Advertisement
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಶಿವನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಡಾ| ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಕಾಲವು ಎರಡನೇ ಬಸವ ಯುಗ ಆಗಿತ್ತು. 900 ವರ್ಷಗಳ ನಂತರ ಕಾಯಕ, ದಾಸೋಹ ಸೇರಿದಂತೆ ಬಸವಾದಿ ಶರಣರ ತತ್ವಗಳನ್ನು ಮತ್ತೆ ಚಾಚೂತಪ್ಪದೇ ಆಚರಣೆಗೆ ತಂದ ಶ್ರೇಯ ಅವರದ್ದಾಗಿತ್ತು ಎಂದು ಹೇಳಿದರು.
Related Articles
Advertisement
ಲಿಂಗಾಯತ ಮಹಾಮಠದ ಪ್ರಭುದೇವರು ಸಮ್ಮುಖ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪೂರ, ಪ್ರಮುಖರಾದ ಸಿದ್ಧಾರೆಡ್ಡಿ ನಾಗೂರಾ, ನಾಗಭೂಷಣ ಹುಗ್ಗೆ, ಡಾ| ಸಿ. ಆನಂದರಾವ್, ನಾಗಶೆಟ್ಟಿ ಧರಂಪೂರ, ಶಿವಪುತ್ರ ಪಟಪಳ್ಳಿ, ಬಾಲಾಜಿ ಬಿರಾದಾರ, ಸಂಜುಕುಮಾರ ಜಮಾದಾರ್, ವಿನೋದ ಪಾಟೀಲ ಚಾಂಬೋಳ, ಸಂಜುಕುಮಾರ ಹುಣಜಿ, ಸಾಯಿಕುಮಾರ ಅಷ್ಟೂರು ಇದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು.