Advertisement

ಶಿವಮಣಿ ಈಗ ಜಾಫ‌ರ್‌ ಪನಾಹಿ

10:24 AM Jan 27, 2018 | |

ಇರಾನ್‌ನ ಜನಪ್ರಿಯ ನಿರ್ದೇಶಕ ಜಾಫ‌ರ್‌ ಪನಾಹಿ ಬಗ್ಗೆ ಗೊತ್ತಿರಬಹುದು. “ಟ್ಯಾಕ್ಸಿ’, “ಕ್ರಿಮ್ಸನ್‌ ಗೋಲ್ಡ್‌’, “ದಿ ಸರ್ಕಲ್‌’, “ದಿ ವೈಟ್‌ ಬಲೂನ್‌’ ಮುಂತಾದ ಅಪರೂಪದ ಮತ್ತು ಕ್ರಾಂತಿಕಾರಕ ಚಿತ್ರಗಳನ್ನು ನಿರ್ದೇಶಿಸಿದವರು ಅವರು. ಅಷ್ಟೇ ಅಲ್ಲ, ತಮ್ಮ ಕ್ರಾಂತಿಕಾರಕ ನಿಲುವುಗಳಿಂದ ಜೈಲು ಪಾಲಾದವರು. ಈಗ್ಯಾಕೆ ಅವರ ಮಾತು ಎಂದರೆ, ಇರಾನ್‌ನ ವ್ಯವಸ್ಥೆಯ ಕುರಿತು ಒಂದು ನಾಟಕ ರೂಪುಗೊಳ್ಳುತ್ತಿದ್ದು, ಆ ನಾಟಕದಲ್ಲಿ ನಟ-ನಿರ್ದೇಶಕ ಶಿವಮಣಿ, ಜಾಫ‌ರ್‌ ಪನಾಹಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಹೌದು, “ಸುಗಂಧದ ಸೀಮೆಯಾಚೆ’ ಎಂಬ ನಾಟಕ ರೂಪುಗೊಳ್ಳುತ್ತಿದ್ದು, ಇದನ್ನು “ಜಟ್ಟ’ ಗಿರಿರಾಜ್‌ ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ತಾಲೀಮುಗಳು ಜೋರಾಗಿ ನಡೆಯಲಿದ್ದು, ಫೆಬ್ರವರಿ 10ರಂದು ಹನುಮಂತನಗರದ ಕೆ.ಎಚ್‌. ಕಲಾಸೌಧದಲ್ಲಿ ಮೊದಲ ಪ್ರದರ್ಶನ ಕಾಣುತ್ತಿದೆ. ಆ ನಂತರ ಮುಂದಿನ ತಿಂಗಳಲ್ಲೇ ಇನ್ನಷ್ಟು ಬಾರಿ ಈ ನಾಟಕ ಪ್ರದರ್ಶನವಾಗಲಿದೆ. ಗಿರಿರಾಜ್‌ ಅವರು ಒಂದಿಷ್ಟು ಹೊಸ ಹುಡುಗರನ್ನಿಟ್ಟುಕೊಂಡು ಈ ನಾಟಕವನ್ನು ಮಾಡುತ್ತಿದ್ದಾರೆ.

ಅದೊಂದು ಸಮಕಾಲೀನ ನಾಟಕವಷ್ಟೇ ಅಲ್ಲ, ಅದರಲ್ಲಿ ಜಾಫ‌ರ್‌ ಪನಾಹಿ ಸಹ ಒಂದು ಪಾತ್ರವಾಗಿ ಬರುತ್ತಾರಂತೆ. ಆ ಪಾತ್ರವನ್ನು ಯಾರಿಂದ ಮಾಡಿಸಬಹುದು ಎಂದು ಯೋಚಿಸುತ್ತಿದ್ದಾಗ, ಹೊಳೆದಿದ್ದು ಶಿವಮಣಿ. ಇದಕ್ಕೂ ಮುನ್ನ ಗಿರಿ ಹಾಗೂ ಶಿವಮಣಿ ಇಬ್ಬರೂ “ಟೈಗರ್‌ ಗಲ್ಲಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಗಿರಿರಾಜ್‌ ತಂದೆಯಾಗಿ ಕಾಣಿಸಿಕೊಂಡರೆ, ಶಿವಮಣಿ ಮಗನಾಗಿ ಅಭಿನಯಿಸಿದ್ದರು. ಈಗ ಗಿರಿರಾಜ್‌ ನಿರ್ದೇಶನ ನಾಟಕವೊಂದರಲ್ಲಿ ಶಿವಮಣಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

“ಈ ನಾಟಕದಲ್ಲಿ ಸಮಕಾಲೀನ ವಿಷಯಗಳ ಕುರಿತಾಗಿ ಹೇಳಲಾಗುತ್ತಿದೆ. ಮತಾಂಧತೆ, ದಬ್ಟಾಳಿಕೆ ಮುಂತಾದ ಹಲವು ವಿಷಯಗಳ ಬಗ್ಗೆ ನಾಟಕವಾಗುತ್ತಿದ್ದು, ಇಲ್ಲಿ ಜಾಫ‌ರ್‌ ಪನಾಹಿ ಅವರ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಬೇರೆ ತರಹದ ಸಾಹಸ. 82-86ರವರೆಗೂ ಕೆಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಿದೆ. ಬಹಳ ವರ್ಷಗಳ ನಂತರ ಮತ್ತೆ ರಂಗಭೂಮಿಗೆ ವಾಪಸ್ಸಾಗುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಶಿವಮಣಿ.

Advertisement

Udayavani is now on Telegram. Click here to join our channel and stay updated with the latest news.

Next