Advertisement

50 ಆಮ್ಲಜನಕ ಸಹಿತ ಬೆಡ್‌ ವ್ಯವಸ್ಥೆ: ಶಾಸಕ ಕುಮಾರ ಬಂಗಾರಪ್ಪ

09:24 PM May 28, 2021 | Team Udayavani |

ಸೊರಬ: ತಾಲೂಕಿನಲ್ಲಿ ಕೊರೊನಾ ಹತೋಟಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಆಡಳಿತ ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಸೋಂಕಿತರಿಗೆ ತಾಲೂಕಿನಲ್ಲಿ 50 ಆಮ್ಲಜನಕ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಮತ್ತು ಆನವಟ್ಟಿಯಲ್ಲಿ 50 ಆಮ್ಲಜನಕ ಸಹಿತ ಬೆಡ್‌ಗಳ ಡೆಡಿಕೇಟೆಡ್‌ ಕೋವಿಡ್‌ ಹೆಲ್ತ್‌ ಕೇರ್‌ ತೆರೆಯಲಾಗಿದ್ದು, ಕೊರೊನಾ ಸೋಂಕಿತರು ನೆರೆಯ ಶಿಕಾರಿಪುರ, ಸಾಗರ ಅಥವಾ ಶಿವಮೊಗ್ಗಕ್ಕೆ ತೆರಳಬೇಕಿದ್ದ ಸ್ಥಿತಿ ತಪ್ಪಿಸಿದಂತಾಗಿದೆ. ಜತೆಗೆ ಅಲ್ಲಿಯೂ ಸಹ ಹೊರೆ ಕಡಿಮೆಯಾಗಿದೆ. ಪಟ್ಟಣದಲ್ಲಿ 110 ಜನ ಸಾಮರ್ಥ್ಯದ ಕೊರೊನಾ ಆರೈಕೆ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 70 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಮ ಆಹಾರದ ಜತೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಡಿಸಿಎಚ್‌ ಕೇಂದ್ರಕ್ಕೆ ಶೀಘ್ರದಲ್ಲಿಯೇ ತಜ್ಞ ವೈದ್ಯರ ನೇಮಕಕ್ಕಾಗಿ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿದೆ ಎಂದರು.

ಮುಖ್ಯ ರಸ್ತೆ ಅಗಲೀಕರಣ: ಪಟ್ಟಣದಲ್ಲಿ ಸುಮಾರು 15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆಯ ಅಗಲೀಕರಣ ಕಾರ್ಯವು ಕೇವಲ ಒಂದೇ ವಾರದಲ್ಲಿ ಆರಂಭವಾಗಲಿದೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿದ್ದು, ಈಬಗ್ಗೆ ಪಿಡಬುಡಿ ಮತ್ತು ಪುರಸಭೆಗೆ ಮಾಹಿತಿ ತಲುಪಿದೆ. ಮುಖ್ಯ ರಸ್ತೆಯ ನಿವಾಸಿಗಳಿಗೆ ಪರಿಹಾರ ನೀಡುವ ಕಾರ್ಯವು ನಡೆದಿದೆ ಎಂದರು.

ಕಿಟ್‌ ವಿತರಣೆ: ಕೊರೊನಾದಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅನೇಕರು ಉದ್ಯೋಗ ವಂಚಿತರಾಗಿದ್ದಾರೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸೇವಾ ಭಾರತಿ ವತಿಯಿಂದ ಸಮಸ್ಯೆಗೆ ಸಿಲುಕಿರುವ ವರ್ಗದವರನ್ನು ಗುರುತಿಸಿ ಜೂ.3ರಿಂದ ಕಿಟ್‌ ವಿತರಿಸುವ ಕಾರ್ಯವು ಹಮ್ಮಿಕೊಳ್ಳಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್‌, ಉಪಾಧ್ಯಕ್ಷ ಮಧುರಾಯ್‌ ಜಿ. ಶೇಟ್‌, ಪ್ರಮುಖರಾದ ದಿವಾಕರ ಭಾವೆ, ದೇವೇಂದ್ರಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next