ಬೆಂಗಳೂರು: ಪಿಯುಸಿ,ಕೆಪಿಎಸ್‌ಸಿ, ಸರ್ಕಾರಿ ಹುದ್ದೆಗಳು, ಎಂಜನಿಯರಿಂಗ್ ಪರೀಕ್ಷೆಗಳು ಸೇರಿ ಎಲ್ಲ ಮಾದರಿಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಸ್ವಾಮೀಜಿ (60) ಮಂಗಳವಾರ ತುಮಕೂರಿನಲ್ಲಿ ಮೃತಪಟ್ಟಿದ್ದಾನೆ.
ತುಮಕೂರಿನ ಕೊರಟಗೆರೆಯಲ್ಲಿ ಕೊರೊನಾ ಸೋಂಕಿಗೊಳಗಾಗಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಸೇರಿ ರಾಜ್ಯದ ಕೆಲ ಪೊಲೀಸ್ ಠಾಣೆ ಗಳಲ್ಲಿ ಈತನ ವಿರುದ್ಧ25ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಹತ್ತಾರು ಬಾರಿ ಜೈಲು ಸೇರಿದರೂ, ಜಾಮೀನು ಪಡೆದು ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಜೈಲು ಸೇರುತ್ತಿದ್ದ. 2019ರಲ್ಲಿ ಸಿಸಿಬಿ ಪ್ರಕರಣದಲ್ಲಿ ಶಿವಕುಮಾರಯ್ಯನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಅನಂತರ ಕಾನ್ ಸ್ಟೇಬಲ್ ಒಬ್ಬರಿಗೆ ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡುವುದಾಗಿ ಲಕ್ಷಾಂತರ ರೂ.ಪಡೆದು ವಂಚಿಸಿದ್ದ.
ಪ್ರಶ್ನೆ ಪತ್ರಿಕೆ ಸೋರಿಕೆ ಪಿತಾಮಹ,ಕಿಂಗ್‌ಪಿನ್ ಎಂದೆಲ್ಲ ಕುಖ್ಯಾತಿಗಳಿಸಿಕೊಂಡಿದ್ದ ಈತ ದ್ವೀತಿಯ ಪಿಯುಸಿಯ ರಸಾಯನಿಕ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಬಾರಿಗೆ 2016ರಲ್ಲಿ ಪೊಲೀಸರು ಬಂಧಿಸಿ ದ್ದರು. ಈತ ಕೇವಲ ಪಿಯುಸಿ ಪ್ರಶ್ನೆ ಪತ್ರಿಕೆ ಅಲ್ಲದೆ ಕೆಪಿಎಸ್ ಸಿ ಆಯೋಜಿಸುವ ಕಾನ್‌ಸ್ಟೇಬಲ್, ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಆಭ್ಯರ್ಥಿಗಳಿಂದ ಲಕ್ಷಾಂತರ ರೂ. ಹಣಗಳಿಸುತ್ತಿದ್ದ. ಈತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ಅನಂತರ ಸಿಐಡಿಗೆ ಹಸ್ತಾಂತರವಾ ಗಿತ್ತು. ಈತನ ಪತ್ತೆಗಾಗಿ ಅಂದಿನ ಸರ್ಕಾರ50 ಸಾವಿರ ರೂ.ಘೋಷಿಸಿತ್ತು. ತಲೆ ಮರೆಸಿಕೊಂಡಿದ್ದ ಶಿವಕುಮಾರ್ ನನ್ನು ಅಂತಿ ಮವಾಗಿ ನಗರದ ಗಾರ್ವೆ ಭಾವಿಪಾಳ್ಯ ಬಳಿ ಸಿಐಡಿ ಪೊಲೀಸರು ಬಂಧಿಸಿದ್ದರು.
25ಕ್ಕಿಂತ ಹೆಚ್ಚುಕೇಸ್ ದಾಖಲು: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಆಭ್ಯರ್ಥಿಗಳಿಗೆ ಮಾರಾಟ ಅಕ್ರಮ ಸಂಪಾದನೆ ದಾರಿ ಕಂಡುಕೊಂ ಡಿದ್ದ ಈತನ ಬೆಂಗಳೂರು, ತುಮಕೂರು ಹಾಗೂ ಉತ್ತರಕರ್ನಾ ಟಕ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 25ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಮೂಲತಃ ತುಮಕೂರಿನವನಾದರೂ ನಗರದ ನಂದಿನಿ ಲೇಔಟ್ ಮನೆಯೊಂದರಲ್ಲಿ ವಾಸವಾಗಿದ್ದ. ನಿವೃತ್ತ ಉಪನ್ಯಾಸಕನಾಗಿದ್ದ ಈತ ಟ್ಯೂಟುರಿಯಲ್ ನಡೆಸುತ್ತಾ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆಪತ್ರಿಕೆ ಮಾಡಿಸುತ್ತಿದ್ದ. ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಚಯಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಗೊತ್ತಿರುವ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡುತ್ತಿದ್ದನು.