Advertisement
ರಾದ ಡಚ್ಚರು ಕೆಳದಿ ಅರಸರಿಗೆ ಆಗಾಗ್ಗೆ ಕಿರು ಕುಳ ನೀಡುತ್ತಿದ್ದರು. ಒಂದು ಮಾಹಿತಿ ಪ್ರಕಾರ ಸೋಮಶೇಖರನೇ ವಿದೇಶೀಯರ ಕಿರುಕುಳ ತಡೆ ಯಲಾಗದೆ ಶಿವಾಜಿಗೆ ಮನವಿ ಮಾಡಿದ್ದನೆಂದೂ ತಿಳಿದುಬರುತ್ತದೆ.
Related Articles
Advertisement
ಸರ್ಜಿಕಲ್ ಸ್ಟ್ರೈಕ್ ಮಾದರಿ: ಆಗ ಅಲ್ಲಲ್ಲಿ ಇದ್ದ ಮರಳು ದಿಬ್ಬಗಳು, ಬಂಡೆಗಳು ನೌಕೆಗಳನ್ನು ಚಲಾಯಿಸಲು ಅಡ್ಡಿಯಾಗಿದ್ದವು ಎನ್ನುವಾಗ ಹಟ್ಟಿಕುದ್ರು, ಹೇರಿಕುದ್ರು, ಉಪ್ಪಿನಕುದ್ರು ವಲ್ಲದೆ ಹಲವು ದ್ವೀಪಗಳಿದ್ದವು ಎಂಬ ಉಲ್ಲೇಖ ಬರುತ್ತದೆ. ಹೀಗಾಗಿ ಅಮಾವಾಸ್ಯೆ ಸಮಯದಲ್ಲಿ ಬೆಳ್ಳಂಬೆಳಗ್ಗೆ (ಭರತ=ನೀರಿನ ಏರಿಕೆ ಹೆಚ್ಚಿದ್ದಾಗ) ಶಿವಾಜಿಯ ಸೈನ್ಯ ದಾಳಿ ನಡೆಸಿತ್ತು. ಬಳಿಕವೇ ಅಲ್ಲಿದ್ದವರಿಗೆ ತಿಳಿದದ್ದು. ಇದನ್ನು ಸರ್ಜಿಕಲ್ ಸ್ಟ್ರೈಕ್‌ಗೆ ಹೋಲಿಸ
ಬಹುದು. ಶಿವರಾತ್ರಿ ಸಮಯದಲ್ಲಿ ಗೋಕರ್ಣಕ್ಕೆ ಸಾರ್ವಜನಿಕರ, ವರ್ತಕರ ಜತೆ ಸಂಪತ್ತಿನ ಜಮಾವಣೆ ಯಾಗುವುದರಿಂದ ಶಿವಾಜಿ ಈ ಸಮಯವನ್ನು ಆಯ್ದು
ಕೊಂಡ ಎಂದು ತಿಳಿದು ಬರುತ್ತದೆ. ಒಂದು ಕೋಟಿ ಹೊನ್ನು, ಫೋರ್ಚು ಗೀಸರಿಗೆ ಅರಬ್ ರಾಷ್ಟ್ರಗಳಿಂದ ಬರುತ್ತಿದ್ದ ಕುದುರೆ ಗಳನ್ನೂ ಆತ ಕೊಂಡೊಯ್ದಿದ್ದ ಎನ್ನಲಾಗುತ್ತಿದೆ. ಬಸ್ರೂರು ಬಳಿಕ ಭಟ್ಕಳ, ಹೊನ್ನಾವರದ ಮೇಲೂ ದಾಳಿ ನಡೆದಿದೆ ಎನ್ನಬಹುದಾದರೂ ದಾಖಲೆಗಳಿಲ್ಲ. ಬಳಿಕ ಗೋಕರ್ಣಕ್ಕೆ (ಫೆ. 18?) ಹೋಗಿ ಪೂಜೆ ನಡೆಸಿದ. ವಾಪಸು ಹೋಗುವಾಗ ಅಂಕೋಲಕ್ಕೆ ಭೂಮಾರ್ಗದಲ್ಲಿ ತೆರಳಿದ. ಒಂದೆಡೆ ಸಮುದ್ರ ಮಾರ್ಗದಲ್ಲಿ ಸಂಪತ್ತಿನ ರವಾನೆ, ಇನ್ನೊಂದೆಡೆ 12 ಸಣ್ಣ ನೌಕೆಗಳು ನದಿ ತಟಾಕದಲ್ಲಿ ಶಿವಾಜಿ ಜತೆಗೆ ಹೋಗಿದ್ದವು. ಹೋಳಿ ಹಬ್ಬ ಮುಗಿದು ಕಾರವಾರಕ್ಕೆ ಫೆ. 22ರಂದು ತೆರಳಿ ಮರುದಿನವೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ.
