿನವೂ ಪರಿಷತ್ ತೆರೆದು ತನ್ನ ಕಾರ್ಯ ಚಟುವಟಿಕೆಯನ್ನು ನಡೆಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸುವ ಅಗತ್ಯ ಇಲ್ಲದಂತೆ ಹೊಸದೊಂದು
ಆ್ಯಪ್ ತಯಾರಿಸುವ ಉದ್ದೇಶವಿದ್ದು, ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ಸಾಹಿತ್ಯ ಪರಿಷತ್ ಸದಸ್ಯರಾಗಲು ಅವಕಾಶ ಕಲ್ಪಿಸಲಾಗುತ್ತದೆ.
ಸದಸ್ಯರಿಗೆ 15 ದಿನದಲ್ಲಿ ಸ್ಮಾರ್ಟ್ ಕಾರ್ಡ್ ಮಾದರಿಯ ಗುರುತಿನ ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದರು. ಒಂದೂ ಕನ್ನಡ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಕನ್ನಡ ಅನ್ನದ ಭಾಷೆ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡು- ನುಡಿಗೆ ಧಕ್ಕೆ ಉಂಟಾದಾಗ ಅದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸದೆ ಹೋದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಮಾಡಲಾಗುತ್ತದೆ. ಪರಿಷತ್ ಚಟುವಟಿಕೆ ಪಾರದರ್ಶಕವಾಗಿಸುವುದು, ಮಾತೃಭಾಷೆಯಾಗಿ ಕನ್ನಡವನ್ನು ಬೆಳೆಸುವುದು, ಪರಿಷತ್ತಿನ ನಿಬಂಧನೆಗಳ ಪರಿಷ್ಕರಣೆ, ಕಾರ್ಯಕಾರಿ ಸಮಿತಿಯ ಶಕ್ತೀಕರಣ, ಯುವ ಸಾಹಿತಿಗಳು ಹಾಗೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ, ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ
ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡುವುದು, ಎಲ್ಲ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ, ವಿಶ್ವ ಕನ್ನಡ ಸಮ್ಮೇಳನ ಸಂಯೋಜನೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆಯ ಗೌರವ ಹೆಚ್ಚಿಸುವ ಕೆಲಸ ಮಾಡುವ ಉದ್ದೇಶ ನನ್ನದಾಗಿದೆ ಎಂದರು.
Related Articles
Advertisement
ಓದಿ : ಕೆಲವೇ ದಿನಗಳಲ್ಲಿ ವಿಸ್ಟ್ರಾನ್ ಕಂಪನಿಯ ಉತ್ಪಾದನೆ ಪುನರಾರಂಭ: ಜಗದೀಶ್ ಶೆಟ್ಟರ್