Advertisement
ತುಳು ರಂಗಭೂಮಿಯಲ್ಲಿ ಯಾರ ಊಹೆಗೂ ನಿಲುಕದೆ ಕ್ಷಿಪ್ರ ಸಮಯದಲ್ಲಿ ದಾಖಲೆಯ ಪ್ರದರ್ಶನದ ಮೂಲಕ ತುಳುನಾಡಿನಾದ್ಯಂತ ಮನೆಮಾತಾದ ನಾಟಕ “ಶಿವದೂತೆ ಗುಳಿಗೆ’. ತುಳು ರಂಗಭೂಮಿಯ ನಿಗದಿತ ಚೌಕಟ್ಟನ್ನು ಮೀರಿ, ಕಾಮಿಡಿ ಲೆಕ್ಕಾಚಾರವನ್ನೂ ಬದಿಗಿರಿಸಿ ವಿಜಯ್ ಕುಮಾರ್ ಕೊಡಿಯಾಲಬೈಲು ನಿರ್ದೇಶನದಲ್ಲಿ ಸೃಷ್ಟಿಯಾದ “ಶಿವದೂತೆ ಗುಳಿಗೆ’ ರೋಮಾಂಚನಗೊಳಿಸಿದ ಬಗೆ ಅನನ್ಯ.
ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಹುಟ್ಟು-ಬದುಕು, ಶಕ್ತಿಯ ನೆಲೆಯನ್ನು ತುಳುರಂಗಭೂಮಿಯ ಪರಿಧಿಯಲ್ಲಿ ನಿರೀಕ್ಷೆಗೂ ಮೀರಿದ ಸ್ವರೂಪದಲ್ಲಿ ಪ್ರದರ್ಶನ ನೀಡಿದ ಬಗೆ ಅದ್ವಿತೀಯ. ಹಿಂದೆ ಯಕ್ಷಗಾನದಲ್ಲಿ “ಸೀನು ಸೀನರಿ’ ಎಂಬ ಪರಿಕಲ್ಪನೆ ಬಹುದೊಡ್ಡ ಸುದ್ದಿಯಾದ ಮಾದರಿಯಲ್ಲಿಯೇ ತುಳು ರಂಗಭೂಮಿಯಲ್ಲಿ ನಾನಾ ಬಗೆಯ ಸೀನು ಸೀನರಿ, ಸೊಗಸಾದ ಸೆಟ್‌ನಲ್ಲಿ ಈ ನಾಟಕ ರೂಪಿಸಿರುವ ಶೈಲಿ ಅದ್ಭುತ, ರೋಮಾಂಚಕ. ಶಿವಪಾರ್ವತಿ ವಿರಾಜಮಾನರಾಗುವ ಕೈಲಾಸ ಪರ್ವತ, ಶೇಷಶಯನ ವಿಷ್ಣುವಿನ ಕ್ಷೀರಸಾಗರವನ್ನು ಬಿಂಬಿಸುವ ದೃಶ್ಯಗಳು, ನೆಲವುಲ್ಲ ಸಂಕೆಯೆ ಅಬ್ಬರ ಇತ್ಯಾದಿ ಪರಿಕಲ್ಪನೆಗಳು ರಂಗ ವೇದಿಕೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
Related Articles
Advertisement
ತುಳುವ ಮಣ್ಣಿನ ಕಂಪು ಪಸರಿಸಿದ “ಗುಳಿಗ’!ಎ.ಕೆ. ವಿಜಯ್ ಕೋಕಿಲ ಅವರ ಸಂಗೀತ ರಂಗಾಸಕ್ತರ ಮನ ಸೆಳೆಯುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಧ್ವನಿಯಲ್ಲಿ ಮೂಡಿಬಂದ “ರೂಪೊಡು ಕರ್ಗಂಡ ಕರಿಯೆ.. ಶಿವದೂತೆ ಗುಳಿಗೆ..’ ಹಾಡು,ದೇವದಾಸ್ ಕಾಪಿಕಾಡ್ ಅವರ “ಆರತಿ.. ಆರತಿ.. ದೂಪೊದಾರತಿ’ ಹಾಡು, ರವೀಂದ್ರ ಪ್ರಭು, ಡಾ| ವೈಷ್ಣವಿ ನರಸಿಂಹ ಕಿಣಿ ಹಿನ್ನೆಲೆ ಗಾಯನ ಮತ್ತೆ ಮತ್ತೆ ಕೇಳಿಸುವಂತೆ ಮಾಡುತ್ತಿದೆ. ಕನ್ನಡ-ಮಲಯಾಳದಲ್ಲಿಯೂ “ಶಿವದೂತೆ ಗುಳಿಗೆ’!
ತುಳುರಂಗಭೂಮಿಯಲ್ಲಿ ಚರಿತ್ರೆ ಬರೆಯುವ ಸಾಹಸವನ್ನು ಶಿವದೂತೆ ಗುಳಿಗೆ ಮಾಡುತ್ತಿದೆ. ಬೇರೆ ಜಿಲ್ಲೆ, ರಾಜ್ಯದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಇದಕ್ಕಾಗಿ ನಾಟಕವನ್ನು ಕನ್ನಡ, ಕೇರಳ ಭಾಗಕ್ಕೆ ಮಲಯಾಳ ಭಾಷೆಗೆ ಬದಲಾಯಿಸಿ ಪ್ರದರ್ಶಿ ಸ ಲು ನಿರ್ಧರಿಸಲಾಗಿದೆ. ದುಬಾೖ ಸಹಿತ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಹೀಗಾಗಿ 500ನೇ ಪ್ರದರ್ಶನವನ್ನು ಅತೀ ಬೇಗನೆ ಮಾಡಲಿದ್ದೇವೆ. ಮುಂದೆ ಶಿವಾಜಿಯ ಜೀವನ ಆಧರಿತ “ಶಿವಾಜಿ’ ನಾಟಕ ಸಿದ್ಧವಾಗಲಿದೆ. “ಮಣಿಕಂಠ ಮಹಿಮೆ’ ಕೂಡ ಶೀಘ್ರದಲ್ಲಿ ಹೊಸ ಸ್ವರೂಪದಲ್ಲಿ ಸಿದ್ಧವಾಗಿದೆ.
– ವಿಜಯ್ ಕುಮಾರ್ ಕೊಡಿಯಾಲಬೈಲ್, ನಿರ್ದೇಶಕರು