ಮೊದಲ ಇನ್ನಿಂಗ್ಸ್ :
ಶಿವಾಜಿ ಮೊದಲ ಭರ್ಜರಿ ಇನ್ನಿಂಗ್ಸ್ ಆರಂಭವಾದದ್ದೇ ಕರ್ನಾಟಕದ ಕರಾವಳಿಯಿಂದ ಎನ್ನು ವುದು ಮುಖ್ಯವಾಗುತ್ತದೆ. ಶಿವಾಜಿ ಜನಿಸಿದ್ದು ಫೆಬ್ರವರಿಯಲ್ಲಿ (19-02-1630), ಬಸ್ರೂರು ದಾಳಿ ನಡೆದದ್ದೂ ಫೆಬ್ರವರಿಯಲ್ಲಿ (ದಿನಾಂಕಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ) ಎನ್ನುವುದು ಇನ್ನೊಂದು ಕುತೂಹಲವನ್ನು ತರಿಸುತ್ತದೆ. ಬಸ್ರೂರು ದಾಳಿ ನಡೆದು 355 ವರ್ಷಗಳು ಕಳೆದರೂ ಇತಿಹಾಸವನ್ನು ಮರೆಯಲಾಗದು.
ಸ್ಥಳೀಯರ ಸಹಕಾರ, ವಿದೇಶೀಯರ ಸೋಲು :
ಬಸ್ರೂರು ದಾಳಿಯನ್ನು ನಡೆಸಿದ್ದು ಪರದೇಶೀ ವರ್ತಕರನ್ನು ಶಿಕ್ಷಿಸುವ ಇರಾದೆಯಿಂದ. ಅಪರಿಚಿತ ಸ್ಥಳದ ಮೇಲೆ ಸಮುದ್ರ ಮಾರ್ಗದಲ್ಲಿ ಬಂದು ದಾಳಿ ನಡೆಸಬೇಕಾದರೆ, ಸುರಕ್ಷಿತವಾಗಿ ಹಿಂದಿರುಗಬೇಕಾದರೆ ಸ್ಥಳೀಯರ ಸಹಕಾರ ದೊರಕಿತ್ತು ಎಂಬ ಸುಳಿವೂ ಸಿಗುತ್ತದೆ. ಬಳಿಕ ಶಿವಾಜಿಗೆ ತಮ್ಮದೇ ಆದ ನೌಕಾಬಲದ ಮೇಲೆ ಆತ್ಮವಿಶ್ವಾಸ ಹೆಚ್ಚಿತು, ವಿದೇಶೀಯರ ವ್ಯಾಪಾರಿ ಏಕಸ್ವಾಮ್ಯ ಮುರಿಯಿತು. ಇದು ಶಿವಾಜಿ ಕೈಗೊಂಡ ನೌಕಾ ಸಾಹಸಗಳಲ್ಲಿ ಮುಖ್ಯವಾದುದು ಮತ್ತು ಇದು ಇಲ್ಲಿ ನಡೆಸಿದ ಪ್ರಥಮ ಮತ್ತು ಕೊನೆಯ ದಾಳಿ ಎಂದು ಪ್ರಸಿದ್ಧ ಇತಿಹಾಸಕಾರ ಡಾ| ಕೆ.ಜಿ. ವಸಂತ ಮಾಧವ ಅವರು ಗ್ರಂಥಗಳಲ್ಲಿ ಬೆಟ್ಟು ಮಾಡಿದ್ದಾರೆ.
ವಿಭಿನ್ನ ದಾಖಲೆಗಳು :
ಮೂರು ಯುದ್ಧ ನೌಕೆಗಳೊಂದಿಗೆ ದಾಳಿ ಮಾಡಿದ ಶಿವಾಜಿ ಫೆ. 13ರಂದು ಗೋಕರ್ಣಕ್ಕೆ ಬಂದನೆಂದು ಬ್ರಿಟಿಷರ ದಾಖಲೆಗಳು ತಿಳಿಸುತ್ತವೆ. “ಮಾರ್ಚ್ 3ರಂದು ಬಸ್ರೂರಿನ ಮೇಲೆ ದಾಳಿ ಮಾಡಿದಾಗ ಆಶ್ಚರ್ಯವಾಯಿತು’ ಎಂದು ಡಚ್ಚರ ದಾಖಲೆ ತಿಳಿಸುತ್ತದೆ. ಪುಣೆ ಡೆಕ್ಕನ್ ವಿ.ವಿ. ಸಂಶೋಧನೆ ಇನ್ನೊಂದು ತೆರನಾದ ದಿನಾಂಕಗಳನ್ನು ಸಾರುತ್ತದೆ.
“ಫೋರ್ಚುಗೀಸರು ಮತ್ತು ಡಚ್ಚರ ಪೈಪೋಟಿ, ಪ್ರಭಾವವನ್ನು ಹತ್ತಿಕ್ಕುವುದೂ ಶಿವಾಜಿಯ ಉದ್ದೇ ಶಗಳಲ್ಲಿ ಒಂದಾಗಿತ್ತು. ವಿದೇಶೀಯರಿಂದ ಕೊಳ್ಳೆ ಹೊಡೆದ ಸಂಪತ್ತನ್ನು ಸಾಮ್ರಾಜ್ಯ ಸ್ಥಾಪನೆಗೆ ಬಳಸಿದ ಎನ್ನಬಹುದು’ ಎನ್ನುತ್ತಾರೆ ಇತಿಹಾಸತಜ್ಞ ಡಾ| ಬಿ. ಜಗದೀಶ ಶೆಟ್ಟಿ.
ಮಟಪಾಡಿ ಕುಮಾರಸ್ವಾಮಿ