Advertisement

ಹುಬ್ಬಳ್ಳಿ : ತುಂಡಾಗಿ ಕಳಚಿ ಬಿದ್ದ ಶಿವಾಜಿ ಪ್ರತಿಮೆ

05:46 PM Mar 23, 2021 | Team Udayavani |

ಹುಬ್ಬಳ್ಳಿ : ಇಲ್ಲಿನ ಪಾಲಿಕೆ ಕಚೇರಿಯ ಪಕ್ಕದ ಚಿಟಗುಪ್ಪಿ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹದಾಕಾರದ ಛತ್ರಪತಿ ಶಿವಾಜಿ ಮೂರ್ತಿ ತುಂಡಾಗಿ ಕಳಚಿ ಬಿದ್ದಿದೆ.

Advertisement

ಕಳೆದ ಮೂರು ವರ್ಷಗಳ ಹಿಂದೆ ಛತ್ತೀಸಘಡದಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆ ವತಿಯಿಂದ ತಯಾರಿಸಿ ಇಲ್ಲಿಗೆ ತಂದು ಪ್ರತಿಷ್ಠಾಪಿಸಲಾಗಿತ್ತು. ಇದಕ್ಕಾಗಿ 17.5 ಲಕ್ಷ ರೂ ಖರ್ಚಾಗಿತ್ತು. ಕುದುರೆಯ ಮೂರು ಕಾಲುಗಳು ತುಂಡಾಗಿವೆ. ಶಿವಾಜಿ ಮೂರ್ತಿ ತಲೆ, ಖಡ್ಗ ಸೇರಿದಂತೆ ಸಂಪೂರ್ಣ ಜಖಂಗೊಂಡಿದೆ. ತುಂಡಾಗಿ ಬಿದ್ದಿರುವ ಮೂರ್ತಿಗೆ ಪಾಲಿಕೆ ಸಿಬ್ಬಂದಿ ಪ್ಲಾಸ್ಟಿಕ್ ಸುತ್ತಿದ್ದಾರೆ.

ಮೂರ್ತಿ ಕಂಚಿನದ್ದಾಗಿದೆ ಎಂದು ಹೇಳಲಾಗುತ್ತಿದ್ದು, ಸುಮಾರು ಐದಾರು ತುಂಡುಗಳಾಗಿವೆ. ಸ್ಥಳಕ್ಕೆ ಮರಾಠ ಸಮಾಜದ ಮುಖಂಡರು ಆಗಮಿಸಿದ್ದು, ಮೂರ್ತಿ ಗುಣಮಟ್ಟದ ಕುರಿತು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಡುವುದಾಗಿ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದಾರೆ.

ಪ್ರತಿಷ್ಠಾಪನೆ ಮಾಡುವಾಗಲೇ ವೈಜ್ಞಾನಿಕವಾಗಿ ಕೂರಿಸದ ಹಿನ್ನೆಲೆಯಲ್ಲಿ ಮೂರ್ತಿ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next