Advertisement

ಹುಟ್ಟಿನಿಂದಲೇ ಶಿವಾಜಿ ಮಹಾರಾಜ್ ಶೂರ

07:29 AM Feb 20, 2019 | |

ರಾಮನಗರ: ಛತ್ರಪತಿ ಶಿವಾಜಿ ಹುಟ್ಟಿನಿಂದಲೇ ಶೂರ. ಭಾರತೀಯರಿಗೆ ಸ್ಪೂರ್ತಿಧಾತ ಎಂದು ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ನಗರಸಭೆ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ 392ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಿವಾಜಿ ಅಪ್ರತಿಮ ಶೂರನಾಗಿದ್ದುಕೊಂಡೇ ಶಾಂತಿ ಬಯಸಿದ ಮಾನವತವಾದಿ, ಸುತ್ತಮುತ್ತ ಶತ್ರುಗಳೇ ಆವರಿಸಿದ್ದರೂ, ತನ್ನ ಶ್ರಮದಿಂದಲೇ ರಾಜ್ಯ ಸಂಪಾದನೆ ಮಾಡಿ ವಿಸ್ತರಿಸಿದ ಎಂದರು. ಮರಾಠ ಸಮುದಾಯದ ಬಗ್ಗೆ ಮಾತನಾಡಿದ ಅವರು, ದೇಶ ಹಾಗೂ ಧರ್ಮ ರಕ್ಷಣೆಗೆ ಮಹತ್ವದ ಕೊಡಗೆಯನ್ನು ಮರಾಠರು ನೀಡಿದ್ದಾರೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮರಾಠರು ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದರು. 

ಯುದ್ಧದ ದುಷ್ಪರಿಣಾಮ ಎದುರಿಸುವುದು ಕಷ್ಟ: ಯುದ್ಧ ಮಾಡುವುದು ಸುಲಭ, ಆದರೆ, ಅದರ ದುಷ್ಪರಿಣಾಮಗಳನ್ನು ಎದುರಿಸುವುದು ಕಷ್ಟ ಎಂದು ಸಿ.ಎಂ.ಲಿಂಗಪ್ಪ ಹೇಳಿದರು. ಯುದ್ಧ ನಡೆಸುವ ದೇಶಗಳು ಸಾವು ನೋವುಗಳನ್ನು ಅನುಭವಿಸಬೇಕಾಗುತ್ತದೆ. ಪಾಕಿಸ್ತಾನ ರಾಷ್ಟ್ರ ತಮ್ಮೊಟ್ಟಿಗೆ ಚೀನಾ ದೇಶ ಇದೆ ಎಂದು ಕೊಂಡಿದ್ದಾರೆ. ಆದರೆ, ಈ ಬೆಂಬಲ ಎಲ್ಲಾ ಸಂದರ್ಭಗಳಲ್ಲಿಯೂ ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಪಾಕಿಸ್ತಾನ ರಾಷ್ಟ್ರ ಅರಿಯಬೇಕು.

ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಹಾಗೂ ಸೈನಿಕರ ಬೆಂಬಲ ಇದ್ದವರು ಪ್ರಧಾನಿಯಾಗಲು ಸಾಧ್ಯ. ಅಂತಹ ಧಾರುಣ ಪರಿಸ್ಥಿತಿ ಆ ರಾಷ್ಟ್ರದಲ್ಲಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷತ್ರಿಯ ಮರಾಠರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಎಂದು ಕರೆ ನೀಡಿದರು. ಶಿವಾಜಿ ದೇಶದ ಹೆಮ್ಮಯ ಪುತ್ರ ಎಂದರು. ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಮಾತನಾಡಿ, ಗೊರಿಲ್ಲಾ ಮಾದರಿಯ ಯುದ್ಧಕ್ಕೆ ಶಿವಾಜಿ ಖ್ಯಾತರಾಗಿದ್ದರು. ಶಿವಾಜಿ ಕಟ್ಟಿಸಿದ ಕೋಟೆಯ ಬಗ್ಗೆ ವಿವರಿಸಿದರು.

ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸರಾವ್‌ ನಲಿಗೆ ಮಾತನಾಡಿ, ಕ್ಷತ್ರಿಯ ಮರಾಠ ಸೇವಾ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ಇಂದು ಉದಾರೀಕರಣ, ಖಾಸಗೀಕರಣ, ನಗರೀಕರಣಗಳಿಂದಾಗಿ ಈ ಸಮುದಾಯದವರು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು. 

Advertisement

ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌ ಮಾತನಾಡಿ ಶಿವಾಜಿ ಮಹಾರಾಜರು ಧರ್ಮ ಮತ್ತು ಸಂಸ್ಕೃತಿ ಉಳಿಸಿದ್ದಾರೆ ಎಂದರು. ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ನಂಜುಂಡ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದರು. ತಹಶೀಲ್ದಾರ್‌ ರಾಜು, ನಗರಸಭೆ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಗಳಾ, ಸದಸ್ಯರಾದ ಇಂದಿರಮ್ಮ, ಬಿ.ನಾಗೇಶ್‌, ಎ. ರವಿ,

ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಪದಾಧಿಕಾರಿಗಳಾದ ಎಲ್‌.ನಾರಾಯಣರಾವ್‌ ಚವ್ಹಾಣ್‌, ನಾರಾಯಣರಾವ್‌ ಮಾಂಗಲೆ, ಬಿ.ಎಂ.ಶಂಕರರಾವ್‌ ಚವ್ಹಾಣ್‌, ಜಿ.ರಾಮಕೃಷ್ಣರಾವ್‌ ಅಡ್ವೇಕರ್‌, ಶಿವಾಜಿರಾವ್‌ ಚವ್ಹಾಣ್‌, ಪುರುಷೋತ್ತಮ್‌ರಾವ್‌ ಸೂರ್ಯವಂಶೆ, ಸಿಧ್ದೋಜಿರಾವ್‌ ಮಾಂಗಲೆ, ಯಶವಂತರಾವ್‌ ಗಡದೆ, ನಾಗೇಂದ್ರರಾವ್‌ ಸಿಂಧೆ, ಎಚ್‌.ವಿ. ಮುಕುಂದರಾವ್‌ ಮಾಸಾಳ್‌, ಶಿವಾಜಿರಾವ್‌ ಜಗತಾಪ್‌, ಶ್ರೀನಿವಾಸರಾವ್‌ ಜಾಧವ್‌,

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ನ ಪದಾಧಿಕಾರಿಗಳಾದ ರಾಮಕೃಷ್ಣರಾವ್‌ ಅಡ್ವೇಕರ್‌, ಸೋಮಶೇಖರ್‌ರಾವ್‌ ಕಾಂಬ್ಳೆ, ತುಕಾರಾಮ್‌ರಾವ್‌ ಖಾಂಡೆ, ದೇವೇಂದ್ರ ರಾವ್‌ ಕಾಳೆ, ಆರ್‌.ಕೆ.ಬಾಬುರಾವ್‌ ಕಾಂಬ್ಳೆ, ಲಕ್ಷ್ಮಣರಾವ್‌ ಮಾನೆ, ಷಣ್ಮಖರಾವ್‌ ಸಾಳಂಕೆ, ಶಂಕರ್‌ರಾವ್‌ ವಳಕುಂದೆ, ಮಾಧುರಾವ್‌ ಖಾಂಡೆ, ವೆಂಕೋಬರಾವ್‌ ಚವ್ಹಾಣ್‌, ಸಿಂಧು ವಾಯ್ಕರ್‌, ಹರೀಶ್‌ ಕುಮಾರ್‌ ಸೂರ್ಯವಂಶೆ, ಚಂದನ್‌ ಮೋರೆ, ಸಂಗೀತ ವಿದ್ವಾನ್‌ ಶಿವಾಜಿರಾವ್‌, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್‌ ಇದ್ದರು.

ಗಾಯಕ ವಿ.ಲಿಂಗರಾಜು ನಾಡಗೀತೆ, ರೈತಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಶಿಕ್ಷಕ ಶಿವಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಿಂದ ಮುಖ್ಯರಸ್ತೆಗಳಲ್ಲಿ ಸಾಗಿ ಅಂಬೇಡ್ಕರ್‌ ಭವನ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next